ಸಿಹಿ ಆಸೆ ತೋರಿಸಿ ಆಗಂತುಕನಿಂದ ಬಾಲಕಿ ರೇಪ್

A 7-year-old girl was abducted and raped in Alwar, Rajasthan
ರಾಜಸ್ಥಾನ, ಮೇ.14: ಆ ಬಾಲಕಿಯ ಕಡೆಯವರು ಮದುವೆ ಮನೆಯಲ್ಲಿ ಬ್ಯುಸಿಯಾಗಿದ್ದರು. ಆಕೆಗಿನ್ನೂ 7 ವರ್ಷ ವಯಸ್ಸು, ಮದುವೆ ಛತ್ರದ ಹೊರಗಡೆ ಆಡುತ್ತಿದ್ದ ಮಗು ರಾತ್ರೋ ರಾತ್ರಿ ಕಾಣೆಯಾಗಿ ಬಿಟ್ಟಿತು. ಪೋಷಕರು ಸೇರಿದಂತೆ ನೆಂಟರಿಷ್ಟರು ರಾತ್ರಿ ಎಲ್ಲಾ ಹುಡುಕಾಟ ನಡೆಸಿದ ಮೇಲೆ ಮಾರನೇ ದಿನ ರಕ್ತಸಿಕ್ತ ದೇಹಹೊತ್ತು ಬಿದ್ದಿದ್ದು ಬಾಲಕಿಯನ್ನು ಪಕ್ಕದ ಜಮೀನಿನ ಪೊದೆಯಲ್ಲಿ ಕಂಡು ಎಲ್ಲರೂ ಹೌಹಾರಿದ್ದಾರೆ.

ಪುಣ್ಯಕ್ಕೆ ಬಾಲಕಿ ಉಸಿರಾಡುತ್ತಿದ್ದಳು ಆಸ್ಪತ್ರೆಗೆ ಸೇರಿಸಿ ಸಮಯಕ್ಕೆ ಸೂಕ್ತ ಚಿಕಿತ್ಸೆ ನೀಡಿದ್ದರಿಂದ ಬಚಾವಾದಳು. ಈ ನಡುವೆ ಬಾಲಕಿಯನ್ನು ಈ ದುಃಸ್ಥಿತಿಗೆ ನೂಗಿದ ಆಗುಂತಕನನ್ನು ಪೊಲೀಸರು ಹಾಗೂ ಗ್ರಾಮಸ್ಥರು ದಿನವೀಡಿ ಜಾಲಾಡಿ ಹಿಡಿದರು. ಈ ದುರ್ಘಟನೆಗೆ ಸಾಕ್ಷಿಯಾಗಿದ್ದು ರಾಜಸ್ಥಾನದ ಆಳ್ವರ್ ಜಿಲ್ಲೆಯ ಮಾತುಕಿ ಎಂಬ ಕುಗ್ರಾಮ.

7 ವರ್ಷ ವಯಸ್ಸಿನ ಬಾಲಕಿಯನ್ನು ರಾತ್ರಿ ವೇಳೆ ಮದುವೆ ಛತ್ರದಿಂದ ದುಷ್ಕರ್ಮಿಯೊಬ್ಬ ಹೊತ್ತೊಯ್ದ ಅತ್ಯಾಚಾರ ಎಸೆಗಿದ್ದ. ಬಾಲಕಿ ಮರ್ಮಾಂಗವನ್ನು ವಿರೂಪಗೊಳಿಸಿದ್ದಲ್ಲದೆ ದೇಹದ ಹಲವು ಕಡೆ ತೀವ್ರವಾಗಿ ಗಾಯಗೊಳಿಸಿದ್ದ. ಬಾಲಕಿಯನ್ನು ಅಲ್ಲೇ ಬಿಟ್ಟು ಓಡಿಹೋಗಿದ್ದ.

15 ವರ್ಷದ ತನ್ನ ಅಣ್ಣನ ಜೊತೆ ಗೋವಿಂದಪುರಿಗೆ ಮದುವೆಗೆ ಬಂದಿದ್ದ ಬಾಲಕಿ ಈಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ. ಮದುವೆಗೆ ಬಂದಿದ್ದ ಅತಿಥಿಗಳಿಗೆ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಉಳಿದುಕೊಳ್ಳಲು ಸ್ಥಳ ನೀಡಲಾಗಿತ್ತು. ಮದುವೆ ಛತ್ರದ ಬಳಿ ಆಡುತ್ತಿದ್ದ ಬಾಲಕಿ ಬಹುಶಃ ಸರ್ಕಾರಿ ಶಾಲೆ ಹತ್ತಿರ ಇರಬಹುದು ಎಂದು ಊಹಿಸಿದ ಆಕೆ ಅಣ್ಣ ಹಾಗೂ ಸಂಬಂಧಿಕರು ಆಕೆ ಇರುವಿಕೆ ಬಗ್ಗೆ ಹೆಚ್ಚಿಗೆ ತಲೆಕೆಡಿಸಿಕೊಂಡಿರಲಿಲ್ಲ.

ರಾಜಸ್ಥಾನದ ಕುಗ್ರಾಮದ ಜನತೆ ಘಟನೆಯನ್ನು ತೀವ್ರವಾಗಿ ಖಂಡಿಸಿ ಪೊಲೀಸ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಆರೋಪಿಗೆ ಕೂಡಲೇ ಶಿಕ್ಷೆ ವಿಧಿಸಿ ಇಲ್ಲವೆ ನಮ್ಮ ವಶಕ್ಕೆ ಒಪ್ಪಿಸಿ ಎಂದು ಕೂಗಾಡಿದ್ದಾರೆ. ಅದರೆ, ಕಾನೂನಿನ ಪ್ರಕಾರವೇ ಶಿಕ್ಷೆ ವಿಧಿಸಲಾಗುತ್ತೆ ತಾಳ್ಮೆ ಇರಲಿ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+