ಕಾಮಾಂಧನ ದಾಹಕ್ಕೆ ಸಿಕ್ಕಿದ್ದು 80 ವರ್ಷ ವೃದ್ಧೆ

41 ವರ್ಷ ಪ್ರಾಯದ ಕಾಮಾಂಧ ವ್ಯಕ್ತಿಯೊಬ್ಬ 80 ವರ್ಷ ವಯಸ್ಸಿನ ಮಹಿಳೆ ಮೇಲೆ ಅತ್ಯಾಚಾರ ಎಸಸಗಿದ್ದಾನೆ. ವಿಧವೆಯೂ ಆಗಿರುವ ವೃದ್ಧ ಮಹಿಳೆಯು ಜೀವನ್ಮರಣ ಹೋರಾಟದಲ್ಲಿದ್ದು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ. ಸೇಲಂ ಜಿಲ್ಲೆಯ ಮಲೈಯಕಾಡಿ ಎಂಬ ಪ್ರದೇಶದಲ್ಲಿ ತರಕಾರಿ ಮಾರುವ ಪಳನಿವೇಳ್ ಎಂಬ ವ್ಯಕ್ತಿಯೇ ಈ ದುಷ್ಕೃತ್ಯ ಎಸಗಿದ್ದಾನೆ ಎಂದು ತಿಳಿದು ಬಂದಿದೆ.
ಇಬ್ಬರು ಹೆಂಡಿರು ಮತ್ತು ನಾಲ್ವರು ಮಕ್ಕಳನ್ನು ಹೊಂದಿರುವ ಆರೋಪಿ ಪಳನಿವೇಳ್ ಶುಕ್ರವಾರ ಮಧ್ಯರಾತ್ರಿಯ ವೇಳೆ ನತದೃಷ್ಟ ವೃದ್ಧೆಯ ಮನೆಗೆ ತೆರಳಿ ಆಕೆಯಿಂದ ಕುಡಿಯಲು ನೀರು ಕೇಳಿದ್ದಾನೆ. ಆಕೆ ಹೊರಬರಲು ನಿರಾಕರಿಸಿದಾಗ ಆತ ಮನೆಯ ಒಳಗೆ ನುಗ್ಗಿ ಆಕೆಯ ಮರ್ಮಾಂಗವನ್ನು ಕಚ್ಚಿ ಆಕೆ ಮೇಲೆ ಅಮಾನುಷವಾಗಿ ಅತ್ಯಾಚಾರ ಎಸಗಿದ್ದಾನೆ. ಮಲೈಕಾಡಿಯ ಗೋಪಾಲಪುರಂ ಎಂಬ ಊರಿನಲ್ಲಿ ವೃದ್ಧ ಮಹಿಳೆ ಒಂಟಿಯಾಗಿ ವಾಸಿಸುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಅತ್ಯಾಚಾರಕ್ಕೊಳಗಾದ ವೃದ್ಧೆಗೆ ಕುಮಾರಮಂಗಲಂ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಚಿಕಿಸ್ತೆ ನೀಡಲಾಗಿದೆ ನಂತರ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ. ಅಕೆ ದೇಹಸ್ಥಿತಿ ಅತ್ಯಂತ ಗಂಭೀರವಿದೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.












Click it and Unblock the Notifications