ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಸಿಎಂ ಆಯ್ಕೆಗೆ ಮುಹೂರ್ತ ಫಿಕ್ಸ್

|
Google Oneindia Kannada News

 KPCC
ಬೆಂಗಳೂರು, ಮೇ 9 : ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಸಕಾಲದಲ್ಲಿ ಜಯಭೇರಿ ಬಾರಿಸಿರುವುದರಿಂದ ಕಾಂಗ್ರೆಸ್ ಹೈ ಕಮಾಂಡ್ ನಾಯಕರ ಸಂತೋಷಕ್ಕೆ ಮಿತಿಯೇ ಇಲ್ಲವಾಗಿದೆ. ಆದರೆ ಸಿಎಂ ಆಯ್ಕೆ ಮಾಡುವುದು ಹೈ ಕಮಾಂಡ್ ಮುಂದಿರುವ ದೊಡ್ಡ ಸವಾಲಾಗಿದೆ. ನಾಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಸಲು ಮುಹೂರ್ತ ನಿಗದಿಗೊಳಿಸಲಾಗಿದೆ.

ನವದೆಹಲಿಯ ರಾಷ್ಟ್ರೀಯ ನಾಯಕರ ದಂಡೇ ಕರ್ನಾಟಕಕ್ಕೇ ನಾಳೆ ಇಳಿದು ಬರುತ್ತಿದೆ. ಬೆಳಗ್ಗೆ ಶಾಸಕರ ಅಭಿಪ್ರಾಯವನ್ನು ಔಪಚಾರಿಕವಾಗಿ ಸಂಗ್ರಹಿಸಿ, ಮಧ್ಯಾಹ್ನ ಶಾಸಕಾಂಗ ಪಕ್ಷದ ಸಭೆಯನ್ನು ಅಧಿಕೃತವಾಗಿ ನಡೆಸುತ್ತೇವೆ ಎಂದು ಕೆಪಿಸಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಆಂಟನಿ ಕೈಯಲ್ಲಿ ಲಕೋಟೆ?: ರಾಜ್ಯ ಕಾಂಗ್ರೆಸ್ ಉಸ್ತುವಾರಿ ಮಧುಸೂದನ್ ಮಿಸ್ತ್ರಿ, ಸ್ಕ್ರೀನಿಂಗ್ ಕಮಿಟಿ ಅಧ್ಯಕ್ಷ ಲೂಸಿಯಾನೋ ಫೆಲೆರೋ, ಕೇಂದ್ರ ಸಚಿವೆ ಅಂಬಿಕಾ ಸೋನಿ, ಸಚಿವ ಜೇತೇಂದ್ರ ಸಿಂಗ್ ಮುಂತಾದ ನಾಯಕರು ಇಂದು ಸಂಜೆಯೇ ರಾಜ್ಯಕ್ಕೆ ಆಗಮಿಸಲಿದ್ದು ಶಾಸಕರ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ.

ಸಿಎಂ ರೇಸ್ ನಲ್ಲಿ ಹಲವು ಅಭ್ಯರ್ಥಿಗಳಿದ್ದು, ಶಾಸಕರು ಯಾರ 'ಕೈ' ಹಿಡಿಯುತ್ತಾರೆ ಎಂದು ಕಾದು ನೋಡಬೇಕು. ರಕ್ಷಣಾ ಸಚಿವ ಎ.ಕೆ.ಆಂಟನಿ ಸಹ ಆಗಮಿಸುತ್ತಿರುವುದರಿಂದ ಸಭೆಗೆ ಹೆಚ್ಚಿನ ಮಹತ್ವ ಬಂದಿದೆ.

ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್ ಶುಕ್ರವಾರ 1.30ಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯನ್ನು ಕರೆದಿದ್ದಾರೆ. ಹೊಸದಾಗಿ ಆಯ್ಕೆಯಾದ ಶಾಸಕರಿಗೆ ಈ ಸಮಾರಂಭದಲ್ಲೇ ಅಭಿನಂದನೆ ಸಲ್ಲಿಸಲು ತೀರ್ಮಾನಿಸಲಾಗಿದೆ. ಕೆಪಿಸಿಸಿ ಕಚೇರಿಯಲ್ಲಿ ನಡೆಯುವ ಸಭೆ ಸಿಎಂ ಆಯ್ಕೆಯ ಕಾರಣದಿಂದಾಗಿ ಭಾರೀ ಮಹತ್ವ ಪಡೆದಿದೆ.

ಕಗ್ಗಂಟಿಗೆ ಅವಕಾಶವಿಲ್ಲ : ರಾಜ್ಯದಲ್ಲಿ ಅಧಿಕಾರ ಪಡೆಯುವ ಅವಕಾಶ ದೊರಕಿರುವಾಗ ನೂತನ ಮುಖ್ಯಮಂತ್ರಿಯ ಆಯ್ಕೆ ಪ್ರಕ್ರಿಯೆಯನ್ನು ಕಗ್ಗಂಟು ಮಾಡಿಕೊಳ್ಳದೆ, ಸುಲಲಿತವಾಗಿ ನೆರವೇರಿಸಬೇಕೆಂದು ಕಾಂಗ್ರೆಸ್ ನಾಯಕರು ಆಲೋಚನೆ ನಡೆಸಿದ್ದಾರೆ.

ಸಿಎಂ ಆಕ್ಷಾಂಕ್ಷಿಗಳ ಪಟ್ಟಿಯಲ್ಲಿ ಹಲವಾರು ನಾಯಕರಿದ್ದು ರಾಷ್ಟ್ರೀಯ ನಾಯಕರಿಗೆ ಒಬ್ಬರನ್ನು ಆಯ್ಕೆ ಮಾಡುವುದು ಬಹಳ ಕಗ್ಗಂಟಾಗಿದೆ. ರಾಜ್ಯದ ಕಾಂಗ್ರೆಸ್ ನಾಯಕರು ತಮ್ಮ ಪರವಾಗಿ ಎಷ್ಟು ಶಾಸಕರಿದ್ದಾರೆ ಎಂದು ಈಗಾಗಲೇ ತಲೆ ಎಣಿಸುವ ಕೆಲಸಕ್ಕೆ ಕೈ ಹಾಕಿದ್ದಾರೆ.

ಸಿದ್ದರಾಮಯ್ಯ ನನ್ನ ಪರವಾಗಿ 121 ಶಾಸಕರು

English summary
Karnataka Congress Legislative party meeting will be held at KPCC office, Queens Road Bangalore on Friday the 10 May. Observers from AICC will deliberate the process of selection. If all goes well name of new CM will be announced by Friday evening.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X