ಬಿಎಂಟಿಸಿ : ಮಾಸಿಕ ಮತ್ತು ದಿನದ ಪಾಸ್ ದರ ಹೆಚ್ಚಳ

ಕೇಂದ್ರ ಸರಕಾರ ಸಗಟು ಡೀಸೆಲ್ ಬೆಲೆಯನ್ನು ಹೆಚ್ಚಿಸಿರುವುದರಿಂದ ಖಾಸಗಿ ಬಂಕ್‌ಗಳಿಂದ ಇಂಧನ ಖರೀದಿಸಲಾಗುತ್ತಿದೆ. ಇದರಿಂದ ಬಿಎಂಟಿಸಿ ನಷ್ಟ ಎದುರಿಸುತ್ತಿದೆ. ಆದ್ದರಿಂದ ಸಂಸ್ಥೆಗೆ ಆಗುತ್ತಿರುವ ಆರ್ಥಿಕ ಹೊರೆ ತಗ್ಗಿಸಲು ಪಾಸ್ ಗಳ ದರ ಹೆಚ್ಚಳ ಅನಿವಾರ್ಯವಾಗಿತ್ತು ಎಂದು ಸಂಸ್ಥೆ ತಿಳಿಸಿದೆ.
ಸಂಸ್ಥೆಯ ಸಿಬ್ಬಂದಿಗಳಿಗೆ 2013 ಜನವರಿಯಿಂದ ಅನ್ವಯವಾಗುವಂತೆ ಶೇ 4.5ರಷ್ಟು ತುಟ್ಟಿ ಭತ್ಯೆ ನೀಡಲಾಗುತ್ತಿದೆ. ಆದ್ದರಿಂದ ದರ ಹೆಚ್ಚಳ ಅಗತ್ಯವಾಗಿತ್ತು ಎಂದು ಸಂಸ್ಥೆಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದಿನದ ಪಾಸ್ ದರವನ್ನು 10 ರೂ.ವರೆಗೆ ಹೆಚ್ಚಿಸಿದ್ದು, ಪರಿಷ್ಕೃತ ದರ ಮೇ 11ರಿಂದ ಜಾರಿಗೆ ಬರಲಿದೆ. ಮಾಸಿಕ ಪಾಸ್ ದರವನ್ನು 100 ರೂ.ವರೆಗೆ ಹೆಚ್ಚಳ ಮಾಡಿದ್ದು, ನೂತನ ದರ ಜೂ.1ರಿಂದ ಜಾರಿಯಾಗಲಿದೆ ಎಂದು ಸಂಸ್ಥೆ ಪ್ರತಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಪರಿಷ್ಕೃತ ದರಗಳು
* ದಿನದ ಪಾಸು - 55
* ದಿನದ ಪಾಸು (ಗುರುತಿನ ಚೀಟಿ ರಹಿತ) - 60
* ಕಪ್ಪು ಹಲಗೆ - 725
* ಕಪ್ಪು ಹಲಗೆ (ಹಿರಿಯ ನಾಗರಿಕರಿಗೆ) - 650
* ಕೆಂಪು ಹಲಗೆ/ಪುಷ್ಪಕ್/ ಸುವರ್ಣ/ಬಿಗ್10 - 925
* ಕೆಂಪು ಹಲಗೆ/ಪುಷ್ಪಕ್/ಸುವರ್ಣ/ಬಿಗ್ 10 (ಹಿರಿಯ ನಾಗರಿಕರಿಗೆ) - 830












Click it and Unblock the Notifications