ದಾವಣಗೆರೆ : ಅಪ್ರಾಪ್ತೆ ಮೇಲೆ ಅತ್ಯಾಚಾರ

ಮಂಗಳವಾರ ಬೆಳಗ್ಗೆ ಅತ್ಯಾಚಾರ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದ್ದು, ಚನ್ನಗಿರಿ ತಾಲೂಕಿನ ಮಂಡರಗದ್ದೆ ಗ್ರಾಮದ ನಿವಾಸಿ ಶಿವಪ್ಪ (56) ಪಕ್ಕದ ಮನೆಯ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ.
ಸೋಮವಾರ ಮನೆಯ ಸಮೀಪ ಆಟವಾಡುತ್ತಿದ್ದ ಬಾಲಕಿಯನ್ನು ಹೊಲಕ್ಕೆ ಕರೆದುಕೊಂಡು ಹೋಗಿ ಶಿವಪ್ಪ ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ. ಸೋಮವಾರ ರಾತ್ರಿಯೇ ಬಾಲಕಿಯನ್ನು ಚನ್ನಗಿರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಟುಂಬ ಸದಸ್ಯರ ದೂರಿನ ಅನ್ವಯ ಮಂಗಳವಾರ ಬೆಳಗ್ಗೆ ಆರೋಪಿಯನ್ನು ಚನ್ನಗಿರಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ವಿಪರೀತವಾಗಿ ಕುಡಿಯುತ್ತಿದ್ದ ಈತ ಬಾಲಕಿಗೆ ಹಲವಾರು ಬಾರಿ ಲೈಂಗಿಕ ಕಿರುಕುಳ ನೀಡಿದ್ದ ಎಂದು ತಿಳಿದು ಬಂದಿದೆ.
ಮಂಡರಗದ್ದೆ ಗ್ರಾಮಕ್ಕೆ ಅಡಿಕೆ ಸುಲಿಯಲು ಆಗಮಿಸಿದ್ದ ತಂದೆ-ತಾಯಿಗಳೊಂದಿಗೆ ಬಾಲಕಿ ಶಿವಪ್ಪ ಅವರ ಮನೆಯ ಪಕ್ಕದಲ್ಲಿ ವಾಸಿಸುತ್ತಿದ್ದರು. ಹಲವಾರು ಬಾರಿ ಲೈಂಗಿಕ ಕಿರುಕುಳ ನೀಡಿದರೂ ಬಾಲಕಿ ಭಯದಿಂದ ಕುಟುಂಬದವರ ಬಳಿ ಹೇಳಿಕೊಂಡಿರಲಿಲ್ಲ.
ಸೋಮವಾರ ತಡರಾತ್ರಿ ಬಾಲಕಿಯನ್ನು ಕರೆದುಕೊಂಡು ಹೋದ ಈತ ಅತ್ಯಚಾರವೆಸಗಿದ್ದಾನೆ. ಬಾಲಕಿಯನ್ನು ಚಿಕಿತ್ಸೆಗಾಗಿ ಚನ್ನಗಿರಿ ಆಸ್ಪತ್ರೆಗೆ ದಾಖಲಿಸಲಾಗಿದೆ.












Click it and Unblock the Notifications