ಟ್ರೈನಿನಲ್ಲೇ 2 ಬಾರಿ ಅವಳಿಗೆ ಜನ್ಮನೀಡಿದ ಮಹಾತಾಯಿ

ಮತ್ತೊಂದು ಡಬಲ್ ಧಮಾಕಾ!: ಖುಷಿನಗರ್ ಎಕ್ಸ್ ಪ್ರೆಸ್ ಟ್ರೈನಿನಲ್ಲಿ ಭಾನುವಾರ ಇಂತಹ ಅಪರೂಪದ ಕ್ಷಣ ಎದುರಾಗಿದೆ. ಜುಬಿನ್ ನಿಶಾ ಎಂಬ ಮಹಿಳೆ ತಮ್ಮ ಪತಿಯ ಜತೆ ಮುಂಬೈನಿಂದ ಗೋಂಡಾಕ್ಕೆ ತೆರಳಲು ಟ್ರೈನಿನಲ್ಲಿ ಪ್ರಯಾಣ ಮಾಡುತ್ತಿದ್ದರು. ಸಾಮಾನ್ಯ ಬೋಗಿಯಲ್ಲಿ ಸಂಚರಿಸುತ್ತಿದ್ದ ಸದರಿ ಮಹಿಳೆ ಉನ್ನಾವೋ ಮತ್ತು ಲಖ್ನೋ ನಿಲ್ದಾಣಗಳ ಮಧ್ಯೆ ಸಂಚರಿಸುತ್ತಿದ್ದಾಗ ಹೆರಿಗೆ ನೋವು ಅನುಭವಿಸಿ, ತಕ್ಷಣವೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ!
ತಕ್ಷಣ ಸಹ ಪ್ರಯಾಣಿಕರೂ ಮಹಿಳೆಯ ನೆರವಿಗೆ ಧಾವಿಸಿದ್ದು, ಸುಸೂತ್ರ ಹೆರಿಗೆಗೆ ದಾರಿ ಮಾಡಿಕೊಟ್ಟಿದ್ದಾರೆ. ಲಖ್ನೋ ನಿಲ್ದಾಣಕ್ಕೆ ಬರುವ ವೇಳೆಗೆ ವೈದ್ಯಕೀಯ ಸಿಬ್ಬಂದಿ ಸಜ್ಜಾಗಿರುವಂತೆಯೂ ನೋಡಿಕೊಂಡಿದ್ದಾರೆ. ಆದರೆ ಲಖ್ನೋಗೆ ಬರುವ ವೇಳೆಗೆ ಮಹಿಳಾ ಪ್ರಯಾಣಿಕರು ಅವಳಿ ಮಕ್ಕಳನ್ನು ವೈದ್ಯಕೀಯ ಸಿಬ್ಬಂದಿಗೆ ಜೋಪಾನವಾಗಿ ಹಸ್ತಾಂತರಿಸಿದ್ದಾರೆ.
ನಾಲ್ಕು ವರ್ಷದ ಹಿಂದೆ ಒಂದು ಹೆಣ್ಣು ಮತ್ತು ಗಂಡು ಮಗುವಿಗೆ ನನ್ನ ಪತ್ನಿ ಹೀಗೇ ಚಲಿಸುತ್ತಿರುವ ರೈಲಿನಲ್ಲಿ ನಾಲ್ಕು ವರ್ಷಗಳ ಹಿಂದೆ ಸುಸೂತ್ರವಾಗಿ ಜನ್ಮ ನೀಡಿದ್ದಳು ಎಂದು ಪತಿರಾಯ ಹಬೀಬುಲ್ಲಾ ಲಖ್ನೋ ನಿಲ್ದಾಣದಲ್ಲಿ ತಿಳಿಸಿದ್ದಾನೆ.












Click it and Unblock the Notifications