ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ ಮುಖ್ಯಮಂತ್ರಿ ನೀವೇನಾ? ಅಂದ್ರೆ ಗೊತ್ತಿಲ್ಲಪ್ಪ

By Mahesh
|
Google Oneindia Kannada News

ಮೈಸೂರು, ಮೇ.6: ಈ ಬಾರಿ ಸ್ಪಷ್ಟ ಬಹುಮತ ಪಡೆದು ಕಾಂಗ್ರೆಸ್ ಸರ್ಕಾರ ರಚಿಸಲಿದೆ ಈ ಬಗ್ಗೆ ಯಾವುದೇ ಸಂಶಯಬೇಡ ಎಂದು ಕಾಂಗ್ರೆಸ್ ಮುಖಂಡ, ವಿಪಕ್ಷ ನಾಯಕ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ, ಮುಂದಿನ ಮುಖ್ಯಮಂತ್ರಿ ನೀವೇನಾ? ಎಂದು ಕೇಳಿದರೆ, ಗೊತ್ತಿಲ್ಲಪ್ಪ, ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ ಎಂದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ಬಿಜೆಪಿ ಪಕ್ಷದ ದುರಾಡಳಿತದಿಂದ ಜನ ಬೇಸತ್ತಿದ್ದಾರೆ. ಕಾಂಗ್ರೆಸ್ ಬೆಂಬಲಿಸಲು ನಿರ್ಧರಿಸಿರುವುದು ಉತ್ತಮ ಆಯ್ಕೆಯಾಗಿದೆ. ಚುನಾವಣಾ ಪೂರ್ವ ಸಮೀಕ್ಷೆ ಹಾಗೂ ಈಗ ಹೊರ ಬಂದಿರುವ exit poll ಫಲಿತಾಂಶದಂತೆ ಕಾಂಗ್ರೆಸ್ ಜಯಭೇರಿ ನಿಶ್ಚಿತ ಎಂದು ಸಿದ್ದರಾಮಯ್ಯ ಹೇಳಿದರು.

ವರುಣಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಚೆಲುವರಾಜು ಕಣದಿಂದ ಹಿಂದೆ ಸರಿದಿದ್ದು ಏಕೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಿದ್ದು, ಆತ ಕೆಜೆಪಿ ಅಭ್ಯರ್ಥಿ ಜತೆ ಒಪ್ಪಂದ ಮಾಡಿಕೊಂಡು ಈ ರೀತಿ ಮಾಡಿದ್ದಾನೆ. ಇದು ಕಾಂಗ್ರೆಸ್ ಗೆ ವರದಾನ ಆಗಲಿದೆ. ಕಣದಿಂದ ಅಂತಿಮ ಕ್ಷಣದಲ್ಲಿ ಹಿಂದೆ ಸರಿಯುವ ಅಭ್ಯರ್ಥಿ ಮಾತನ್ನು ಮತದಾರ ನಂಬುವುದಿಲ್ಲ. ಜೆಡಿಎಸ್ ಗೆ ಮತಹಾಕ ಬೇಕು ಎಂದು ತೀರ್ಮಾನಿಸಿದ್ದವರು ಈಗ ಕಾಂಗ್ರೆಸ್ ಕೈ ಹಿಡಿಯುವರು. ಎಲ್ಲೆಡೆ ಕಾಂಗ್ರೆಸ್ ಉತ್ತಮ ಫಲಿತಾಂಶ ಹೊರ ಹಾಕಲಿದೆ ಎಂದರು.

Siddaramaiah confident of govt formation

ಸಿ ವೋಟರ್, ಸಿಎನ್ ಎನ್ ಐಬಿಎನ್, ಟೈಮ್ಸ್ ನೌ ಟಿವಿ ವಾಹಿನಿ/ ಹೆಡ್ ಲೈನ್ಸ್ ಟುಡೇ, ಪಬ್ಲಿಕ್ ಟಿವಿ, ಟಿವಿ 9 ಕನ್ನಡ ವಾಹಿನಿ ಅಲ್ಲದೆ ಒನ್ ಇಂಡಿಯಾದ ಕರ್ನಾಟಕ ಗುರು ಭವಿಷ್ಯದ ಪ್ರಕಾರ ಕಾಂಗ್ರೆಸ್ 100ರ ಗಡಿ ದಾಟಲಿದೆ. ಹೀಗಾಗಿ ಸಿದ್ದು ಕನಸಂತೆ ಸ್ಪಷ್ಟ ಬಹುಮತ ಸಿಗದಿದ್ದರೂ ಸರ್ಕಾರ ರಚನೆಯಂತೂ ಸಾಧ್ಯ. ಈ ಸಾಧ್ಯಸಾಧ್ಯತೆ ವಿವರಗಳನ್ನು ಇಲ್ಲಿ ಓದಿ...

ಮುಂದಿನ ಮುಖ್ಯಮಂತ್ರಿಯಾಗುವ ಎಲ್ಲಾ ಸಾಧ್ಯತೆ ಹೊಂದಿರುವ ಸಿದ್ದರಾಮಯ್ಯ ಅವರನ್ನು ಕರ್ನಾಟಕ ಗುರು ಭವಿಷ್ಯ ಕೂಡಾ ಕೈ ಹಿಡಿದಿದೆ. ಈ ಬಗ್ಗೆ ವಿವರ ಸದ್ಯದಲ್ಲೇ ನಿರೀಕ್ಷಿಸಿ.. ಕಾಂಗ್ರೆಸ್ ನ ಮುಂದಿನ ಮುಖ್ಯಮಂತ್ರಿ ಯಾರಾಗಬಹುದು? ಎಂಬ ಲೇಖನವೂ ಸದ್ಯದಲ್ಲೇ ನಿಮ್ಮ ಮುಂದೆ ಬರಲಿದೆ.

English summary
Exit Poll Results for Karnataka Assembly Election 2013 conducted by various media predicted Congress will get majority. Opposition leader Siddaramaiah said he believes in exit polls and he is confident that Congress will form the government this time
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X