ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾವು ಸಿದ್ಧ, ನೀವು ಬನ್ನಿ ಮತದಾನ ಮಾಡಿ : ಆಯೋಗ

|
Google Oneindia Kannada News

Anil Kumar Jha
ಬೆಂಗಳೂರು, ಮೇ 4 : ವಿಧಾನಸಭೆ ಚುನಾವಣೆಯ ಮತದಾನಕ್ಕೆ ಚುನಾವಣಾ ಆಯೋಗ ಸಕಲ ರೀತಿಯಲ್ಲೂ ಸಜ್ಜಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಹೇಳಿದ್ದಾರೆ. ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿ ಮತದಾನ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.

ಶುಕ್ರವಾರ ಬೆಂಗಳೂರು ವರದಿಗಾರರ ಕೂಟ ಹಾಗೂ ಬೆಂಗಳೂರು ಪ್ರೆಸ್‌ಕ್ಲಬ್ ಜಂಟಿಯಾಗಿ ಏರ್ಪಡಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಅವರು, ಜನರಿಗೆ ಯಾವುದೇ ಆಮಿಷಗಳಿಗೆ ಒಳಗಾಗದೆ ಮತದಾನ ಮಾಡಿ ಎಂದು ಕರೆ ನೀಡಿದರು.

ಮತದಾನದ ದಿನ ಅಭ್ಯರ್ಥಿಗಳು, ಮೊದಲು ಮತ ಹಾಕಲು ಬರುವವರು ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ಗೆ ಪೂಜೆ ಮಾಡುವಂತಿಲ್ಲ. ಇಂತಹ ಆಚರಣೆಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ ಎಂದು ಅವರು ತಿಳಿಸಿದರು.

ಮತದಾನಕ್ಕೂ ಮುಂಚಿನ 48 ಗಂಟೆಗಳಲ್ಲಿ ಮತದಾರರು ತಾವು ಯಾವ ಅಭ್ಯರ್ಥಿಗೆ ಮತ ನೀಡಬೇಕು ಎಂದು ಆಲೋಚಿಸಲು ಬಹಿರಂಗ ಪ್ರಚಾರವನ್ನು ಅಂತ್ಯಗೊಳಿಸಲಾಗಿರುತ್ತದೆ. ಆ ನಂತರ ಅಭ್ಯರ್ಥಿಗಳು ಜನರ ಗುಂಪಿಲ್ಲದೆ ಮನೆ ಬಾಗಿಲಿಗೆ ತೆರಳಿ ಪ್ರಚಾರ ನಡೆಸಬಹುದು.

ಮನೆ-ಮನೆ ಪ್ರಚಾರ ನಡೆಸುವ ಬಗ್ಗೆ ಜಿಲ್ಲಾಧಿಕಾರಿ, ಜಿಲ್ಲಾ ಚುನಾವಣಾಧಿಕಾರಿ, ಅಧೀಕ್ಷಕರು ತೆಗೆದುಕೊಳ್ಳುವ ತೀರ್ಮಾನಗಳು ಅಂತಿಮವಾಗಿರುತ್ತದೆ ಎಂದು ಅವರು ಹೇಳಿದರು.

ಮತಗಟ್ಟೆಯಲ್ಲೇ ಸ್ಲಿಪ್ : ವೋಟರ್ ಸ್ಲಿಪ್ ಸಿಗದ ಮತದಾರರಿಗೆ ಮತಗಟ್ಟೆಯಲ್ಲೇ ಅದನ್ನು ಪಡೆಯಲು ವ್ಯವಸ್ಥೆ ಮಾಡಲಾಗಿದೆ. ತಮ್ಮ ಗುರುತಿನ ಚೀಟಿ ತೋರಿಸಿ ಅವರು ಸ್ಲಿಪ್ ಪಡೆಯಬಹುದು ಎಂದು ಅವರು ಹೇಳಿದರು.

ಎರಡೂ ಅಪರಾಧ : ಮತಕ್ಕಾಗಿ ಹಣ ನೀಡುವುದರ ಜತೆಗೆ ಪಡೆಯುವುದು ಸಹ ಅಪರಾಧ. ಇಬ್ಬರ ವಿರುದ್ಧವೂ ಒಂದೇ ರೀತಿ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆದ್ದರಿಂದ ಮತದಾರರು ಆಮಿಷಕ್ಕೆ ಬಲಿಯಾಗದೇ ಮತಗಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಿ ಮತ ಚಲಾಯಿಸಿ ಎಂದರು.

ತಿರಸ್ಕಾರ ಮಾಡಬಹುದು : ಯಾವುದೇ ಮತದಾರನಿಗೆ ತನ್ನ ಕ್ಷೇತ್ರದಲ್ಲಿನ ಯಾವ ಅಭ್ಯರ್ಥಿಯೂ ಸೂಕ್ತ ಎಂದು ಅನ್ನಿಸದಿದ್ದರೆ, ತಿರಸ್ಕಾರ ಮತ ಹಾಕಬಹುದು. ತಿರಸ್ಕಾರ ಮತ ಹಾಕುವವರು, ಮತಗಟ್ಟೆ ಅಧಿಕಾರಿ ಬಳಿ ದಾಖಲಾತಿಯಲ್ಲಿ ನಿಯಮಾನುಸಾರ ತಮ್ಮ ವಿವರ ನಮೂದಿಸಬೇಕು ಎಂದರು.

ಮತದಾನದ ಸಿದ್ದತೆಗಳು

* 224 ವಿಧಾನಸಭಾ ಕ್ಷೇತ್ರಗಳಲ್ಲಿರುವ ಒಟ್ಟು ಮತಗಟ್ಟೆಗಳ ಸಂಖ್ಯೆ 51,648

* ನಕ್ಸಲ್ ಪೀಡಿತ - 149, ಅತಿಸೂಕ್ಷ್ಮ - 9, 954, ಸೂಕ್ಷ್ಮ - 14,209

* ರಾಜ್ಯದಿಂದ ನಿಯೋಜಸಿಲಾದ ಪೊಲೀಸರು 88,323 (ರಾಜ್ಯ ಸಶಸ್ತ್ರ ಪಡೆ ಸೇರಿ)

* ಕೇಂದ್ರ ಪೊಲೀಸ್ ಪಡೆ 525 (ಸಿಪಿಎಂಎಫ್, ಕೆಎಸ್‌ಆರ್ ಪಿ, ಸಿಎಆರ್, ಡಿಎಆರ್ ಹೊರತಾಗಿ)

* ಗೃಹರಕ್ಷಕ ದಳದ ಸಿಬ್ಬಂದಿ 18,000 (ಮಹಾರಾಷ್ಟ್ರ ಹಾಗೂ ಆಂಧ್ರಪ್ರದೇಶದ 4,000)

ಅಕ್ರಮಗಳು

* ರಾಜ್ಯದಲ್ಲಿ ಒಟ್ಟು 19,301 ಪ್ರಕರಣಗಳನ್ನು ದಾಖಲಿಸಲಾಗಿದೆ.

* 7,48,60,275 ನಗದು ವಶಪಡಿಸಿಕೊಳ್ಳಲಾಗಿದೆ.

* 11,52,06,304 ರೂ. ಮೌಲ್ಯದ ಮದ್ಯವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

* ಅಕ್ರಮಗಳ ಪತ್ತೆಗೆ ಒಟ್ಟು 420 ತಪಾಸಣಾ ಕೇಂದ್ರ ಸ್ಥಾಪಿಸಲಾಗಿದೆ.

(ಮತದಾನಕ್ಕೆ ಈ ಗುರುತಿನ ಪತ್ರಗಳನ್ನು ಬಳಸಬಹುದು)

(ಮತಗಟ್ಟೆ ಮಾಹಿತಿ ಪಡೆಯುವುದು ಹೇಗೆ)

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Election candidates or their representatives will not be allowed to perform pooja or any other ritual at polling stations on the voting day said, Chief Electoral Officer Anil Kumar Jha. 51,648 polling stations have been set up. one lakh personnel have been drafted for election duty.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X