ಮತದಾನಕ್ಕೆ ಈ ಗುರುತಿನ ಪತ್ರಗಳನ್ನು ಬಳಸಬಹುದು

ಬೆಂಗಳೂರಿನಲ್ಲಿ ಸೋಮವಾರ ಸಂಜೆ ಪ್ರತಿಕಾಗೋಷ್ಠಿ ನಡೆಸಿದ ಅವರು, ರಾಜ್ಯಾದ್ಯಂತ ಒಟ್ಟು, 19.96 ಲಕ್ಷ ನೂತನ ಮತಾದಾರರು ಈ ಚುನಾವಣೆಯಲ್ಲಿ ಮತದಾನ ಮಾಡಲಿದ್ದಾರೆ. ಬೆಂಗಳೂರು ನಗರದಲ್ಲಿಯೇ 6.16 ಲಕ್ಷ ಮತದಾರರು ನೂತನವಾಗಿ ಸೇರ್ಪಡೆಗೊಂಡಿದ್ದಾರೆ ಎಂದು ಹೇಳಿದರು.
ಚುನಾವಣಾ ಆಯೋಗದ ಸುಮಾರು ಒಂದು ಲಕ್ಷ ಅರ್ಜಿಗಳನ್ನು ವಿಲೇವಾರಿ ಮಾಡದೆ ಬಾಕಿ ಉಳಿಸಿಕೊಂಡಿದೆ. ಅರ್ಹ ಮತದಾರರನ್ನು ಮಾತ್ರ ಪಟ್ಟಿಗೆ ಸೇರಿಸಲಾಗಿದೆ ಎಂದು ವಿವರಿಸಿದರು. ಹೊಸ ಮತದಾರರ ಅರ್ಜಿಗಳ ವಿಲೇವಾರಿಯನ್ನು ತಕ್ಷಣ ಕೈಗೊಳ್ಳುವಂತೆ ಕೇಂದ್ರ ಚುನಾವಣಾ ಆಯೋಗ ಸೂಚನೆ ನೀಡಿದೆ.
ಸದ್ಯ ಚುನಾವಣೆ ಹತ್ತಿರವಾಗಿರುವುದರಿಂದ ಕಾವಾಲಕಾಶ ಕೋರಿದ್ದೇವೆ. ಲೋಕಸಭೆ ಚುನಾವಣೆಗೆ ಉಳಿದ ಮತದಾರರನ್ನು ಸೇರ್ಪಡೆಗೊಳಿಸಲಾಗುವುದು ಎಂದು ಅನಿಲ್ ಕುಮಾರ್ ತಿಳಿಸಿದರು. ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿದ್ದು, ಮತದಾರರ ಗುರುತಿನ ಚೀಟಿ ಇಲ್ಲದಿದ್ದರೆ, ಗುರುತು ದೃಢೀಕರಿಸಲು ಆಯೋಗ ಸೂಚಿಸಿರುವ ಪರ್ಯಾಯ ದಾಖಲೆಗಳನ್ನು ನೀಡಬಹುದಾಗಿದೆ ಎಂದು ಹೇಳಿದರು.
ಗುರುತಿನ ಚೀಟಿ : ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಭಾವಚಿತ್ರ ಸಹಿತ ಗುರುತಿನ ಪತ್ರ ಪಡೆಯದ ಸಾರ್ವಜನಿಕರು ಕೇಂದ್ರ ಚುನಾವಣಾ ಆಯೋಗ ಸೂಚಿಸಿರುವ ಈ ದಾಖಲೆಗಳನ್ನು ತೋರಿಸಿ ಮತ ಚಲಾಯಿಸಬಹುದಾಗಿದೆ.
ಯಾವ ದಾಖಲೆಗಳು ಬೇಕು
* ಪಾಸ್ ಪೋರ್ಟ್
* ಚಾಲಾನಾ ಪರವಾನಿಗೆ
* ಪಾನ್ ಕಾರ್ಡ್
* ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರಿಗೆ ವಿತರಿಸಿರುವ ಭಾವಚಿತ್ರವಿರುವ ಗುರುತಿನ ಚೀಟಿ
* ರಾಷ್ಟ್ರೀಕೃತ ಬ್ಯಾಂಕ್, ಅಂಚೆ ಕಚೇರಿ, ಕಿಸಾನ್ ಪಾಸ್ ಬುಕ್
* ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯ ಗುರುತಿನ ಪತ್ರ
* ಭಾವಚಿತ್ರ ಸಹಿತಿ ಆಸ್ತಿ ದಾಖಲೆ
* ಮಾಜಿ ಸೈನಿಕ, ವೃದ್ಧಾಪ್ಯ, ವೇತನ, ಪಿಂಚಣಿ ದಾಖಲೆಗಳು
* ದೈಹಿಕ ಅಂಗವಿಕಲ ಪ್ರಮಾಣ ಪತ್ರ
* ಸ್ವಾತಂತ್ರ್ಯ ಯೋಧರ ಗುರುತಿನ ಪತ್ರ
* ಸಂಧ್ಯಾ ಸುರಕ್ಷಾ ಯೋಜನೆ ಕಾರ್ಡ್
* ನರೇಗಾ ಯೋಜನೆ ಜಾಬ್ ಕಾರ್ಡ್
* ಸ್ಥಳೀಯ ಸಂಸ್ಥೆಗಳ ನೌಕರರ ಗುರುತಿನ ಚೀಟಿ
* ಸರ್ಕಾರಿ ಇಲಾಖೆಗಳು ವಿತರಿಸುವ ಹಿರಿಯ ನಾಗರೀಕರ ಗುರುತಿನ ಪತ್ರ
* ಕೇಂದ್ರ ಕಾರ್ಮಿಕ ಇಲಾಖೆ ವಿತರಿಸಿರುವ ಆರೋಗ್ಯ ವಿಮಾ ಕಾರ್ಡ್
* ಆರ್ ಜಿಐ ಸ್ಮಾರ್ಟ್ ಕಾರ್ಡ್
* ಆಧಾರ್ ಕಾರ್ಡ್
(ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕುವುದು ಸುಲಭ)
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications