ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತಪಟ್ಟಿಯಲ್ಲಿ ಹೆಸರಿದೆಯಾ? ಹುಡುಕುವುದು ಸುಲಭ

By Prasad
|
Google Oneindia Kannada News

How to check your name in voters list
ಬೆಂಗಳೂರು, ಏ. 3 : ಹ್ಯಾಗಿದ್ರೂ 2008ರ ವಿಧಾನಸಭೆ ಚುನಾವಣೆಯಲ್ಲಿ ಇದೇ ಕ್ಷೇತ್ರದಲ್ಲಿ ಮತ ಹಾಕಿದ್ದೆ. ಈ ಬಾರಿ ಕೂಡ ಇದೇ ಕ್ಷೇತ್ರದಲ್ಲಿ ಹೆಸರಿದ್ದೇ ಇರುತ್ತದೆ ಎಂದು ಈ ಬಿರುಬಿರು ಬೇಸಿಗೆಯಲ್ಲಿ ನೀವೇನಾದರೂ ತಣ್ಣಗೆ ಕುಳಿತಿದ್ದರೆ, ತಣ್ಣಗೇ ಕುಳಿತಿರಬೇಕಾಗುತ್ತದೆ.

ಅದೇ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದ್ದೇ ಇರುತ್ತದೆಂದು ಯಾವುದೇ ಗ್ಯಾರಂಟಿ ಇಲ್ಲ. ನಾನಾ ಕಾರಣಗಳಿಂದಾಗಿ ನಿಮ್ಮ ಮತ್ತು ನಿಮ್ಮ ಕುಟುಂಬದವರ ಹೆಸರು ಮತದಾರರ ಪಟ್ಟಿಯಿಂದ ಕಾಣೆಯಾಗಿರಬಹುದು. ಯಾವುದಕ್ಕೂ ಮತಪಟ್ಟಿಗೆ ಹೆಸರು ಸೇರಿಸಲು ಇರುವ ಕೊನೆ ದಿನಾಂಕ (ಏ.7) ಕಳೆಯುವ ಮುನ್ನವೇ ಒಮ್ಮೆ ಪರಿಶೀಲಿಸುವುದು ಉತ್ತಮ.

ನೀವು ಅದೇ ಪ್ರದೇಶದಲ್ಲಿ ಅದೇ ಮನೆಯಲ್ಲಿ ದಶಕಗಳಿಂದ ಇದ್ದರೂ ಮತದಾರರ ಪಟ್ಟಿಯಿಂದ ನಿಮ್ಮ ಹೆಸರು ಕಣ್ಮರೆಯಾಗಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಅನೇಕ ನಾಗರಿಕರಿಗೆ ಇದರ ಅನುಭವವಾಗಿದೆ. ಕಡೆ ಗಳಿಗೆಯಲ್ಲಿ ಪರದಾಡುವ ಬದಲು ಮೊದಲೇ ತಿಳಿದುಕೊಂಡಿದ್ದರೆ ಮತದಾನದ ದಿನ ನಿರುಮ್ಮಳವಾಗಿ ಮತ ಚಲಾಯಿಸಬಹುದು.

ಮತದಾರರ ಪಟ್ಟಿಯಲ್ಲಿ ಹೆಸರು ಇದೆಯೋ ಇಲ್ಲವೋ ಎಂಬುದನ್ನು ಆನ್ ಲೈನ್ ಮುಖಾಂತರ ಸುಲಭವಾಗಿ ತಿಳಿಯಬಹುದು. ಕರ್ನಾಟಕ ಚುನಾವಣಾ ಆಯೋಗದ ಈ ವೆಬ್ ಸೈಟಿನಲ್ಲಿ ವಿವರ ನೀಡಿ ಖಚಿತಪಡಿಸಿಕೊಳ್ಳಿ. ಅದನ್ನು ತಿಳಿಯುವ ನಾಲ್ಕು ಸುಲಭ ಹಂತಗಳು ಇಲ್ಲಿವೆ.

1) ನಿಮ್ಮ ಬಳಿ ಕೇಂದ್ರ ಚುನಾವಣಾ ಆಯೋಗ ನೀಡಿರುವ ಮತದಾರರ ಗುರುತಿನ ಚೀಟಿ ಇದ್ದರೆ ಅದರಲ್ಲಿ (ಮೇಲ್ಭಾಗದಲ್ಲಿ) ನಮೂದಿಸಲಾಗಿರುವ EPIC ಸಂಖ್ಯೆ ಒದಗಿಸಿ, ಯಾವ ಕ್ಷೇತ್ರದಲ್ಲಿ ನಿಮ್ಮ ಹೆಸರು ಇದೆ ಎಂಬುದನ್ನು ತಿಳಿಯಿರಿ.

2) ಗುರುತಿನ ಚೀಟಿ ಇಲ್ಲದಿದ್ದರೆ ಜಿಲ್ಲೆ, ನಿಮ್ಮ, ಸಂಬಂಧಿಯ ಹೆಸರು ಮತ್ತು ವಿಧಾನಸಭಾ ಕ್ಷೇತ್ರದ ವಿವರಗಳನ್ನು ನಿಖರವಾಗಿ ನೀಡಿ ತಿಳಿಯಬಹುದು.

3) ಒಂದು ವೇಳೆ 2013ರ ಜನವರಿ 16ರ ನಂತರ ಮತದಾರರ ಪಟ್ಟಿಯಿಂದ ಹೆಸರು ತೆಗೆಯಲಾಗಿದೆಯಾ ಅಥವಾ ಸೇರಿಸಲಾಗಿದೆಯಾ ಅಥವಾ ಮಾರ್ಪಡಿಸಲಾಗಿದೆಯಾ ಎಂಬುದನ್ನು ವಿವರಗಳನ್ನು ನೀಡಿ ತಿಳಿಯಬಹುದು.

4) ನೀವು ಈಗಾಗಲೆ ಸಂಬಂಧಿತ ಅರ್ಜಿಯನ್ನು ಸಲ್ಲಿಸಿದ್ದರೆ, ಅರ್ಜಿಯ ಸ್ವೀಕೃತಿ ಸಂಖ್ಯೆಯನ್ನು ನಮೂದಿಸಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಸೇರಿಸಲಾಗಿದೆಯೋ ಇಲ್ಲವೋ ತಿಳಿಯಬಹುದು.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
How to check your name in voters list : Is your name listed in latest list of voters? Check it online through http://ceokarnataka.kar.nic.in/SearchHome_New.aspx. If your name is not listed, hurry up and enroll yourself. Don't forget to vote in Karnataka assembly election.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X