ಮತಗಟ್ಟೆಗಳ ಮೇಲೆ ಸಿಸಿಟಿವಿ ಕಣ್ಣು : ಆಯೋಗ

Election Commission
ಬೆಂಗಳೂರು, ಮೇ 2 : ಇದೇ ಮೊದಲ ಬಾರಿಗೆ ರಾಜ್ಯದಲ್ಲಿ ಅತಿ ಸೂಕ್ಷ್ಮ ಎಂದು ಗುರುತಿಸಲಾದ 1100 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವಿಧಾನ ಜಾರಿಗೆ ತರಲಾಗಿದೆ. ಚುನಾವಣಾಧಿಕಾರಿಗಳು ಈ ಮತಗಟ್ಟೆಗಳ ಚಟುವಟಿಕೆಗಳನ್ನು ನೇರವಾಗಿ ವೀಕ್ಷಿಸಬಹುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಅನಿಲ್ ಕುಮಾರ್ ಝಾ ಹೇಳಿದ್ದಾರೆ.

ಬುಧವಾರ ಬೆಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅನಿಲ್ ಕುಮಾರ್ ಝಾ, ಅತಿ ಸೂಕ್ಷ್ಮ ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವಿಧಾನ ಜಾರಿಗೆ ತರಲಾಗಿದೆ. ಸಿಸಿಟಿವಿ ಮೂಲಕ ಮತಗಟ್ಟೆಯ ಚಟುವಟಿಕೆಗಳನ್ನು ರೆಕಾರ್ಡ್ ಮಾಡಲಾಗುತ್ತದೆ. ಚುನಾವಣಾಧಿಕಾರಿಗಳು ಇದನ್ನು ನೇರವಾಗಿ ವೀಕ್ಷಿಸಬಹುದಾಗಿದೆ ಎಂದರು.

ಗುಜರಾತ್ ಚುನಾವಣೆಯಲ್ಲಿ ಆಯೋಗ ಇಂತಹ ತಂತ್ರಜ್ಞಾನ ಉಪಯೋಗಿಸಲಾಗಿತ್ತು. ಕರ್ನಾಟಕದ ಚುನಾವಣೆಯಲ್ಲಿ ಇದೇ ಮೊಲದ ಬಾರಿಗೆ ಇಂತಹ ವ್ಯವಸ್ಥೆ ಜಾರಿಗೊಳಿಸುತ್ತಿರುವುದಾಗಿ ಅವರು ತಿಳಿಸಿದರು.

ರಾಜ್ಯದ 1100 ಅತಿ ಸೂಕ್ಷ್ಮ ಮತಗಟ್ಟೆಗಳನ್ನು ವೆಬ್ ಕಾಸ್ಟಿಂಗ್ ಮಾಡಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದ 5 ರಿಂದ 6 ಮತಗಟ್ಟೆಗಳಲ್ಲಿ ಈ ಪ್ರಕ್ರಿಯೆ ಜಾರಿಯಾಗಲಿದೆ ಎಂದು ಅವರು ಹೇಳಿದರು.

ಮನೆ ಪ್ರಚಾರದ ಮೇಲೂ ಕಣ್ಣು : ಮೇ 3ರಂದು ಬಹಿರಂಗ ಪ್ರಚಾರ ಕೊನೆಗೊಳ್ಳಲಿದೆ ನಂತರ ಅಭ್ಯರ್ಥಿಗಳು ಮನೆ-ಮನೆ ಪ್ರಚಾರ ನಡೆಸುತ್ತಾರೆ. ಇಂತಹ ಸಮಯದಲ್ಲಿ ಅಕ್ರಮಗಳು ನಡೆಯುವ ಸಾಧ್ಯತೆ ಹೆಚ್ಚಾಗಿದ್ದು, ಅಭ್ಯರ್ಥಿಗಳ ಮನೆ ಪ್ರಚಾರವನ್ನು ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ ಎಂದು ಅವರು ತಿಳಿಸಿದರು.

ಮತದಾನಕ್ಕೆ ಎರಡು ದಿನಗಳು ಬಾಕಿ ಉಳಿದಿರುವಾಗ ಅಕ್ರಮಗಳು ಹೆಚ್ಚಾಗಿ ನಡೆಯುವ ಸಾಧ್ಯತೆ ಇದೆ. ಆದ್ದರಿಂದ 2000 ಸಂಚಾರಿ ವಿಚಕ್ಷಣದಳ ಮತ್ತು 1400 ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಲಾಗಿದೆ ಎಂದು ಮಾಹಿತಿ ನೀಡಿದರು.

14 ಕೋಟಿ ವಶ : ಅಕ್ರಮವಾಗಿ ದಾಖಲೆಇಲ್ಲದೆ ಸಾಗಣೆ ಮಾಡಲಾಗುತ್ತಿದ್ದ ಒಟ್ಟು 14 ಕೋಟಿ ರೂ.ಗಳನ್ನು ಎರಡು ದಿನಗಳಲ್ಲಿ ಚುನಾವನಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ ಎಂದು ಅನಿಲ್ ಕುಮಾರ್ ಝಾ ತಿಳಿಸಿದರು.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕಾರ್ಯಚರಣೆ ನಡೆಸಿದ ಅಧಿಕಾರಿಗಳು ಕಾರ್ಕಳದಲ್ಲಿ 51.26 ಲಕ್ಷ, ಶಿರಸಿಯಲ್ಲಿ 12 ಲಕ್ಷ, ಬೊಮ್ಮನಹಳ್ಳಿ ಬಳಿ 3 ಲಕ್ಷ, ಹೊಸಕೋಟೆಯಲ್ಲಿ 1.5 ಲಕ್ಷ ಸೇರಿದಂತೆ ಒಟ್ಟು 14 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಒಟ್ಟು 20 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ನಿವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+