ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜಧಾನಿ ಟೆಕ್ಕಿಗಳ ಮತ ಚಿತ್ತ ಯಾರತ್ತ?

By Srinath
|
Google Oneindia Kannada News

who-will-techies-in-it-hub-bangalore-mysore-vote-for
ಬೆಂಗಳೂರು‌, ಏ.30: ಐಟಿ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚುವರಿಯಾಗಿ 3.6 ಲಕ್ಷ ಮಂದಿ ಮತದಾನ ಮಾಡಲು ಅರ್ಹತೆ ಪಡೆದುಕೊಂಡಿದ್ದಾರೆ ಅಂದರೆ ಅವರಲ್ಲಿ ಬಹಳಷ್ಟು ಮಂದಿ ಐಟಿ-ಬಿಟಿ ಕ್ಷೇತ್ರದ ಟೆಕ್ಕಿಗಳೂ ಹೊಸದಾಗಿ ಸೇರ್ಪಡೆಯಾಗಿರುತ್ತಾರೆ ಅನ್ನಬಹುದು. ಹಾಗಾದರೆ ಬೆಂಗಳೂರಿನಲ್ಲಿ ನೆಲೆ ಕಂಡುಕೊಳ್ಳುತ್ತಿರುವ ಈ ಐಟಿ-ಬಿಟಿ ಟೆಕ್ಕಿಗಳು ಮತದಾನ ಮಾಡಲು ಮತಗಟ್ಟೆ ವರೆಗೂ ಬರುತ್ತಾರಾ? ಬಂದರೆ ಯಾರ ಪರ ಒಲವು ತೋರುತ್ತಾರೆ?

ಈ ಹಿಂದಿನ ವಿದ್ಯಮಾನವನ್ನು ಆಧರಿಸಿ ಹೇಳುವುದಾದರೆ ಬೆಂಗಳೂರು ಟೆಕ್ಕಿಗಳು ಮತಹಾಕಲು ಮನೆಯಿಂದ ಹೊರಬರುವುದಿಲ್ಲ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲೂ ಇದೇ ವಿದ್ಯಮಾನ ಕಂಡುಬರುತ್ತದೆ. ಹಾಗಂತ ಅವರಿಗೆ ರಾಜಕೀಯದ ಬಗ್ಗೆ ಯಾವುದೇ ಪರಿಕಲ್ಪನೆ ಇಲ್ಲವೆಂದಲ್ಲ. ರಾಜಕೀಯದ ಬಗ್ಗೆ ಅವರದೇ ಆದ ಸ್ಪಷ್ಟ ಅಭಿಪ್ರಾಯ/ಮತ ಇದೆ. ಆದರೆ ಮತದಾನದ ದಿನ ಮನೆ ಬಿಟ್ಟು ಹೊರಬರೋಲ್ಲ ಅಷ್ಟೇ.

ಕರ್ನಾಟಕದಲ್ಲಿ ಲಕ್ಷಾಂತರ ಮಂದಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ದುಡಿಯುತ್ತಿದ್ದಾರೆ. ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳೂ ಸೇರಿದಂತೆ ಪ್ರಮುಖವಾಗಿ ಮೈಸೂರು, ಮಂಗಳೂರು, ಹುಬ್ಬಳ್ಳಿಯಲ್ಲಿ ಇವರು ನೆಲೆ ಕಂಡುಕೊಂಡಿದ್ದಾರೆ.

ಎಲ್ಲ ರಾಜಕೀಯ ಪಕ್ಷಗಳಿಗೂ ಐಟಿ ಮತದಾರರ ಬಗ್ಗೆ, ಅವರ ಮತಗಳ ಬಗ್ಗೆ ಆಸೆಗಳಿವೆ. ಆ ಮತಗಳ ಮಹತ್ವವನ್ನು ಅರಿತಿರುವ ರಾಜಕೀಯ ಪಕ್ಷಗಳು ಟೆಕ್ಕಿಗಳ ವಿಶ್ವಾಸ ಗಳಿಸಲು ಅಂತರ್ಜಾಲದ ಮೂಲಕ ಲಗ್ಗೆ ಹಾಕಿದ್ದಾರೆ.

ಆದರೆ online campaign ದಾರಿಯೊಂದೇ ಸಾಕಾ ಟೆಕ್ಕಿಗಳನ್ನು ಮತಗಟ್ಟೆಗಳತ್ತ ಸೆಳೆಯಲು? ಏಕೆಂದರೆ 2008ರ ವಿಧಾನಸಭೆ ಚುನಾವಣೆಯಲ್ಲಿ ನಗರದಲ್ಲಿ ಶೇ. 44ರಷ್ಟು ಮತದಾನವಾಗಿತ್ತು. ಆನಂತರದ ವರ್ಷದಲ್ಲಿ ಲೋಕಸಭೆ ಚುನಾವಣೆಯಲ್ಲಿ ಶೇ. 47ರಷ್ಟು ಮಂದಿ ಮತದಾರರು ಮತ ಹಾಕಲು ಮತಗಟ್ಟೆಗೆ ಬಂದಿದ್ದರು.
ಆದರೆ ಬೆಂಗಳೂರು ಟೆಕ್ಕಿಗಳ ಪೈಕಿ ಶೇ. 20ರಷ್ಟು ಮಂದಿ ಮಾತ್ರ ಮತ ಹಾಕಿದ್ದರು.

ಟೆಕ್ಕಿಗಳು ಉತ್ತಮ ಆಡಳಿತ ಬೇಕು ಅನ್ನುತ್ತಾರೆ. ಆದರೆ ಮತದಾನ ಮಾಡಲು ಮುಂದೆ ಬರುವುದಿಲ್ಲ. ಇದು ಶೋಚನೀಯ. ಮತ ಹಾಕಲು ಟೆಕ್ಕಿಗಳು ಮುಂದೆ ಬರಬೇಕು. ಈ ಬಗ್ಗೆ ಮತ್ತಷ್ಟು ಜಾಗೃತಿ ಮೂಡಿಸಬೇಕು' ಎಂಬುದು ಪ್ರಜ್ಞಾವಂತ ಟೆಕ್ಕಿ ಮತದಾರರ ಒಕ್ಕೊರಲ ಅಭಿಪ್ರಾಯ.

ಕುತೂಹಲದ ಸಂಗತಿಯೆಂದರೆ ಐಟಿ ಮಂದಿಗೆ ಟೆಕ್-ಸ್ಯಾವಿ ನರೇಂದ್ರ ಮೋದಿ ಬಗ್ಗೆ ಹೇಚ್ಚು ಭರವಸೆಯಿದೆ. ಆದರೆ ರಾಜ್ಯ ಬಿಜೆಪಿ ಬಗ್ಗೆ ಅದೇ ಮಾತನ್ನು ಹೇಳಲಾಗದು. ಹಾಗಾಗಿ 2014ರ ಲೋಕಸಭೆ ಚುನಾವಣೆಯಲ್ಲಿ ಟೆಕ್ಕಿಗಳು ಗರಿಷ್ಠ ಮತದಾನ ಮಾಡುವ ಸಾಧ್ಯತೆಯಿದೆ. ಆದರೂ ನಗರವಾಸಿಗಳನ್ನು ಹೆಚ್ಚಾಗಿ ಅವಲಂಬಿಸುವ ಬಿಜೆಪಿ ಪಕ್ಷ ಬೆಂಗಳೂರು ಟೆಕ್ಕಿಗಳಿಗೂ ಗಾಳ ಹಾಕುತ್ತಿದೆ. ಆದರೆ ಜೆಡಿಎಸ್ ಒಂದು ಹೆಜ್ಜೆ ಮುಂದೆ ಎತ್ತಿಟ್ಟಿದೆ ಎನ್ನಬಹುದು.

English summary
Karnataka Assembly Election - The mute and interesting question is who will techies in Information Techology hub Bangalore and Mysore vote for? But The techies in Information Techology hub Bangalore and Mysore have often been accused of having an opinion but not coming out and voting.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X