ಈಶ್ವರಪ್ಪಾ ಕೊರಳಿಗೆ ಸಾರ್ವಜನಿಕ ಷೇರು ಮಾರಾಟ ಕಳಂಕ

ಅದೇ ವೇಳೆ ಇತ್ತ ಶಿವಮೊಗ್ಗದಲ್ಲಿ ಈಶ್ವರಪ್ಪ ಅವರ ಸೊಸೆ ಹೆಸರಿನಲ್ಲಿರುವ ಕಂಪನಿಯ ಷೇರುಗಳ ಅಕ್ರಮ ಮಾರಾಟದ ಬಗ್ಗೆ ಕೆಜೆಪಿ ಮುಖಂಡ ಪುರುಷೋತ್ತಮ್ ಅವರು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಸಂಬಂಧ ಕೇಂದ್ರ ವಿತ್ತ ಸಚಿವ ಹಾಗೂ ಚುನಾವಣಾಧಿಕಾರಿಗಳಿಗೆ ದೂರು ನೀಡುವುದಾಗಿಯೂ ಪುರುಷೋತ್ತಮ್ ತಿಳಿಸಿದ್ದಾರೆ.
ಬಿಜೆಪಿ ಮಾಜಿ ರಾಜ್ಯಧ್ಯಕ್ಷ, ಉಪ ಮುಖ್ಯಮಂತ್ರಿ ಅವರ ಪುತ್ರ ಕಾಂತೇಶ್ ಮತ್ತು ಸೊಸೆ ಶಾಲಿನಿ ಮಾಲೀಕತ್ವದ ಭರಣಿ ಕಂಪನಿ ಷೇರು ಮಾರಾಟ ಈಗ ವಿವಾದದ ಕೇಂದ್ರ ಬಿಂದುವಾಗಿದೆ. ಒಟ್ಟು 4 ಕೋಟಿ 52 ಲಕ್ಷ ರು ಮೌಲ್ಯದ ಷೇರು ಮಾರಾಟ ಅವ್ಯವಹಾರ ಇದಾಗಿದೆ.
10 ರೂ ಮುಖಬೆಲೆಯ ಒಟ್ಟು 2,76,250 ರೂ ಮೊತ್ತದ ಷೇರುಗಳನ್ನು ಕೋಲ್ಕತ್ತಾ ಕಂಪನಿಗೆ ಅಕ್ರಮವಾಗಿ ಮಾರಾಟ ಮಾಡಲಾಗಿದೆ. ಚುನಾವಣೆಗೆ ಇನ್ನು ನಾಲ್ಕು ದಿನ ಇರುವಾಗ ಸಾರ್ವಜನಿಕ ಕಂಪನಿಯ ಷೇರುಗಳನ್ನು ಕೋಲ್ಕೊತ್ತಾದ ನಿರ್ದಿಷ್ಟ ಕಂಪನಿಗೆ ಮಾರಾಟ ಮಾಡಿರುವುದರ ಔಚಿತ್ಯವೇನು ಎಂದು ಪುರುಷೋತ್ತಮ್ ಪ್ರಶ್ನಿಸಿದ್ದಾರೆ.












Click it and Unblock the Notifications