• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಚುನಾವಣೆನಂತರ ಬಿಜೆಪಿ ಅಸ್ತಿತ್ವ ಕಳೆದುಕೊಳ್ಳಲಿದೆ

|
Yeddyurappa.
ಬೆಂಗಳೂರು, ಏ. 30 : ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿಗೆ ಬಹುಮತ ಲಭಿಸುವುದು ಖಚಿತವಾಗಿದೆ. ಚುನಾವಣಾ ಫಲಿತಾಂಶ ಪ್ರಕಟವಾದ ಮೇ 8 ನಂತರ ನಾನೇ ರಾಜ್ಯದ ಮುಖ್ಯಮಂತ್ರಿ ಎಂದು ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಚಾಮರಾಜನಗರಕ್ಕೆ ಕೆಜೆಪಿ ಅಭ್ಯರ್ಥಿ ಪರ ಮತಯಾಚಿಸಲು ಆಗಮಿಸಿದ ಯಡಿಯೂರಪ್ಪ ಹೆಲಿಪ್ಯಾಡ್‌ನ‌ಲ್ಲಿ ಮಾಧ್ಯಮಗಳೊಂದಿಗೆ ಮಾನಾಡಿ, ಬಿಜೆಪಿ 30 ಸ್ಥಾನಗಳಲ್ಲೂ ಜಯಗಳಿಸುವುದಿಲ್ಲ. ಚುನಾವಣೆ ನಂತರ ಬಿಜೆಪಿ ರಾಜ್ಯದಲ್ಲಿ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಹೇಳಿದರು.

ಪ್ರಾದೇಶಿಕ ಪಕ್ಷಗಳಿಗೆ ಮತದಾರರು ಬೆಂಬಲ ನೀಡುತ್ತಾರೆ. ರಾಜ್ಯದ ತುಂಬಾ ಪ್ರವಾಸ ಮಾಡಿದ್ದೇನೆ. ಕೆಜೆಪಿ ಅಧಿಕಾರ ಪಡೆಯುವುದು ನಿಶ್ಚಿತವಾಗಿದ್ದು ನಾನೇ ಮುಖ್ಯಮಂತ್ರಿ ಆಗಲಿದ್ದೇನೆ. ಫಲಿತಾಂಶ ಪ್ರಕಟಗೊಂಡ ನಂತರ ನಾನೇ ರಾಜ್ಯದ ಮುಖ್ಯಮಂತ್ರಿ ಎಂದು ಅವರು ಹೇಳಿದರು.

ದಿನದ ಪ್ರಮುಖ ಸುದ್ದಿಗಳು

ಮಧುಗಿರಿಯಲ್ಲಿ 10 ಲಕ್ಷ ವಶ : ಆಂಧ್ರಪ್ರದೇಶದ ಗಡಿ ಭಾಗದ ಚಂದ್ರಬಾವಿ ಚೆಕ್‌ಪೋಸ್ಟ್‌ನಲ್ಲಿ 10.70 ಲಕ್ಷ ರೂ.ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆಯಿಲ್ ಟ್ಯಾಂಕರ್ ವೊಳಗೆ ಹಣವನ್ನು ಇಡಲಾಗಿತ್ತು. ಟ್ಯಾಂಕರ್ ಚಾಲಕ ಪದ್ಮನಾಭ್ ಮತ್ತು ಕ್ಲೀನರ್ ರಾಮಕೃಷ್ಣ ಅವರನ್ನು ಬಂಧಿಸಲಾಗಿದೆ.

ದಾಸರಹಳ್ಳಿ : ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಅಬ್ಬಿಗೆರೆ ಬಳಿ ೧.೫ ಲಕ್ಷ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ. ಕವರ್ ನಲ್ಲಿ ೮ ಸಾವಿರ ರೂ.ನಂತೆ ತುಂಬಿಕೊಂಡು ಬೈಕ್ ನಲ್ಲಿ ಸಾಗಿಸುತ್ತಿದ್ದ ಹಣವನ್ನು ವಶಕ್ಕೆ ಪಡೆದ ಪೊಲೀಸರು ಅಬ್ದುಲ್ ಮತ್ತು ಫರ್ವೆಜ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ದಾಖಲೆ ಕೊಡಿ : ಸಾರ್ವಜನಿಕರು ಹಣವನ್ನು ಸಾಗಿಸುವಾಗ ಅದಕ್ಕೆ ಸೂಕ್ತ ದಾಖಲೆಗಳನ್ನು ಪಡೆಯಿರಿ. ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ದಾಖಲೆಯಿಲ್ಲದೆ ಸಾಗಿಸುವ ಹಣವನ್ನು ವಶಪಡಿಸಿಕೊಳ್ಳಲಾಗುತ್ತದೆ. ನೀವು ಸಾಗಿಸುವ ಹಣಕ್ಕೆ ಸೂಕ್ತ ದಾಖಲೆ ನೀಡಿದರೆ ಹಣ ಮರಳಿಸುವುದಾಗಿ ರಾಜ್ಯ ಮುಖ್ಯ ಚುನಾವಧಿಕಾರಿ ಅನಿಲ್ ಕುಮಾರ್ ಝಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾಂಗ್ರೆಸ್ ಮಾದರಿ : ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಸಾಮಾಜಿಕ ನ್ಯಾಯವಿದ್ದು, ಇದರಲ್ಲಿ ಸಾಮಾನ್ಯ ಕಾರ್ಯಕರ್ತರು ಕೂಡ ಮುಖ್ಯಮಂತ್ರಿ ಆಗಬಹುದು. ಇಂತಹ ವ್ಯವಸ್ಥೆ ಎಲ್ಲಾ ಪಕ್ಷಗಳಿಗೂ ಮಾದರಿ ಆಗಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ನಂಜನಗೂಡಿನಲ್ಲಿ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದರು. ಕುಟುಂಬ ರಾಜಕಾರಣವನ್ನು ಪ್ರಧಾನವಾಗಿಸಿ ಕೊಂಡಿರುವ ಜೆಡಿಎಸ್ ಸಾಮಾಜಿಕ ನ್ಯಾಯ ಪಾಲಿಸುತ್ತಿಲ್ಲ ಎಂದು ಅವರು ದೂರಿದರು.

lok-sabha-home

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
KJP will get majority in assembly election. After May 8 i am become chief minister for state, said Former CM and KJP president B.S.Yeddyurappa. In Chamarajanagar he address media and said, i will become CM after the election.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more