• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಜೆಪಿ ಪ್ರಶ್ನೆಗಳಿಗೆ ಯಡಿಯೂರಪ್ಪ ಉತ್ತರ ಕೊಟ್ರಪ್ಪಾ!

By Srinath
|

ಬೆಂಗಳೂರು, ಏ.27: ಕೆಜೆಪಿ ಅಧಿನಾಯಕ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮೂರೇ ದಿನದಲ್ಲಿ ಬಿಜೆಪಿ ಎದುರು 10 ತೆಂಗಿನಕಾಯಿಗಳನ್ನು ಒಡೆದು ನಿವಾಳಿಸಿದ್ದಾರೆ.

ಚುನಾವಣೆ ಸಮೀಪಿಸುತ್ತಿದ್ದಂತೆ ಯಡಿಯೂರಪ್ಪ ಅವರನ್ನು ಗುರಿಯಾಗಿಟ್ಟುಕೊಂಡು ವಿಧಾನಪರಿಷತ್ ಸದಸ್ಯ, ಬಿಜೆಪಿ ಹಿರಿಯ ನಾಯಕ ಗೋ. ಮಧುಸೂದನ್ ಅವರು ಒಂದ್ಹತ್ತು ಪ್ರಶ್ನೆಗಳನ್ನು ಕೇಳಿದ್ದರು.

ಒನ್ ಇಂಡಿಯಾದಲ್ಲಿ ಈ ಪ್ರಶ್ನಾವಳಿ ಪ್ರಕಟವಾಗುತ್ತಿದ್ದಂತೆ ತಕ್ಷಣ ಓದುಗರು ವಿಭಿನ್ನ ರೀತಿಯಲ್ಲಿ ತಮಗೆ ತೋಚಿದಂತೆ ಪ್ರತಿಕ್ರಿಯಿಸಿದ್ದರು. ಕೆಲವೊಂದು ಉತ್ತರ ರೂಪವಾಗಿಯೂ ಇತ್ತು. ನಿಮ್ಮ ಆದ್ಯ ಗಮನಕ್ಕಾಗಿ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ:

1) ಯಡಿಯೂರಪ್ಪನವರಿಂದ ಉತ್ತರ ಸಿಕ್ಕೀತೆ???. 2) BJP 10 questions ಕೇಳೋಕೆ ಅಸ್ಟೇ ತಾಕತ್ತು ... ಯಡ್ಡಿ 1000 questions ಕೇಳಬಹುದು ಬಿಜೆಪಿಗೆ. 3)ಬಿ ಜೆ ಪಿ ಗೇ ನಮ್ಮ ಯಡ್ಡಿಜಿ ಉತ್ತರ ಕೊಡುವ ಅವಶ್ಯಕತೆ ಇಲ್ಲಾ ಸ್ವಾಮಿ, ನಾವುಗಳು ಅಂದ್ರೆ ಮತದಾರರು ಉತ್ತರ ಕೊಡುತ್ತೇವೆ ಸ್ವಲ್ಪಾ ತಾಳಿರಿ ಮೇ ೫ ದೂರವಿಲ್ಲ.

4) @ Madhu : Good Man , Yeddiji can ask 1000 questions too. 5) BSY takattu May 8kke. Bachha galigella , Yeddiji cant answer. 6) ಉತ್ತರ ಕೊಡಪ್ಪ ದೊರೆ... 7) Yeddyurapp has also 20 questions to BJP...Ask yedyurappa and publish those

ಅವೆಲ್ಲ ಒತ್ತಟ್ಟಿಗರಲಿ. ಈ ಮಧ್ಯೆ ಯಡಿಯೂರಪ್ಪ ಪರವಾಗಿ ಮಾಜಿ ಸಚಿವ, ಕೆಜೆಪಿ ಉಪಾಧ್ಯಕ್ಷ, ಶಿವಮೊಗ್ಗದ ಹಿರಿಯ ಮುತ್ಸದ್ದಿ ಕೆಎಚ್ ಶ್ರೀನಿವಾಸ್ ಅವರು ನೀಡಿರುವ ಉತ್ತರ ಹೀಗಿದೆ.

ಪ್ರಶ್ನೋತ್ತರ 1

ಪ್ರಶ್ನೋತ್ತರ 1

ಯಡಿಯೂರಪ್ಪನವರೇ ಲೋಕಾಯುಕ್ತವು ಗಣಿ ಹಗರಣದಲ್ಲಿ ತಮ್ಮ ಹೆಸರು ಉಲ್ಲೇಖ ಮಾಡಿದ ತರುವಾಯ ಯಾವ ಹೈಕೋರ್ಟ್‌ ನಿಮಗೆ ಕ್ಲೀನ್‌ ಚಿಟ್‌ ನೀಡಿದೆ?
Ans: 7-3-2012ರಂದು ಹೈಕೋರ್ಟ್ ನ್ಯಾ. ಭಕ್ತವತ್ಸಲ ಮತ್ತು ನ್ಯಾ. ಗೋವಿಂದರಾಜುಲು ನೀಡಿದ ತೀರ್ಪಿನಲ್ಲಿ ಲೋಕಾಯುಕ್ತ ವರದಿಗೆ ಸಂಬಂಧಸಿದ ಭಾಗವನ್ನು, ಲೋಕಾಯುಕ್ತ ಪೊಲೀಸಿನವರು ಹಾಕಿದ ಎಫ್ಐಆರ್ ಹಾಗೂ ಬಿಎಸ್ವೈ ಬಗ್ಗೆ ಕೇಸ್ ಮಾಡಲು ರಾಜ್ಯಪಾಲರು ನೀಡಿದ್ದ ಪರವಾನಗಿಯನ್ನೂ ರದ್ದಪಡಿಸಿದ್ದಾರೆ. ಇದರ ಮೇಲೆ ಯಾರೂ ಮೇಲ್ಮನವಿ ಸಲ್ಲಿಸಿಲ್ಲ. ನಂತರ ಹೈಕೋರ್ಟ್ ನ್ಯಾ. ಸುಭಾಷ್ ಬಿ ಆದಿ ಅವರು ಬಿಎಸ್ವೈಗೆ ಜಾಮೀನು ನೀಡಿದ್ದಾರೆ.

ಪ್ರಶ್ನೋತ್ತರ 2

ಪ್ರಶ್ನೋತ್ತರ 2

ತಮ್ಮ ವಿರುದ್ಧ ಬಂಡಾಯ ಎದ್ದಿದ್ದ ರೇಣುಕಾಚಾರ್ಯ ಎರಡು ಬಾರಿ ಶಾಸಕರೊಂದಿಗೆ ಹೈದರಾಬಾದ್‌, ಚೆನ್ನೈ, ಗೋವಾಗೆ ತೆರಳಿದ್ದರು. ಇಂತಹ ವ್ಯಕ್ತಿಯು ನಿಮ್ಮ ಹಿತೈಷಿ ಹೇಗೆ ಆಗುತ್ತಾರೆ? ನಿಮ್ಮ ಸರ್ಕಾರವನ್ನು ಉರುಳಿಸಲು ಯತ್ನಿಸಿದವರು ಬೆನ್ನಿಗೆ ಚೂರಿ ಹಾಕಿದವರಲ್ಲ ? ನಿಮ್ಮ ಸರ್ಕಾರವನ್ನು ಉಳಿಸಲು ಕಷ್ಟ ಪಟ್ಟವರು ಬೆನ್ನಿಗೆ ಚೂರಿ
ಹಾಕುತ್ತಾರೆ ಎನ್ನುವುದು ಎಷ್ಟು ನ್ಯಾಯ?
Ans: ಪಕ್ಷದಲ್ಲಿ ಭಿನ್ನಮತ ಸಹಜ. ಅಂಥ ಸಂದರ್ಭದಲ್ಲಿ ಉತ್ತಡ ತಂತ್ರದ ಭಾಗವಾಗಿ ಬೇರೆ ರಾಜ್ಯದ, ರೆಸಾರ್ಟುಗಳಿಗೆ ಹೋದುದಕ್ಕೂ, ಬೆನ್ನಿಗೆ ಚೂರಿ ಹಾಕುವುದಕ್ಕೂಅಜಗಜಾಂತರವಿದೆ.

ಪ್ರಶ್ನೋತ್ತರ 3

ಪ್ರಶ್ನೋತ್ತರ 3

ನಿಮ್ಮ ವಿರುದ್ಧ ಖಾಸಗಿ ದೂರು ದಾಖಲಾದ ಸಂದರ್ಭದಲ್ಲಿ ಇದು ಕುಮಾರಸ್ವಾಮಿಯವರ ಷಡ್ಯಂತ್ರ, ಜೆಡಿಎಸ್‌ ರಾಜ್ಯದಲ್ಲಿ ಅಳಿಸಿ ಬಿಡುತ್ತೇನೆ ಎಂದು ತಾವು ಘರ್ಜಿಸಿದ್ದು ನಿಮಗೆ ಮರೆತು ಹೋಗಿರುವುದು ಆಶ್ಚರ್ಯಕರವಲ್ಲವಾ?
Ans: ಯಾವುದೂ ಮರೆತಿಲ್ಲ. ಯಾವ್ಯಾವುದನ್ನು ಎಷ್ಟರಮಟ್ಟಿಗೆ ನೆನಪಿಡಬೇಕು ಎಂಬುದು ಯಡಿಯೂರಪ್ಪ ಅವರ ವಿವೇಕಕ್ಕೆ ಬಿಟ್ಟ ವಿಚಾರ.

ಪ್ರಶ್ನೋತ್ತರ 4

ಪ್ರಶ್ನೋತ್ತರ 4

ಕುಮಾರಸ್ವಾಮಿ ವಿರುದ್ಧ ಆರೋಪ ಪಟ್ಟಿಯನ್ನು ತಾವು ಬಿಡುಗಡೆ ಮಾಡಿಸಿದ್ದೀರಿ, ಆದರೆ ಅದರ ಬಗ್ಗೆ ಈಗೇಕೆ ಚಕಾರವೆತ್ತುತ್ತಿಲ್ಲ? ಪದೇ ಪದೇ ಬಿಜೆಪಿ ನಾಯಕರು ನನ್ನ ಬೆನ್ನಿಗೆ ಚೂರಿ ಹಾಕಿದ್ದಾರೆ ಎಂದು ಬಿಜೆಪಿ ತೊರೆದ ನಂತರ ಸಹಾನುಭೂತಿ ಗಳಿಸಲು ವಿಫ‌ಲ ಯತ್ನ ಮಾಡುತ್ತಿದ್ದೀರಿ. ಆದರೆ ನಿಮ್ಮ ವಿರುದ್ಧ ಖಾಸಗಿ ದೂರು ಮಾಡಿದವರು ಜೆಡಿಎಸ್‌ ಬೆಂಬಲಿತರು ಎಂಬುದನ್ನು ಏಕೆ ಮರೆಮಾಚಲಾಗುತ್ತಿದೆ?
Ans: ಕೇಸುಗಳನ್ನು ಹಾಕಿಸುವುದಕ್ಕೂ, ಬೆನ್ನಿಗೆ ಚೂರಿ ಹಾಕುವುದಕ್ಕೂ ಬಹಳ ವ್ಯತ್ಯಾಸವಿದೆ.

ಪ್ರಶ್ನೋತ್ತರ 5

ಪ್ರಶ್ನೋತ್ತರ 5

ನಿಮ್ಮ ಸರ್ಕಾರವನ್ನು ವಜಾ ಮಾಡಲು ರಾಜ್ಯಪಾಲರು ಶಿಫಾರಸ್ಸು ಮಾಡಿದಾಗ ರಾಷ್ಟ್ರಪತಿಗಳನ್ನು ಭೇಟಿ ಮಾಡಲು ಅಡ್ವಾಣಿಯವರು ತಮ್ಮ ವರ್ಚಸ್ಸಿಗೆ ಧಕ್ಕೆಯಾಗುವ ಸಂಭವವಿದ್ದರೂ ನಿಯೋಗದ ನೇತೃತ್ವವನ್ನು ವಹಿಸಿ ನಿಮ್ಮ ಪರ ವಕಾಲತ್ತು ವಹಿಸಿದ್ದು ನೆನಪಿರುವುದೇ? ಅಂತಹವರ ವಿರುದ್ಧ ಕೀಳು ಮಟ್ಟದ ಅಪಪ್ರಚಾರಕ್ಕೆ ಮುಂದಾಗಿರುವುದು ಹೊಲಸು ರಾಜಕಾರಣವಲ್ಲವಾ?
Ans: ವಾಜಪೇಯಿ ಮತ್ತು ಅಡ್ವಾಣಿಯವರು ಈ ರಾಷ್ಟ್ರದ ಅತ್ಯಂತ ಗೌರವಾನ್ವಿತ ನಾಯಕರು. ಅವರ ವಿರುದ್ಧ ಯಡಿಯೂರಪ್ಪನವರು ಯಾವುದೇ ಕೀಳುಮಟ್ಟದ ಅಪಪ್ರಚಾರಕ್ಕೆ ಮುಂದಾಗಿಲ್ಲ. ಅವರ ಬಗ್ಗೆ ಯಡಿಯೂರಪ್ಪನವರಿಗೆ ವಿಶೇಷ ಗೌರವವಿದೆ.

ಪ್ರಶ್ನೋತ್ತರ 6

ಪ್ರಶ್ನೋತ್ತರ 6

ರಾಜನಾಥ್‌ ಸಿಂಗ್‌ ಮತ್ತು ದೇವೇಗೌಡರ ಮಾತುಕತೆ ವಿಫ‌ಲವಾಗಿ ಜೆಡಿಎಸ್‌ ವಿರುದ್ಧವಾಗಿ ಬಿಜೆಪಿಯಿಂದ ವಿಶ್ವಾಸದ್ರೋಹ ಅಂತ ಭಾರಿ ಪ್ರತಿಭಟನೆ ಮಾಡಿ ರಾಜ್ಯಾದ್ಯಂತ ಪ್ರತಿಭಟನೆ ಯಾತ್ರೆ ಹೊರಟ ಯಡಿಯೂರಪ್ಪ ತುಮಕೂರಿನಿಂದ ರಾತ್ರೋರಾತ್ರಿ ವಾಪಸ್ಸು ಬಂದು ಮತ್ತೆ ಜೆಡಿಎಸ್‌ ಜೊತೆ ಸೇರಿ ಸರ್ಕಾರ ರಚಿಸಿದ್ದೇಕೆ?
Ans: ಪ್ರತಿಭಟಿಸಿ ಹೊರಟವರನ್ನು ಜೆಡಿಎಸ್ ನವರೇ ಮತ್ತೆ ಕರೆತಂದಿದ್ದರಿಂದ ವಾಪಸ್ ಬಂದು ಜನತೆಯ ಆದೇಶ ಹಾಗೂ ಬಿಜೆಪಿಗೆ ನ್ಯಾಯವಾಗಿ ದೊರೆತ ಅವಕಾಶ ಎಂಬ ಕಾರಣಕ್ಕಾಗಿ ಸರಕಾರ ರಚನೆ ಮಾಡಿದರು. ಆದರೆ ಮತ್ತೆ ಜೆಡಿಎಸ್ ಹಗ್ಗಜಗ್ಗಾಟ ಪ್ರಾರಂಭಿಸಿದ್ದರಿಂದ ಪಕ್ಷದ ಘನತೆ ಹಾಗೂ ಜನತೆಯ ಹಿತದೃಷ್ಟಿಯಿಂದ ಏಳು ದಿನಗಳಿಗೆ ಮುಖ್ಯಮಂತ್ರಿ ಪದವಿ ಬಿಟ್ಟು ಚುನಾವಣೆ ಎದುರಿಸಿ ಬಿಜೆಪಿಗೆ ಬಹುಮತ ತಂದುಕೊಟ್ಟರು.

ಪ್ರಶ್ನೋತ್ತರ 7

ಪ್ರಶ್ನೋತ್ತರ 7

2005ರಲ್ಲಿ ಬಿಜೆಪಿ ತೊರೆದು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಸೇರಲು ತೀರ್ಮಾನ ಮಾಡಿದ ಸಂದರ್ಭದಲ್ಲಿ ಮಾಧ್ಯಮಗಳಿಗೆ ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ ಎಂದು ಹೇಳಿಕೆ ನೀಡಿ ಪಕ್ಷದ ನಾಯಕರುಗಳಿಗೆ ಬಿಜೆಪಿಯೊಂದಿಗೆ ನನ್ನ ಸಂಬಂಧ ಮುಗಿಯಿತು ಎಂದು ತಿಳಿಸಿ ಖಾತೆಗಾಗಿ ವ್ಯಾಪಾರ ಮಾಡಿದ್ದು ಸುಳ್ಳಾ?
Ans: ಖಾತೆಗಾಗಿ ಆಗಲಿ, ಇನ್ಯಾವುದಕ್ಕೇ ಆಗಲಿ ಯಡಿಯೂರಪ್ಪನವರು ಎಂದೂ ವ್ಯಾಪಾರ ಮಾಡಿಲ್ಲ.

ಪ್ರಶ್ನೋತ್ತರ 8

ಪ್ರಶ್ನೋತ್ತರ 8

ಡಾ‌. ಆಚಾರ್ಯರವರು ನಿಧನರಾದ ಸಂದರ್ಭದಲ್ಲಿ ವಿಧಾನಸಭೆಯಲ್ಲಿ ಶೋಕ ನಿರ್ಣಯ ಕೈಗೊಂಡಾಗ ತಾವು ಶಾಸಕರೊಂದಿಗೆ ಗೋಲ್ಡನ್‌ ಪಾಮ್‌ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿ ವಿಧಾನಸಭೆಗೆ ಹಾಜರಾಗದೆ ನಿಮ್ಮ ಜೊತೆ ಸದಾ ಬೆನ್ನೆಲುಬಾಗಿದ್ದ ವ್ಯಕ್ತಿಗೆ ತಾವು ಅಗೌರವ ತೋರಲಿಲ್ಲವಾ?
Ans: ದಿ. ಆಚಾರ್ಯ ಹಾಗೂ ಯಡಿಯೂರಪ್ಪನವರ ಸಂಬಂಧದ ಬಗ್ಗೆ ಬೇರೆಯವರ ಸರ್ಟಿಫಿಕೇಟ್ ಅಗತ್ಯವಿಲ್ಲ.

ಪ್ರಶ್ನೋತ್ತರ 9

ಪ್ರಶ್ನೋತ್ತರ 9

ತೊಟ್ಟಿಲು ತೂಗಿ ಮಗುವನ್ನೂ ಚಿವುಟುವಂತೆ ಧನಂಜಯಕುಮಾರ್ ಅವರನ್ನು ಬಳಸಿಕೊಂಡು ಕೀಳು ರಾಜಕಾರಣ ಮಾಡುತ್ತಿರುವುದು ಸುಳ್ಳಾ?
Ans: ಧನಂಜಯಕುಮಾರ್ ಹೇಳಿಕೆಗೂ ಯಡಿಯೂರಪ್ಪನವರಿಗೂ ಯಾವ ಸಂಬಂಧವೂ ಇಲ್ಲ. ಈ ಹೇಳಿಕೆಗಾಗಿ ಈಗಾಗಲೇ ಅವರು ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಅವರು ನೇರ ನಡೆಯ ಮನುಷ್ಯ. ಏನಾದರೂ ಯಾರ ಬಗ್ಗೆಯಾದರೂ ಹೇಳಬೇಕೆನಿಸಿದರೆ ಅವರೇ ನೇರವಾಗಿ ಹೇಳುತ್ತಾರೆ. ಅದಕ್ಕೆ ಇವರ್ಯಾರನ್ನಾದರು ಬಳಸಿಕೊಳ್ಳುವ ಕೀಳುತಂತ್ರಗಾರಿಕೆ ಅವರ ಜಾಯಮಾನದಲ್ಲಿಲ್ಲ.

ಪ್ರಶ್ನೋತ್ತರ 10

ಪ್ರಶ್ನೋತ್ತರ 10

ನಿಮ್ಮ ಶಿಷ್ಯ ಬಿಜೆ ಪುಟ್ಟಸ್ವಾಮಿ ಜೆಡಿಎಸ್‌ ನಾಯಕ ಕುಮಾರಸ್ವಾಮಿಯ ಮೇಲೆ ಮಾಡಿದ ಆರೋಪಗಳ ಕುರಿತು ಈಗೇಕೆ ನಿಮ್ಮ ಧ್ವನಿ ಉಡುಗಿ ಹೋಗಿದೆ?
Ans: ಯಡಿಯೂರಪ್ಪನವ ಧ್ವನಿ ಎಂದೂ ಉಡುಗಿ ಹೋಗುವ ಪ್ರಶ್ನೆಯಿಲ್ಲ. ಅದು ನಿಮ್ಮ ವ್ಯರ್ಥ ಬಯಕೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Assembly elections- In an open challenge BJP leader Go. Madhusudan Swami had poses 10 questions to BS Yeddyurappa. Ex Minister and KJP Vice President KH Srinivas replies. 

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more