ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಡ್ಯ : ಅಂಬರೀಶ್ ಪರ ಕೃಷ್ಣ ಪ್ರಚಾರ ಮಾಡೋಲ್ಲ

|
Google Oneindia Kannada News

S.M.Krishna
ಮಂಡ್ಯ, ಏ. 26 : ಮಂಡ್ಯ ಕಾಂಗ್ರೆಸ್ ಪಕ್ಷದ ಭಿನ್ನಮತ ಬೀದಿಗೆ ಬಂದು ಬಹಳ ದಿನಗಳು ಕಳೆದಿವೆ. ಸದ್ಯ ಚುನಾವಣಾ ಪ್ರಚಾರದ ಮೇಲೂ ಬಂಡಾಯದ ಕರಿನೆರಳು ಆವರಿಸಿದೆ. ಶುಕ್ರವಾರ ಮಂಡ್ಯ ಜಿಲ್ಲೆಯಲ್ಲಿ ಪ್ರಚಾರ ನಡೆಲಿರುವ ಕೃಷ್ಣ ಅಂಬರೀಶ್ ಪತಿನಿಧಿಸುವ ಕ್ಷೇತ್ರದಲ್ಲಿ ಮಾತ್ರ ಪ್ರಚಾರ ನಡೆಸುತ್ತಿಲ್ಲ.

ಅಂಬರೀಶ್ ಮತ್ತು ಮಾಜಿ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ನಡುವಿನ ಅಸಮಾಧಾನ ಶಮನವಾಗಿಲ್ಲ. ಮದ್ದೂರು, ಕೆ.ಆರ್.ಪೇಟೆಗಳಲ್ಲಿ ಇಂದು ಕೃಷ್ಣ ಪ್ರಚಾರ ನಡೆಸುವ ಕಾರ್ಯಕ್ರಮ ನಿಗದಿಯಾಗಿದೆ. ಆದರೆ, ಮಂಡ್ಯದಲ್ಲಿ ಕೃಷ್ಣ ಮತ ಯಾಚಿಸುತ್ತಿಲ್ಲ. (ಮಂಡ್ಯದಲ್ಲಿ ಕೃಷ್ಣ ಕೃಷ್ಣಾ ಏನಿದು ಬಂಡಾಯ?)

ಟಿಕೆಟ್ ಹಂಚಿಕೆಯಿಂದ ಪ್ರಾರಂಭವಾದ ಉಭಯ ನಾಯಕರ ಅಸಮಾಧಾನ ಮಂಡ್ಯ ಕಾಂಗ್ರೆಸ್ ಅಧ್ಯಕ್ಷ ಆತ್ಮಾನಂದ ಅವರ ರಾಜೀನಾಮೆ ವರೆಗೆ ಬಂದು ತಲುಪಿತ್ತು. ಆದರೂ ಅಂಬರೀಶ್ ಮತ್ತು ಕೃಷ್ಣ ಬೆಂಬಲಿಗರ ನಡುವಿನ ಕದನ ಮುಂದುವರೆದಿದ್ದು, ಪ್ರಚಾರ ಕಾರ್ಯಕ್ಕೆ ತೆರಳದೇ ಬೆಂಬಲಿಗರು ದೂರ ಉಳಿದಿದ್ದಾರೆ.

ಆದರೆ, ಇಂದು ಜಿಲ್ಲೆಯಲ್ಲಿ ಪ್ರಚಾರ ಸಭೆ ನಡೆಸಲಿರುವ ಕೃಷ್ಣ ಮಂಡ್ಯ ಕ್ಷೇತ್ರದಲ್ಲಿ ಪ್ರಚಾರ ನಡೆಸದೇ ಮತ್ತೊಮ್ಮೆ ಅಂಬರೀಶ್ ಅವರಿಗೆ ಬಂಡಾಯದ ಬಿಸಿ ಮುಟ್ಟಿಸಲು ಸಜ್ಜಾಗಿದ್ದಾರೆ.

ಬರ್ತಾರೆ ಅಂಬರೀಶ್ : ಮಂಡ್ಯ ಕ್ಷೇತ್ರದಲ್ಲಿ ಪ್ರಚಾರ ನಡೆಸಲು ಕೃಷ್ಣ ಬರುವುದಿಲ್ಲ ಎಂದು ತಿಳಿದ ಅಂಬರೀಶ್ ನನ್ನ ಕ್ಷೇತ್ರಕ್ಕೂ ಸಮಯ ನೀಡಬಹುದಿತ್ತು. ಮೊದಲೇ ತಿಳಿಸಿದ್ದರೆ ಸಿದ್ದತೆ ಮಾಡಿಕೊಳ್ಳುತ್ತಿದ್ದೆವು.

ಕೃಷ್ಣ ಅವರ ಪ್ರಚಾರದಿಂದ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿ ಬಂದರೆ ಸಾಕು. ಮೇ 1ರಂದು ಮಂಡ್ಯಕ್ಕೆ ರಾಹುಲ್ ಗಾಂಧಿ ಆಗಮಿಸಲಿದ್ದು, ಆಗ ಕೃಷ್ಣ ಬಂದೇ ಬರುತ್ತಾರೆ ಎಂದು ಅಂಬರೀಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. (ರಾಷ್ಟ್ರೀಯ ನಾಯಕರ ಪ್ರಚಾರದ ವೇಳಾಪಟ್ಟಿ)

30 ಶಾಸಕರು ಬಂದಿದ್ರು : ಬಿಜೆಪಿಯ 30 ಮಂದಿ ಶಾಸಕರು ಕಾಂಗ್ರೆಸ್ ಸೇರಲು ಬಂದಿದ್ದರು. ಆದರೆ, ಭ್ರಷ್ಟಾಚಾರ ರಹಿತವಾದವರನ್ನು ಮಾತ್ರ ಪಕ್ಷಕ್ಕೆ ಸೇರಿಸಿಕೊಂಡಿದ್ದೇವೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ವೀರಣ್ಣ ಮತ್ತೀಕಟ್ಟಿ ಹೊಸ ಬಾಂಬ್ ಸಿಡಿಸಿದ್ದಾರೆ.

ಗುರುವಾರ ಚನ್ನರಾಯಪಟ್ಟಣದಲ್ಲಿ ಮಾತನಾಡಿದ ಅವರು, ಸಿ.ಎಸ್. ಪುಟ್ಟೇಗೌಡ ಅವರು ಪ್ರಾಮಾಣಿಕ ಹಾಗೂ ಭ್ರಷ್ಟರಲ್ಲದ ಕಾರಣ ಅವರಿಗೆ ಟಿಕೆಟ್ ನೀಡಲಾಗಿದೆ. ಒಟ್ಟಿ ಮೂವತ್ತು ಶಾಸಕರು ಕಾಂಗ್ರೆಸ್ ಸೇರಲು ಬಂದಿದ್ದರು ಎಂದು ಹೇಳಿದರು.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Former minister S.M.Krishna will not campaign in Mandya constituency. Actor Ambareesh is congress candidate in Mandya. S.M.Krishna will address election campaign in Maddur, K.R.Pete and other places today. but he will not campaign in Mandya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X