ಮಂಡ್ಯದಲ್ಲಿ ಕೃಷ್ಣ ಕೃಷ್ಣಾ ಏನಿದು ಬಂಡಾಯ?

ಎಸ್.ಎಂ.ಕೃಷ್ಣ ಅವರ ಆಪ್ತ ಬೆಂಬಲಿಗರಾದ ಆತ್ಮಾನಂದ ಶನಿವಾರ ತಮ್ಮ ರಾಜೀನಾಮೆ ನೀಡಿರುವ ಪತ್ರವನ್ನು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರಿಗೆ ಫ್ಯಾಕ್ಸ್ ಮೂಲಕ ರವಾನಿಸಿದ್ದಾರೆ. ಈ ಮೂಲಕ ಎಸ್.ಎಂ.ಕೃಷ್ಣ ಮತ್ತು ಚಿತ್ರನಟ ಅಂಬರೀಶ್ ನಡುವಿನ ಕಿತ್ತಾಟ ಮತ್ತೊಮ್ಮೆ ಬಹಿರಂಗಗೊಂಡಿದೆ.
ಈಗಾಗಲೇ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಚುನಾವಣೆಯಲ್ಲಿ ತಟಸ್ಥವಾಗಿ ಉಳಿಯಲು ನಿರ್ಧರಿಸಿದ್ದಾರೆ. ಆದ್ದರಿಂದ ತಮ್ಮ ಆಪ್ತ ಬೆಂಬಲಿಗನಿಗೂ ಸಂದೇಶ ರವಾನಿಸಿ ರಾಜೀನಾಮೆ ನೀಡುವಂತೆ ಸೂಚಿಸಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ಚುನಾವಣೆಯಲ್ಲಿ ತಮ್ಮ ಬೆಂಬಲಿಗರಿಗೆ ಟಿಕೆಟ್ ನೀಡುವುದರಿಂದ ಹಿಡಿದು, ಪಕ್ಷದ ಹುದ್ದೆ ನೀಡುವವರೆಗೂ ಕಾಂಗ್ರೆಸ್ ಮುಖಂಡರು ಕೃಷ್ಣ ಅವರನ್ನು ಮೂಲೆಗುಂಪು ಮಾಡಿದ್ದರು. ಚುನಾವಣೆ ಸಾರಥ್ಯವೇ ಕೃಷ್ಣ ಹೆಗಲಿಗೆ ಎಂಬ ಮಾತು ಕೊನೆ ಕ್ಷಣದಲ್ಲಿ ಹುಸಿಯಾಯಿತು.
ಸ್ವಂತ ಊರು ಮಂಡ್ಯದಲ್ಲಿ ಅಂಬರೀಷ್ ತಮ್ಮ ಬೆಂಬಲಿಗ ಲಿಂಗರಾಜುಗೆ ಟಿಕೆಟ್ ಕೊಡಿಸಿದ್ದು ಅಲ್ಲದೇ ಮಂಡ್ಯ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ಇದರಿಂದ ಮತ್ತಷ್ಟು ಕೆರಳಿದ ಕೃಷ್ಣ, ಬೆಂಬಲಿಗರಿಗೆ ಚುನಾವಣೆ ಪ್ರಚಾರಕ್ಕೆ ತೆರಳದಂತೆಯೂ ಸೂಚಿಸಿದ್ದಾರೆ.
ಮಂಡ್ಯ ಕಾಂಗ್ರೆಸ್ ಬಂಡಾಯದ ಬಿಸಿಯಿಂದ ಬೇರೆ ಪಕ್ಷಗಳು ಅಲ್ಲಿ ತಮ್ಮ ರೊಟ್ಟಿ ಬೇಯಿಸಿಕೊಂಡು ಚುನಾವಣೆಯಲ್ಲಿ ಗೆಲುವು ಸಾಧಿಸುವ ಲೆಕ್ಕಾಚಾರದಲ್ಲಿವೆ. ಸ್ಥಳೀಯರ ವಿರೋಧದಿಂದಾಗಿ ಅಂಬರೀಶ್ ಗೆ ಚುನಾವಣೆಯಲ್ಲಿ ಹಿನ್ನೆಡೆ ಉಂಟಾದರೂ ಆಶ್ಚರ್ಯವಿಲ್ಲ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications