ಡಿಕೆಶಿ ವಿರುದ್ಧ ಸಿಂಧ್ಯಾ ವಾಮಾಚಾರ ಮಾಡಿಸಿದ್ದಾರಂತೆ !

D.K.Shivakumar
ಬೆಂಗಳೂರು, ಏ.26 : ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಮಾಟ ಮಂತ್ರದ ಕೂಗು ಆರಂಭವಾಗಿದೆ. ಜೆಡಿಎಸ್ ಮುಖಂಡ ಪಿಜಿಆರ್ ಸಿಂಧ್ಯಾ ತನ್ನ ವಿರುದ್ಧ ವಾಮಾಚಾರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.

ಶುಕ್ರವಾರ ಪ್ರತಿಕಾಗೋಷ್ಠಿ ನಡೆಸಿದೆ ಶಿವಕುಮಾರ್, ಕನಕಪುರ ಕ್ಷೇತ್ರದಲ್ಲಿ ನನ್ನೊಂದಿಗೆ ನೇರವಾಗಿ ಹೋರಾಡಲು ಶಕ್ತಿ ಇಲ್ಲದ ಸಿಂಧ್ಯಾ, ರಾಜಕೀಯವಾಗಿ ನನ್ನನ್ನು ಮುಗಿಸುವ ಉದ್ದೇಶದಿಂದ ಒಂಬತ್ತು ಕಡೆ ವಾಮಾಚಾರಗಳನ್ನ ಮಾಡಿಸಿದ್ದಾರೆ ಎಂದು ಎಂದು ಡಿಕೆಶಿ ದೂರಿದರು.

ತನ್ನ ಏಳಿಗೆಯನ್ನು ಸಹಿಸದೆ ಸಿಂಧ್ಯಾ ಕುಂಭಕೋಣಂನ ಪ್ರತಿಂಗರಾ ದೇವಿ ಮಂದಿರ, ನೆಲಮಂಗಲದ ರಾಮಧಾಮ ಸೇರಿದಂತೆ ಒಂಬತ್ತು ಸ್ಥಳಗಳಿಗೆ ಭೇಟಿ ನೀಡಿ ವಾಮಾಚಾರ ಮಾಡಿಸಿಕೊಂಡು ಬಂದಿದ್ದಾರೆ ಎಂದು ಹೇಳಿದರು.

ಮಾಟ ಮಾಡಿಸಿಲ್ಲ ಸಿಂಧ್ಯಾ : ಮಾಟದಿಂದ ಗೆಲುವು ಸಾಧಿಸಲು ಸಾಧ್ಯವಿಲ್ಲ. ನನಗೆ ಮಾಟ ಮಂತ್ರದಲ್ಲಿ ನಂಬಿಕೆಯೂ ಇಲ್ಲ ಎಂದು ಪ್ರತಿಕ್ರಿಯಿಸಿರುವ ಸಿಂಧ್ಯಾ ಶಿವಕುಮಾರ್ ಮಾಡಿರುವ ಆರೋಪಗಳನ್ನು ತಳ್ಳಿ ಹಾಕಿದ್ದಾರೆ. ಜನತೆ ಮಾತ್ರ ಅಭ್ಯರ್ಥಿಗಳ ಸೋಲು-ಗೆಲುವು ನಿರ್ಧರಿಸುತ್ತಾರೆ. ಅವರ ತೀರ್ಪಿನ ಮೇಲೆ ನನಗೆ ನಂಬಿಕೆ ಇದೆ ಎಂದು ಹೇಳಿದ್ದಾರೆ.

ಸಾವಿರಾರು ಸೀರೆ ವಶ : ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ವಿಆರ್ಎಲ್ ಲಾಜಿಸ್ಟಿಕ್ ಕಂಪನಿಯ ಗೋದಾಮಿನ ಮೇಲೆ ಚುನಾವಣಾ ಆಯೋಗ ದಾಳಿ ನಡೆಸಿ ಸೀರೆಗಳಿಂದ ತುಂಬಿದ್ದ 22 ಬಾಕ್ಸ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಸೂರತ್ಕಲ್ ನಿಂದ ಐದು ದಿನಗಳ ಹಿಂದೆ ಈ ಬಾಕ್ಸ್ ಗಳು ಗೋದಾವಿಗೆ ಬಂದಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ. ಯಾವ ಪಕ್ಷಕ್ಕೆ ಸೇರಿದ್ದು ಎಂದು ತಿಳಿದು ಬಂದಿಲ್ಲ.

ಅಭಯ್ ಪಾಟೀಲ್ ಬಂಧನ : ಮರಗಳ ಮೇಲೆ ಮತ ನೀಡುವಂತೆ ಬರೆದು ಪ್ರಚಾರ ನಡೆಸುತ್ತಿದ್ದ ಬೆಳಗಾವಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಅವರ ವಿರುದ್ಧ ತಿಲಕವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಕೆಜೆಪಿ ಆಟ ನಡೆಯಲ್ಲ : ಸರ್ಕಾರ ರಚಿಸಲು ಕೆಜೆಪಿ ಪಕ್ಷದ ಬೆಂಬಲ ಪಡೆಯುವ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ. ಕೆಜೆಪಿ ಆಟ ಚುನಾವಣೆ ವರೆಗೆ ಮಾತ್ರ ನಂತರ ಪಕ್ಷ ಅಸ್ತಿತ್ವ ಕಳೆದುಕೊಳ್ಳಲಿದೆ ಎಂದು ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಹೇಳಿದ್ದಾರೆ. ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಾದೇಶಿಕ ಪ್ಷಕಗಳಾದ ಜೆಡಿಎಸ್ ಮತ್ತು ಕೆಜೆಪಿ ಅಧಿಕಾರದ ಗದ್ದುಗೆ ಏರುವುದು ಕನಸಿನ ಮಾತು ಎಂದು ಭವಿಷ್ಯ ನುಡಿದರು.

ಮುಂದುವರಿದ ಚೀಟಿ ವ್ಯವಹಾರ : ಕೆಜೆಪಿ ಮುಖಂಡ ಹಾಗೂ ಉದ್ಯಮಿ ವಿಜಯ್ ಸಂಕೇಶ್ವರ್ ಅವರು ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದಗೌಡ ಅವರ ವಿರುದ್ಧ ಮಾಡಿದ್ದ ಚೀಟಿ ವ್ಯವಹಾರ ಆರೋಪವನ್ನು ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರು ಶುಕ್ರವಾರ ಸಮರ್ಥಿಸಿಕೊಂಡಿದ್ದಾರೆ. ಈ ಬಗ್ಗೆ ಸೂಕ್ತ ತನಿಖೆ ಆಗಬೇಕು ಎಂದು ಆಗ್ರಹಿಸಿದ್ದಾರೆ. (ಚೀಟಿ ಬಿಂಕಿಗೆ ಯಡಿಯೂರಪ್ಪ ತುಪ್ಪ)

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+