ಬೆಂ-ಚೆ ಡಬ್ಬಲ್ ಡೆಕ್ಕರ್ ಗುರುವಾರದಿಂದಲೇ ಸಂಚಾರ
ಬೆಂಗಳೂರು, ಏ.23: ಬೆಂಗಳೂರು-ಚೆನ್ನೈ ರೈಲು ಪ್ರಯಾಣಿಕರಿಗೆ ಶುಭ ಸುದ್ದಿ. ಏನಪಾ ಅಂದರೆ ಬಹುಅಪೇಕ್ಷಿತ ಬೆಂಗಳೂರು-ಚೆನ್ನೈ ನಡುವಣ ಡಬ್ಬಲ್ ಡೆಕ್ಕರ್ ರೈಲು ಗುರುವಾರದಿಂದಲೇ (ಏಪ್ರಿಲ್ 25) ಸಂಚಾರ ಆರಂಭಿಸಲಿದೆ.
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಿರುವುದರಿಂದ ಒಂದು ತಿಂಗಳು ವಿಳಂಬವಾಗಿ ಸಂಚಾರ ಆರಂಭಿಸಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಕಳೆದ ಫೆಬ್ರವರಿಯಲ್ಲಿ ಈ ಡಬ್ಬಲ್ ಡೆಕ್ಕರ್ ರೈಲು ಯಶಸ್ವಿಯಾಗಿ ಪ್ರಾಯೋಗಿಕ ಸಂಚಾರ ಕೈಗೊಂಡಿತ್ತು.

ಸಂಪೂರ್ಣ ಹವಾನಿಯಂತ್ರಿತ ಈ ಡಬ್ಬಲ್ ಡೆಕ್ಕರ್ ರೈಲು (Train No. 22626) ಗುರುವಾರ 2.40ಕ್ಕೆ ಬೆಂಗಳೂರಿನಿಂದ ಹೊರಡಲಿದೆ. ರಾತ್ರಿನ 8.45ಕ್ಕೆ ಚೆನ್ನೈ ತಲುಪಲಿದೆ. ಅದೇ ರೀತಿ ಅಲ್ಲಿಂದ ಬೆಳಗ್ಗೆ 7.25ಕ್ಕೆ ಹೊರಡುವ (Train No. 22625) ರೈಲು ಮಧ್ಯಾಹ್ನ 1.30ಕ್ಕೆ ಬೆಂಗಳೂರು ತಲುಪಲಿದೆ.
ಪೆರಂಬೂರು, ಅರಕ್ಕೋಣಂ, ಕಟ್ಪಾಡಿ, ಅಂಬೂರ್, ಜೋಲಾರ ಪೇಟೆ, ಬಂಗಾರ ಪೇಟೆ, ಕೃಷ್ಣರಾಜ ಪುರ ಮತ್ತು ಬೆಂಗಳೂರು ದಂಡು ನಿಲ್ದಾಣದಲ್ಲಿ ನಿಲುಗಡೆ ಇದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಈ ಡಬ್ಬಲ್ ಡೆಕ್ಕರ್‌ನಲ್ಲಿ 11 ಹವಾನಿಯಂತ್ರಿತ ಬೋಗಿಗಳಿದ್ದು, ಪ್ರತಿಯೊಂದರಲ್ಲೂ 120 ಆಸನಗಳಿವೆ. ಸಾಮಾನ್ಯ ರೈಲಿನಲ್ಲಿ ಸರಾಸರಿ 90 ಆಸನಗಳಿರುತ್ತವೆ. ಲ್ಯಾಪ್ ಟಾಪ್, ಮೊಬೈಲ್ ಗಳನ್ನು ಚಾರ್ಜ್ ಮಾಡಿಕೊಳ್ಳಲು ವ್ಯವಸ್ಥೆ ಇದೆ. ಡಬ್ಬಲ್ ಡೆಕ್ಕರ್ ಎಸಿ ರೈಲು ಪ್ರತಿದಿನ ಬೆಳಗ್ಗೆ 7.25 ಕ್ಕೆ ಚೆನ್ನೈನಿಂದ ಹೊರಟು ಮಧ್ಯಾಹ್ನ 1.20ಕ್ಕೆ ಬೆಂಗಳೂರು ತಲುಪುತ್ತದೆ. ಮಧ್ಯಾಹ್ನ 2.40ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 8.40ಕ್ಕೆ ಚೆನ್ನೈ ತಲುಪುತ್ತದೆ.
ವಿಶೇಷ ಏನು?
# ಬೆಂಗಳೂರು- ಚೆನ್ನೈಗೆ ಟಿಕೆಟ್ ಬೆಲೆ ಹಿರಿಯರಿಗೆ 440 ರೂ ಮತ್ತು ಮಕ್ಕಳಿಗೆ 250 ರೂ. # ಡಬಲ್ ಡೆಕ್ಕರ್ ರೈಲು ಎರಡೂ ದಿಕ್ಕಿನಲ್ಲಿ ಇನ್ನೂ 45 ಬಾರಿ ಪ್ರಯೋಗಾರ್ಥ ಸಂಚಾರ ನಡೆಸಬೇಕಾಗಿದೆ. # ಈ ಡಬಲ್ ಡೆಕ್ಕರ್ ರೈಲು ಗಂಟೆಗೆ 160 ಕಿ ಮೀ. ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. # ಆದರೆ 110 ಕಿ.ಮೀ. ವೇಗದಲ್ಲಿ 362 ಕಿ.ಮೀ ದೂರವನ್ನು ಕ್ರಮಿಸಲಿದೆ. # ಸದ್ಯಕ್ಕೆ ಇದಕ್ಕಿಂತ ವೇಗವಾಗಿ (5 ಗಂಟೆಯಲ್ಲಿ) ಶತಾಬ್ದಿ ಚೆನ್ನೈ-ಬೆಂಗಳೂರು ನಡುವೆ ಸಂಚರಿಸುತ್ತದೆ.
# 30 ವರ್ಷಗಳ ಹಿಂದೆ ಇಂತಹ ರೈಲು ಇದೇ ಹಳಿಗಳ ಮೇಲೆ ಚಲಿಸುತ್ತಿತ್ತು. # 1500 ಮಂದಿ ಪ್ರಯಾಣಿಕರು ಸಂಚರಿಸಬಹುದು. # GPS ವ್ಯಸವ್ಥೆ ಇದೆ. # ಮೊದಲು ಹೌರಾ- ಧನಬಾದ್ ನಡುವೆ ಡಬಲ್ ಡೆಕ್ಕರ್ ರೈಲು ಸಂಚಾರ ಪ್ರಾರಂಭವಾಯ್ತು. # ಬಳಿಕ, ದೆಹಲಿ- ಜೈಪುರ ಮತ್ತು ಅಹಮದಾಬಾದ್- ಮುಂಬೈ ನಡುವೆ ಈಗ ಡಬಲ್ ಡೆಕ್ಕರ್ ರೈಲು ಸಂಚರಿಸುತ್ತಿದೆ.












Click it and Unblock the Notifications