• search
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದೊಡ್ಡಗೌಡ್ರು ಕ್ಲಬ್ಬಿನಲ್ಲಿ ವಿಸ್ಕಿ ಗ್ಲಾಸಿನಲ್ಲಿ ಕುಡಿದಿದ್ದೇನು?

By Srinath
|
deve-gowda-served-tea-in-whisky-glass-b-p-c
ಬೆಂಗಳೂರು, ಏ.23: ಮೊದಲೇ ಬಿರುಬೇಸಿಗೆ. ಜತೆಗೆ, ಚುನಾವಣೆ ಬಿಸಿ. ಇಂತಹ ಸಂದರ್ಭದಲ್ಲಿ, ರಾಜಕಾರಣಿಗಳಿಗೆ ಮಂಡೆ ಬಿಸಿಯಾಗುವುದು ಸಹಜವೇ. ಹಾಗೆ ಬಿಸಿಯಾದ ಮಂಡೆಯನ್ನು ತಂಪು ಮಾಡಿಕೊಳ್ಳಲು 'ಪರಮಾತ್ಮ' ಒಳಗೆ ಸೇರಿದರೆ ಆತ್ಮ ತಂಪಾಗುವುದರಲ್ಲಿ ಅನುಮಾನವೇ ಇಲ್ಲ ಎಂಬುದು ಈಗಿನ ಯುವ ಜನನಾಯಕರ ಅಂಬೊಣ. ಆದರೆ ಇದೇನಿದು, ದೊಡ್ಡಗೌಡ್ರೂನೂವೆ ವಿಸ್ಕಿ ಗ್ಲಾಸು ಎತ್ತೋದಾ?

ಏನಾಯಿತೆಂದರೆ ನಿನ್ನೆ ರಾಜಧಾನಿಯಲ್ಲಿ ಕಬ್ಬನ್ ಪಾರ್ಕಿನ ತುದಿಯಲ್ಲಿರುವ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮ ಮಿತ್ರರು ಮಾಜಿ ಪ್ರಧಾನಿಯ ಪತ್ರಿಕಾ ಸಂವಾದವನ್ನು ಆಯೋಜಿಸಿದ್ದರು. ಮೊದಲೇ...ಪ್ರೆಸ್ ಕ್ಲಬ್ಬು 'ಅದಕ್ಕೆ' ಫೇಮಸ್ಸು, ಅಂಥಾದ್ದರಲ್ಲಿ ಪ್ರೆಸ್ ಮೀಟಿಗೆಂದು ಬಂದ ಗೌಡರೂ ಗ್ಲಾಸು ಎತ್ತಿದರಾ? ಎಂದು ಆತಂಕ/ಆಶ್ಚರ್ಯಕ್ಕೆ ಬೀಳಬೇಡಿ.

ಜೀವನದಲ್ಲಿ ಎಂದೆಂದಿಗೂ/ ಎಂಥಹುದೇ ದುರ್ಭರ ಪರಿಸ್ಥಿತಿಯಲ್ಲಿ (ಗೌಡರಿಗೆಂಥಾ ದುಃಖ ಅಲ್ವಾ!?) ಅಂತಹುಗಳನ್ನೆಲ್ಲಾ ಟಚ್ಚೇ ಮಾಡದ ದೊಡ್ಡಗೌಡರಿಗೆ ಜೀವನದ ಸಂಧ್ಯಾಕಾಲದಲ್ಲಿ ಇದೇನು ಬಂತು ಎಂದೂ ಮರುಗಬೇಡಿ. ಏಕೆಂದರೆ ಅಲ್ಲಿ ಆಗಿದ್ದೇ ಬೇರೆ.

ನಮ್ಮ ಗೌಡರು ಎಂದಿನಂತೆ ಫುಲ್ ಫೋರ್ಸಿನೊಂದಿಗೆ 'ನಾನೇ ಕಿಂಗ್' ಎಂದು ಸುದ್ದಿಗಾರರ ಮುಂದೆ ಕೊಚ್ಚಿಕೊಳ್ಳುತ್ತಿದ್ದರು. ಆಗ ಗೌಡರ ಫೋರ್ಸನ್ನು ನಿಯಂತ್ರಿಸಲು ಅವರಿಗೆ ಕಾಫಿ-ಟೀ ಕೊಟ್ಟರೆ ಹೇಗೆ ಎಂದು ಆಯೋಜಕರು ಆಲೋಚಿಸಿದ್ದಾರೆ.

ಅದರಂತೆ ಚಿಕ್ಕ ಪ್ಲಾಸ್ಟಿಕ್ ಕಪ್ಪಿನಲ್ಲಿ (ಶುಗರ್ ಲೆಸ್) ಚಹಾ ತುಂಬಿಸಿ, ಅವರ ಮುಂದೆ ಹಿಡಿದಿದ್ದಾರೆ. ಮೊದಲೇ ದೊಡ್ಡಗೌಡರಿಗೆ ಚಹಾ ಅಂದರೆ ಶಾನೆ ಪ್ರೀತಿ. ಅವರು ಕೊಡಗಗಟ್ಟಲೆ ಚಹಾ ಹೀರುತ್ತಾರಂತೆ. ಹಾಗೇಂತ ಇದನ್ನೂ ಕುಡಿದು ಜೀವ ತಂಪು ಮಾಡಿಕೊಳ್ಳಲಿ ಬಿಡು ಎಂದು ಆಯೋಜಕರು ಭಾವಿಸಿದ್ದಾರೆ.

ಆದರೆ ಚಹಾ-ಪ್ರಿಯ ಗೌಡರಿಗೆ ಅದು ಅರೆಕಾಸಿನ ಮಜ್ಜಿಗೆಯಂತೆ ಎಂಬುದು ಅವರ ಅರಿವಿಗೆ ಬಂದಂತಿಲ್ಲ. ತಕ್ಷಣ ಅದೆಲ್ಲಿಂದಲೋ ಹಾರಿಬಂದ ಗೌಡರ ಗನ್ ಮ್ಯಾನ್ ಅಪಚಾರವಾಯ್ತು, ಅಪಚಾರವಾಯ್ತು ಎಂದು ಅರಚುತ್ತಾ 'ನಮ್ ಸಾಹೇಬರಿಗೆ ಹೀಗೆ ಸಣ್ಣಪುಟ್ಟ ಲೋಟದಲ್ಲಿ ಕೊಟ್ಟು ಅವಮಾನ ಮಾಡಬೇಡಿ. ಕುಡಿದರೆ ದೊಡ್ಡ ಚೆಂಬಿನಲ್ಲೇ ಕುಡಿಯುವ ಅಭ್ಯಾಸ ಅವರದು. ಅವರು ಜೀವನದಲ್ಲಿ ಚಹಾ ಬಿಟ್ಟು ಬೇರೇನನ್ನೂ ಕುಡಿದಿಲ್ಲ' ಎಂದಿದ್ದಾನೆ.

ಇದನ್ನು ಕೇಳಿ ಅಧೀರರಾದ ಆಯೋಜಕ ಪತ್ರಿಕಾ ಮಿತ್ರರು ಚೆಂಬಿಗಾಗಿ ತಡಕಾಡಿದ್ದಾರೆ. ಆದರೆ ಆ ತಕ್ಷಣಕ್ಕೆ ಅಲ್ಲೆಲ್ಲಿ ಚೆಂಬು ಸಿಗಬೇಕು? ಕ್ಲಬ್ಬಿನಲ್ಲೇನಿದ್ದರೂ ದೊಡ್ಡ ಗ್ಲಾಸು ಸಿಗೋದು. ಆದರೂ ಸಾವರಿಸಿಕೊಂಡ ಆಯೋಜಕರು ದೊಡ್ಡ ಗೌಡರನ್ನು ತಣಿಸಲೆಂದು ಅಲ್ಲೇ ಇದ್ದ ವಿಸ್ಕಿ ಗ್ಲಾಸು ತಂದವರೇ ಅದರ ತುಂಬಾ ಚಹಾ ತುಂಬಿ ದೊಡ್ಡ ಗೌಡರ ಮುಂದೆ ಹಿಡಿದಿದ್ದಾರೆ. ಗೌಡರ ಮೂಗಿಗೆ ಆ ಚಹಾ ವಾಸನೆ ಬಡಿದಿದ್ದೇ ತಡ ಗೌಡರು ಒಂದು Tea Break ತೆಗೆದುಕೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ಇನ್ನಷ್ಟು deve gowda ಸುದ್ದಿಗಳುView All

English summary
Karnataka Assembly Election- Former Prime Minister HD Deve Gowda was served tea in whisky glass in Bangalore Press Club Yesterday (April 22) during Meet the Press.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more