• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಒಂದು ಟಿಕೆಟಿಗೆ ಎರಡು ಅಭ್ಯರ್ಥಿ ಹೊಡೆದ ಗೌಡ್ರು

By Mahesh
|

ಬೇಲೂರು, ಏ.18: ಎಲ್ಲಾ ನಿರೀಕ್ಷೆಗಳನ್ನು ಮೀರಿ ಮಾಜಿ ಪ್ರಧಾನಿ ದೇವೇಗೌಡರು ವಿಚಿತ್ರ ರಾಜಕೀಯ ನಡೆಯನ್ನು ಇಡುವ ಮೂಲಕ ಬಿಕ್ಕಟ್ಟು ಶಮನಗೊಳಿಸಲು ಯತ್ನಿಸಿ ಒಂದರ್ಥದಲ್ಲಿ ಸೋತಿದ್ದಾರೆ. ಕಗ್ಗಂಟ್ಟಾಗಿದ್ದ ಬೇಲೂರು ವಿಧಾನಸಭಾ ಟಿಕೆಟ್ ಹಂಚಿಕೆಯನ್ನು ಗೌಡ್ರು ಇಟ್ಟ ನಡೆ ಅವರ ನಿಷ್ಠಾವಂತನನ್ನು ಕಳೆದುಕೊಳ್ಳುವಂತೆ ಮಾಡಿದೆ. ಮನೆ ಸೊಸೆ ಮುನಿಸಿಗೂ ಕಾರಣವಾಗಿದೆ.

ಭವಾನಿ ಮೇಡಂ ಅವರಿಗೆ ಜೆಡಿಎಸ್ ಟಿಕೆಟ್ ಸಿಗುತ್ತಿದೆ. ಹಾಸನದ 7 ವಿಧಾನಸಭಾ ಕ್ಷೇತ್ರಗಳಲ್ಲಿ ಯಾವುದಾದರೂ ಒಂದು ಎನ್ನಲಾಗಿದೆ. ಬೇಲೂರು ಸಿಕ್ಕರೆ ಭವಾನಿ ಮೇಡಂ ಸೇಫ್. ಪುತ್ರ ಪ್ರಜ್ವಲ್ ಸದ್ಯಕ್ಕೆ ಕಣಕ್ಕಿಳಿಯುತ್ತಿಲ್ಲ ಎಂಬ ಸುದ್ದಿ ಕೇಳಿದ ತಕ್ಷಣವೇ ಮೆತ್ತಗಾಗಿದ್ದ ಕ್ಷೇತ್ರದ ಹಳೆಹುಲಿ ಜವರೇಗೌಡ ಅವರು ನಿನ್ನೆ ತಡರಾತ್ರಿ ಬಿಡುಗಡೆ ಮಾಡಿದ ಪಟ್ಟಿ ಕಂಡು ಮನನೊಂದಿದ್ದಾರೆ.

ಪರಿಣಾಮ, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್ ಕೆ ಜವರೇಗೌಡ ಕಣ್ಣೀರಿಟ್ಟು ಪಕ್ಷ ತೊರೆದಿದ್ದಾರೆ. ಹಾಸನದಲ್ಲಿ ಭಾರಿ ಕುತೂಹಲ ಕೆರಳಿಸಿದ್ದ ಕ್ಷೇತ್ರಗಳಲ್ಲಿ ಈ ರೀತಿ ಟಿಕೆಟ್ ಹಂಚಿಕೆಯಾಗಿದೆ. ಹಾಸನ: ಪ್ರಕಾಶ್, ಹೊಳೆನರಸೀಪುರ: ಎಚ್.ಡಿ. ರೇವಣ್ಣ, ಸಕಲೇಶಪುರ: ಕುಮಾರಸ್ವಾಮಿ ಹಾಗೂ ಬೇಲೂರು : ಲಿಂಗೇಶ್,

ಆದರೆ, ನೇರವಾಗಿ ದೇವೇಗೌಡರನ್ನು ದೂಷಿಸಿಲ್ಲ. ಶಾಸಕ ಶಿವಲಿಂಗೇಗೌಡ ಕೈವಾಡ ಇದು ಎಂದಿದ್ದಾರೆ. ಭವಾನಿ ರೇವಣ್ಣ ಅವರಿಗೆ ಅನುಕೂಲವಾಗಾಲೆಂದು ಈ ಮುಂಚೆ ನಡೆದಿದ್ದ ಪಿತೂರಿಯಿಂದ ಮನನೊಂದಿದ್ದು ನಿಜ ಎಂದಿದ್ದಾರೆ. ದೇವೇಗೌಡರ ನೆನೆದು ಮತ್ತೊಮ್ಮೆ ಕಣ್ಣೀರು ಹಾಕಿದ್ದಾರೆ. ಅಲ್ಲಿಗೆ ಬೇಲೂರು ಕ್ಷೇತ್ರದ ಕಥೆ ಮತ್ತೊಂದು ತಿರುವು ಪಡೆದಿದೆ.

ದೇವೇಗೌಡರು ಈ ರೀತಿ ವರ್ತಿಸಲು ಕಾರಣವೇನು? ಭವಾನಿ ರೇವಣ್ಣ ಸ್ಪರ್ಧೆಗೆ ಅಡ್ಡಿಯಾದ ಅಂಶಗಳು ಏನು? ತಮಗೆ ನಿಷ್ಠೆ ತೋರಿಸುತ್ತಿದ್ದ ಜವರೇಗೌಡರನ್ನು ಕಡೆಗಣಿಸಿದ್ದು ಏಕೆ? ಉತ್ತರಕ್ಕೆ ಮುಂದಿನ ಚಿತ್ರ ಸರಣಿ ನೋಡಿ

ಬೇಲೂರು: ದೊಡ್ಡಗೌಡ್ರು ನಡೆಸಿದ್ದೇ ಆಟ

ಬೇಲೂರು: ದೊಡ್ಡಗೌಡ್ರು ನಡೆಸಿದ್ದೇ ಆಟ

ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರೂ ಆಗಿರುವ ಜವರೇಗೌಡರಿಗೆ ಟಿಕೆಟ್ ಸಿಗಬೇಕಾದರೆ ದೇವೇಗೌಡರೇ ದಿಕ್ಕು ಎನ್ನಲಾಗಿತ್ತು. 2008ರಲ್ಲಿ ಮೂರನೇ ಸ್ಥಾನದಲ್ಲಿದ್ದ ಜೆಡಿಎಸ್ ಪಕ್ಷವನ್ನು ಒಂದೆರಡು ವರ್ಷದಲ್ಲೇ ಉತ್ತಮ ಮಟ್ಟಕ್ಕೇರಿಸಿದ್ದು ಜವರೇಗೌಡರು ಎಂಬುದನ್ನು ದೇವೇಗೌಡ್ರು ಮರೆತಿರಲಿಲ್ಲ.

ದೊಡ್ಡ ಗೌಡರು ನನ್ನನ್ನು ಮರೆತರೆ ರಾಜಕೀಯ ಸನ್ಯಾಸವೊಂದೇ ನನಗೆ ಉಳಿದಿರುವ ಮಾರ್ಗ ಎಂದು ಜವರೇಗೌಡರು ಸ್ಪಷ್ಟವಾಗಿ ಹೇಳಿದ್ದರು. ಕೊನೆಗೆ ನುಡಿದಂತೆ ನಡೆದರೆ, ಅದರೆ, ದೊಡ್ಡ ಗೌಡ್ರು ವ್ಯತಿರಿಕ್ತವಾಗಿ ಆಡಿದರು.

ಬೇಲೂರು: ದೊಡ್ಡಗೌಡ್ರು ನಡೆಸಿದ್ದೇ ಆಟ

ಬೇಲೂರು: ದೊಡ್ಡಗೌಡ್ರು ನಡೆಸಿದ್ದೇ ಆಟ

ಕ್ಷೇತ್ರದಲ್ಲಿ ಮೊಮ್ಮಗ ಪ್ರಜ್ವಲ್ ಅವರ ರಾಜಕೀಯ ಓಡಾಟ ದೊಡ್ಡಗೌಡರಿಗೆ ತಲೆನೋವಾಗಿತ್ತು. ಬೇಲೂರು ನಗರದ ಮುನ್ಸಿಪಾಲ್ ಕೌನ್ಸಿಲ್ ನ ಮಾಜಿ ಅಧ್ಯಕ್ಷ ಬಿ.ಸಿ ಮಂಜುನಾಥ್ ಹೆಸರನ್ನು ತೇಲಿ ಬಿಡಲಾಗಿತ್ತು.

ಈ ಸಂದರ್ಭದಲ್ಲಿ ದೇವೇಗೌಡರ ಸಂಪರ್ಕಿಸಲು ಸಾಧ್ಯವಾಗದೆ ಜವರೇಗೌಡರು ಪರಿತಪಿಸುತ್ತಿದರು. ಹೀಗಾಗಿ ಬೇಲೂರು ಜೆಡಿಎಸ್ ಡೋಲಾಯಮಾನ ಸ್ಥಿತಿಯಲ್ಲಿತ್ತು. ಭವಾನಿ ಹಾಗೂ ಜವರೇಗೌಡ ನಡುವಿನ ಸಂಘರ್ಷ ಒಡೆಯಲು ಗೌಡರು ಮತ್ತೊಬ್ಬ ಅಭ್ಯರ್ಥಿಯ ಹೆಗಲ ಮೇಲೆ ಕೈ ಇಟ್ಟರು

ಬೇಲೂರು: ದೊಡ್ಡಗೌಡ್ರು ನಡೆಸಿದ್ದೇ ಆಟ

ಬೇಲೂರು: ದೊಡ್ಡಗೌಡ್ರು ನಡೆಸಿದ್ದೇ ಆಟ

ಜೆಡಿಎಸ್ ಯುವ ಕಾರ್ಯಕರ್ತ ಕೂಡಾ ಆಗದಿರುವ ಪ್ರಜ್ವಲ್ ಅವರ ಜನಪ್ರಿಯತೆಗೇನೂ ಕಮ್ಮಿಯಿಲ್ಲ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳ ಪರ ಪ್ರಜ್ವಲ್ ಪ್ರಚಾರ ಕೂಡಾ ನಡೆಸಿದ್ದರು.

ಬೇಲೂರು ಕ್ಷೇತ್ರಕ್ಕೆ ಬೇಲೂರು ಮೂಲದವರನ್ನೇ ಆಯ್ಕೆಮಾಡಲಾಗುತ್ತದೆ ಎಂದು ಎಲ್ಲೆಡೆ ಪ್ರಜ್ವಲ್ ಪ್ರಚಾರ ಮಾಡತೊಡಗಿದ್ದರು. ಈ ಮೂಲಕ ತನ್ನ ತಾಯಿ ಸ್ಪರ್ಧೆಗೆ ಅಖಾಡ ಸಿದ್ಧಪಡಿಸಿ, ಪರೋಕ್ಷವಾಗಿ ಜವರೇ ಗೌಡರೇ ಇದು ನಿಮ್ಮ ಕ್ಷೇತ್ರವಲ್ಲ ಎಂದು ಸೂಚಿಸಿದ್ದರು. ಅದರೆ, ಪ್ರಜ್ವಲ್ ಸಾಹಸ ಈಗ ವ್ಯರ್ಥವಾಗಿದೆ.

ಬೇಲೂರು: ದೊಡ್ಡಗೌಡ್ರು ನಡೆಸಿದ್ದೇ ಆಟ

ಬೇಲೂರು: ದೊಡ್ಡಗೌಡ್ರು ನಡೆಸಿದ್ದೇ ಆಟ

* ಬೇಲೂರು ಕ್ಷೇತ್ರದಲ್ಲಿ ಭವಾನಿ ಮೇಡಂ ಅಲೆ ಎದ್ದಿದ್ದು ನಿಜ. ಮೇಡಂಗೆ ಟಿಕೆಟ್ ಕೊಡಿ ಎಂದು ಮಹಿಳಾ ಘಟಕ ಒತ್ತಾಯ ಮಾಡಿತ್ತು.

* ಜೆಡಿಎಸ್ ವಿಪಕ್ಷ ನಾಯಕ ಎಚ್. ಡಿ ರೇವಣ್ಣ ಅವರ ಪುತ್ರ 23 ವರ್ಷದ ಪ್ರಜ್ವಲ್ ರೇವಣ್ಣ ಅವರು 62 ವರ್ಷದ ಹಿರಿಯ ನಾಯಕ, ಮಾಜಿ ರಾಜ್ಯಸಭಾ ಸದಸ್ಯ ಎಚ್ ಕೆ ಜವರೇ ಗೌಡ ಅವರ ಮನಸ್ಸಿಗೆ ಘಾಸಿ ಮಾಡಿಬಿಟ್ಟಿದ್ದರು.

* ಹೀಗಾಗಿ ಆ ಸಂದರ್ಭಕ್ಕೆ ತಕ್ಕಂತೆ ಬೇಲೂರು ಕ್ಷೇತ್ರದ ಸ್ಪರ್ಧಿಯಾಗಿ ಜವರೇಗೌಡರೇ ಇಳಿಯಲಿದ್ದಾರೆ ಎಂದು ದೊಡ್ಡಗೌಡರು ಕೂಡಾ ಭರವಸೆ ನೀಡಿದ್ದರು. ಆದ್ರೆ ಉಲ್ಟಾ ಹೊಡೆದರು

ಬೇಲೂರು: ದೊಡ್ಡಗೌಡ್ರು ನಡೆಸಿದ್ದೇ ಆಟ

ಬೇಲೂರು: ದೊಡ್ಡಗೌಡ್ರು ನಡೆಸಿದ್ದೇ ಆಟ

ನನ್ನ ರಾಜಕೀಯ ಜೀವನದ ಕೊನೆಗಾಲದಲ್ಲಿ ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಕರುಣಾನಿಧಿ ತಂದುಕೊಂಡಿರುವ ಸ್ಥಿತಿಯನ್ನು ನಾನು ತಂದುಕೊಳ್ಳಲು ಇಷ್ಟಪಡುವುದಿಲ್ಲ. 'ನನ್ನನ್ನು ಕರುಣಾನಿಧಿ ಸ್ಥಿತಿಗೆ ದೂಡಬೇಡಿ' ಎಂದು ಗೌಡ್ರು ಟವೆಲ್ ಕೊಡವಿಕೊಂಡು ಎದ್ದಿದ್ದು ಇದೇ ಮೊದಲಲ್ಲ.

ಆದರೆ, ಜವರೇಗೌಡ ಅವರಿಗೆ ಟಿಕೆಟ್ ತಪ್ಪಿಸಿದ್ದರಲ್ಲಿ ಅರ್ಥವಿಲ್ಲ. ಅರ್ಥ ಗೌಡರಿಗೆ ಮಾತ್ರ ಗೊತ್ತಿರಬಹುದು. ಒಂದೇ ಏಟಿಗೆ ಇಬ್ಬರನ್ನು ಹೊಡೆದರೂ ಎರಡೂ ಕಡೆಯಿಂದ ಸೋಲು ಗೌಡರಿಗೆ ತಟ್ಟಿದೆ. ಬೇಲೂರು ಕ್ಷೇತ್ರ ಉಳಿಸಿಕೊಂಡರೆ ಜೆಡಿಎಸ್ ಲಕ್

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
JDS supremo HD Deve gowda finally plays a reverse politicas by not giving ticket to Bhavani Revanna and Javare Gowda for Belur assembly Constituency. Former Prime Minister Deve Gowda said He don't want to mess up his life like M Karunanidhi and suffer due to family politics and Bhavani will not be entering politics now.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more