ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕದಲ್ಲಿ ಅವಳಿ ಸ್ಫೋಟ: ಸೌದಿ ಯುವಕ ವಶಕ್ಕೆ

By Srinath
|
Google Oneindia Kannada News

ಬೋಸ್ಟನ್, ಏ.16: 'ದೇಶ ಪ್ರೇಮಿಗಳ ದಿನ' ಅಮೆರಿಕದ ಪ್ರತಿಷ್ಠೆಗೆ ಮತ್ತೊಮ್ಮೆ ಪೆಟ್ಟುಕೊಟ್ಟ ಸರಣಿ ಸ್ಫೋಟದ ರೂವಾರಿ ಎನ್ನಲಾದ ಆರೋಪಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಘಟನೆ ನಡೆದ 2 ಗಂಟೆಗಳಲ್ಲೇ ಪೊಲೀಸರು ಆರೋಪಿಯನ್ನು ಗುರುತಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗಮನಾರ್ಹವೆಂದರೆ ಪಾಕಿಸ್ತಾನದ ತಾಲಿಬಾನಿಗಳು ತಮಗೂ ಅಮೆರಿಕದಲ್ಲಿ ನಡೆದ ಅವಳಿ ಸ್ಫೋಟಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Boston Marathon twin blasts- Saudi national held

ಶಂಕಿತ ಆರೋಪಿ ಸೌದಿ ಅರೇಬಿಯಾದ ಪ್ರಜೆ. ಸೋಮವಾರ ಮಧ್ಯಾಹ್ನ ನಡೆದಿರುವ ಭಯೋತ್ಪಾದಕ ದಾಳಿಯಲ್ಲಿ ಒಂದು ಮಗು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ. ಶಂಕಿತ ಆರೋಪಿ ಸುಮಾರು 20 ವರ್ಷದವನಾಗಿದ್ದು. ಸ್ಫೋಟದಲ್ಲಿ ಸ್ವತಃ ಗಾಯಗೊಂಡಿದ್ದಾನೆ. ಪ್ರಸ್ತುತ, ಬೋಸ್ಟನ್ ಆಸ್ಪತ್ರೆಯೊಂದರಲ್ಲಿ ತನಿಖಾಧಿಕಾರಿಗಳು ಅವನಿಗೆ ಚಿಕಿತ್ಸೆ ನೀಡುತ್ತಿದ್ದು, ವಿಚಾರಣೆಯನ್ನೂ ನಡೆಸುತ್ತಿದ್ದಾರೆ.

ಪ್ರತ್ಯಕ್ಷದರ್ಶಿಗಳು ವರ್ಣಿಸಿದಂತೆ ಶಂಕಿತ ವ್ಯಕ್ತಿ ಘಟನಾ ಸ್ಥಳದಲ್ಲಿ ಸಂಶಯಾಸ್ಪದವಾಗಿ ಕಾಣಿಸಿಕೊಂಡಿದ್ದ. ಶಂಕಿತ ಆರೋಪಿಯ ಬಗ್ಗೆ ಹೆಚ್ಚಿನ ನಿಗಾವಹಿಸಲಾಗಿದೆ. ಪೂರ್ವಾಪರ ವಿಚಾರಿಸಲಾಗುತ್ತಿದೆ.

ಅವಳಿ ಸ್ಫೋಟಗಳು ''ಭಯೋತ್ಪಾದನೆಯ ಕೃತ್ಯ'' ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಮತ್ತು ಈ ಪ್ರಕರಣವನ್ನು ಭಯೋತ್ಪಾದಕ ಕೃತ್ಯ ಎಂದೇ ಪರಿಗಣಿಸಲಾಗುತ್ತದೆ ಎಂದು ಶ್ವೇತಭವನದ ಅಧಿಕಾರಿಗಳು ತಿಳಿಸಿದ್ದಾರೆ.

English summary
Boston Marathon twin blasts- Saudi national held. A Saudi national is being held in custody by US investigators in relation to the twin explosions that rocked the Boston Marathon on Patriots’ Day on Monday, killing at least three people and injuring more than 140, according to a CBS News report.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X