ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಾಗಲೂರು : ದಂಪತಿ ಕಟ್ಟಿ ಹಾಕಿ ದರೋಡೆ

|
Google Oneindia Kannada News

robbed
ಬೆಂಗಳೂರು, ಏ.16 : ನಗರದ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳ್ಳಂಬೆಳಗ್ಗೆ ದರೋಡೆ ನಡೆದಿದೆ. ಮನೆಗೆ ನುಗ್ಗಿದ್ದ ಐವರು ಮುಸುಕುಧಾರಿ ದುಷ್ಕರ್ಮಿಗಳು ಮನೆಯಲ್ಲಿದ್ದ ದಂಪತಿಗಳ ಕೈ ಕಾಲು ಕಟ್ಟಿ ಹಾಕಿ, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳನ್ನು ದೋಚಿದ್ದಾರೆ.

ಬಾಗಲೂರು ಠಾಣಾ ವ್ಯಾಪ್ತಿಯ ಶ್ರೀನಿವಾಸ ಲೇಔಟ್ ನಲ್ಲಿ ವಾಸವಾಗಿರುವ ಉದ್ಯಮಿ, ಬಿಲ್ಡರ್ ರೇಣುಕಾಪ್ರಸಾದ್ ಮನೆಗೆ ಮಂಗಳವಾರ ತಡರಾತ್ರಿ ನುಗ್ಗಿದ ಐವರು ದರೋಡೆ ಕೋರರು, ರೇಣುಕಾಪ್ರಸಾದ್ ಮತ್ತು ಅವರ ಹೆಂಡತಿಯ ಕೈ ಕಾಲು ಕಟ್ಟಿ ಹಾಕಿ ಹಣ, ಒಡವೆ ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ದೋಚಿದ್ದಾರೆ.

ಶ್ರೀನಿವಾಸ ಲೇಜೌಟ್ ನ ರೇಣುಕಾ ಪ್ರಸಾದ್ ಅವರ ಭವ್ಯವಾದ ಮನೆಯ ಕಿಟಕಿ ಮುರಿದು ಮನೆಯೊಳಗೆ ನುಗ್ಗಿರುವ ದರೋಡೆ ಕೋರರು ಈ ಕೃತ್ಯ ಎಸಗಿದ್ದಾರೆ. 250 ಗ್ರಾಂ ಚಿನ್ನ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ನಗದನ್ನು ದೋಚಿ ಪರಾರಿಯಾಗಿದ್ದಾರೆ.

ಬಾಗಲೂರು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ದರೋಡೆ ಕೋರರು ಹಿಂದಿ ಮಾತನಾಡುತ್ತಿದ್ದರು ಎಂದು ರೇಣುಕಾಪ್ರಸಾದ್ ದಂಪತಿ ಪೊಲೀಸರಿಗೆ ತಿಳಿಸಿದ್ದಾರೆ. ಈಶಾನ್ಯ ವಲಯ ಡಿಸಿಪಿ ಸುರೇಶ್ ಸಹ ದರೋಡೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದರು.

ಘಟನೆ ನೆಡೆದದ್ದು ಹೇಗೆ : ತಡರಾತ್ರಿ ಎರಡು ಗಂಟೆಯ ವೇಳೆಗೆ ನಾಲ್ಕುಮಂದಿ ಕಾವಲುಗಾರರ ಕಣ್ಣು ತಪ್ಪಿಸಿ ದರೋಡೆ ಕೋರರು ಮನೆಗೆ ನುಗ್ಗಿದ್ದಾರೆ. ಮುಂಬಾಗಿಲಿನ ಪಕ್ಕದ ಗ್ರಿಲ್ ಬಿಚ್ಚಲು ಯತ್ನಿಸುತ್ತಿದ್ದರು. ತಕ್ಷಣ ಎಚ್ಚರಗೊಂಡ ರೇಣುಕಾ ಪ್ರಸಾದ್ ಅವರನ್ನು ಹಿಡಿಯಲು ಯತ್ನಿಸಿದ್ದಾರೆ. ತಕ್ಷಣ ಮೂವರು ಅವರನ್ನು ಚೆನ್ನಾಗಿ ಥಳಿಸಿದ್ದಾರೆ.

ರೇಣುಕಾ ಪ್ರಸಾದ್ ಕೂಗಾಟ ಕೇಳಿ ಹೆಂಡತಿ ಹೊರಗೆ ಬಂದಿದ್ದಾರೆ. ದರೋಡೆ ಕೋರರು ಇಬ್ಬರ ಕೈ ಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ ರೂಂ ನಲ್ಲಿ ಕೂಡಿ ಹಾಕಿದ್ದಾರೆ. ಬೆಳಗ್ಗೆ ಮನೆ ಕೆಲಸದವಳು ಬಂದಾರ ಪ್ರಕರಣ ಬೆಳಕಿಗೆ ಬಂದಿದೆ.

ಕಾವಲುಗಾರರ ಮೇಲೆ ಕಣ್ಣು : ದರೋಡೆ ಕೋರರು ಬಂದಾಗ ಕಾವಲುಗಾರರು ಏನು ಮಾಡುತ್ತಿದ್ದರು ಎಂಬುದು ಪೊಲೀಸರ ಸಂಶಯಕ್ಕೆ ಕಾರಣವಾಗಿದೆ. ಇಬ್ಬರು ಕಾವಲುಗಾರರು ಕಳೆದ ವಾರ ಕೆಲಸ ಬಿಟ್ಟು ತೆರಳಿದ್ದರು. ಅವರು ಈ ಕೃತ್ಯ ಎಸಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

English summary
Five persons robbed Jewellery and cash in Bagalur police station limits on Tuesday, April 16 early morning. In Shrinivas nagar five persons enter into Renuka prasad house and robbed Jewellery and cash. police reached the place.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X