ಪಾರ್ಟಿಯಲ್ಲಿ ರೇಪ್: ಹದಿನಾರರ ಬಾಲಕಿ ನೆಣಿಗೆ

Gangraped at party teenage girl commits suicide san jose California
ಸ್ಯಾನ್ ಹೋಸೆ, ಏ.13: ಎಂಟು ದಿನಗಳ ಹಿಂದೆ ಪಾರ್ಟಿಯೊಂದರಲ್ಲಿ ಅತ್ಯಾಚಾರಕ್ಕೀಡಾಗಿ, ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದ ಹದಿಹರಯದ ಬಾಲಕಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಪಾರ್ಟಿಯಲ್ಲಿ ಅತ್ಯಾಚಾರ ನಡೆದ ಆ ದೃಶ್ಯವಾಳಿಗಳನ್ನು ಫೇಸ್ ಬುಕ್ ಮೂಲಕ ಅಂತರ್ಜಾಲದಲ್ಲಿ ಹರಿಯಬಿಟ್ಟಿದ್ದರಿಂದ ಘಾಸಿಗೊಂಡ ಬಾಲಕಿ ಸಾವಿಗೆ ಶರಣಾಗಿದ್ದಾಳೆ ಎಂದು ತಿಳಿದುಬಂದಿದೆ. ಘಟನೆ ನಡೆದ ಏಳು ತಿಂಗಳ ತರುವಾಯ ಉತ್ತರ ಕ್ಯಾಲಿಫೋರ್ನಿಯಾದ ಪೊಲೀಸರು ಹದಿಹರಯದ ಮೂವರು ಬಾಲಕರನ್ನು ಬಂಧಿಸಿದ್ದಾರೆ.

ಸಾಕರ್ ಆಟವೆಂದರೆ ಪ್ರಾಣ ಬಿಡುತ್ತಿದ್ದ, ಕುದುರೆ ಸವಾರಿ ಹುಚ್ಚಿನ, ಕಲಾಭಿಮಾನಿಯೂ ಆಗಿದ್ದ, ಸುಂದರ ನಗುವಿನ, ಉದ್ದನೆಯ ಕಪ್ಪು ಕೇಶರಾಶಿಯ, ಫಳಫಳ ಹೊಳೆಯುವ ಕಣ್ಣುಗಳ ಬಾಲಕಿ ಮೃತಪಟ್ಟಿರುವುದಕ್ಕೆ ಆಕೆಯ ಪೋಷಕರು ದುಃಖತಪ್ತರಾಗಿದ್ದಾರೆ.

ಪಾರ್ಟಿ ಹಾಲಿನಲ್ಲಿ ಬಾಲಕಿ ಪ್ರಜ್ಞಾಶೂನ್ಯಳಾಗಿ ಬಿದ್ದುಕೊಂಡಿದ್ದಾಗ ಆಕೆಯ ಹೈಸ್ಕೂಲ್ ಗೆಳೆಯರು ಆಕೆಯ ಮೇಲೆ ಮನಸೋ ಇಚ್ಛೆ ಬಲಾತ್ಕಾರ ಮಾಡಿದ್ದಾರೆ. ಜತೆಗೆ ತಮ್ಮ ಮೊಬೈಲುಗಳಲ್ಲಿ ಆ ದೃಶ್ಯಗಳನ್ನು ಚಿತ್ರೀಕರಿಸಿಕೊಂಡು ಫೇಸ್ ಬುಕ್ ನಲ್ಲೂ ಪೋಸ್ಟ್ ಮಾಡಿದ್ದಾರೆ.

ಆರೋಪಿಗಳು ಮತ್ತು ಬಾಧಿತ ಬಾಲಕಿ Saratoga High School ನಲ್ಲಿ ವ್ಯಾಸಂಗ ಮಾಡುತ್ತಿದ್ದರು. ಆರೋಪಿಗಳು ಅಪ್ರಾಪ್ತ ವಯಸ್ಸಿನವರಾಗಿರುವುದರಿಂದ ಅವರ ಹೆಸರು, ವಿವರಗಳನ್ನು ಪೊಲೀಸರು ಬಹಿರಂಗಪಡಿಸಿಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+