ಶಾಲಾ ಶಿಕ್ಷಕಿಯ ಮೇಲೆ ನಿರಂತರ ಅತ್ಯಾಚಾರ

young-school-teacher-gang-raped-in-pakistan
ಖಾನೆವಾಲ್, (ಮುಲ್ತಾನ್), ಏ.12: ಯುವ ಶಿಕ್ಷಕಿಯೊಬ್ಬರನ್ನು ಅಪಹರಿಸಿ, ಎರಡು ದಿನಗಳ ಕಾಲ ನಿರಂತರವಾಗಿ ಅತ್ಯಾಚಾರವೆಸಗಿ, ಆನಂತರ ನಿರ್ಜನ ಪ್ರದೇಶವೊಂದರಲ್ಲಿ ತಳ್ಳಿ ಬಿಟ್ಟಿರುವ ಪ್ರಕರಣ ಗುರುವಾರ ಬೆಳಕಿಗೆ ಬಂದಿದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಮುಲ್ತಾನ್ ಪಟ್ಟಣದ ಖಾನೆವಾಲ್ ಪ್ರದೇಶದಲ್ಲಿ ಈ ಘಟನೆ ನಡೆದಿದೆ.

ಮಾನಸಿಕವಾಗಿ ಮತ್ತು ದೈಹಿಕವಾಗಿ ತೀವ್ರವಾಗಿ ಆಘಾತಗೊಂಡಿರುವ ಶಿಕ್ಷಕಿಗೆ ತಕ್ಷಣ ಶಸ್ತ್ರಚಿಕಿತ್ಸೆ ಮಾಡಬೇಕಾದ ಜರೂರತ್ತು ಇದೆ ಎಂದು ಸ್ಥಳೀಯ ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ.

26 ವರ್ಷದ ಯುವತಿ ಬಾಧಿತ ಶಾಲಾ ಶಿಕ್ಷಕಿ. ಸೋಮವಾರ ಬೆಳಗ್ಗೆ (ಏಪ್ರಿಲ್ 8) ಶಾಲೆಗೆ ತೆರಳುತ್ತಿದ್ದ ಶಿಕ್ಷಕಿಯನ್ನು ಬಲತ್ಕಾರವಾಗಿ ವಾಹನದೊಳಕ್ಕೆ ಎಳೆದೊಯ್ದು, ನಿರ್ಜನ ಪ್ರದೇಶದಲ್ಲಿ ಈ ಕೃತ್ಯ ಎಸಗಲಾಗಿದೆ. ಆನಂತರ ಅತ್ಯಾಚಾರಿಗಳು ಶಿಕ್ಷಕಿಯನ್ನು ಪಕ್ಕದ ಊರಿನಲ್ಲಿ ಬಿಟ್ಟು ಹೋಗಿದ್ದಾರೆ.

3 ಜನ ಬಂದು ಕಾರಿನಲ್ಲಿ ನನ್ನನ್ನು ಅಪಹರಿಸಿದರು. ಬಳಿಕ, ನಿರ್ಜನ ಪ್ರದೇಶದಲ್ಲಿ 5 ಮಂದಿ ನನ್ನನ್ನು ಚಿತ್ರಹಿಂಸೆಗೆ ಗುರಿಪಡಿಸಿ, ನಿರಂತರವಾಗಿ ಅತ್ಯಾಚಾರ ನಡೆಸಿದರು ಎಂದು ಶಿಕ್ಷಕಿ ಹೇಳಿಕೊಂಡಿದ್ದಾರೆ.

ಶಿಕ್ಷಕಿಯನ್ನು ಬೆದರಿಸಿ ಕಾರಿನಲ್ಲಿ ಹತ್ತಿಸಿಕೊಂಡು ಹೋಗುತ್ತಿದ್ದ ದೃಶ್ಯವನ್ನು ಮಹಿಳೆಯೊಬ್ಬರು ನೋಡಿದ್ದರಾದರೂ, ತಕ್ಷಣವೇ ಯಾರಿಗೂ ಸುದ್ದಿ ತಿಳಿಸದೆ ಮೌನವಾಗಿದ್ದು, ಇದೀಗ ಎಲ್ಲಾ ಮುಗಿದ ಮೇಲೆ ಪೊಲೀಸರ ಮುಂದೆ ಶಿಕ್ಷಕಿಯ ಅಪಹರಣವನ್ನು ತಾನು ಕಣ್ಣಾರೆ ಕಂಡಿದ್ದಾಗಿ ಸಾಕ್ಷ್ಯ ಹೇಳಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಸಂಶಯಾಸ್ಪದ ವ್ಯಕ್ತಿಗಳ ಮೇಲೆ ಹದ್ದಿನ ಕಣ್ಣಿಟ್ಟು ತನಿಖೆ ನಡೆಸುತ್ತಿದ್ದಾರೆ. ನಿರ್ಜನ ಪ್ರದೇಶವೊಂದರಲ್ಲಿ ಬಿದ್ದಿದ್ದ ಶಿಕ್ಷಕಿಯನ್ನು ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ಸಾಗಿಸಿ ಸೂಕ್ತ ಚಿಕಿತ್ಸೆ ಕೊಡಿಸಲಾಗಿದ್ದು, ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+