ರಸ್ತೆ ಬದಿಯಲ್ಲಿ ಕಾಮಕೇಳಿ: Googleನಲ್ಲಿ ಸೆರೆ

ನಿರ್ಮಾನುಷ ಬಟಾಬಯಲಿನಲ್ಲಿ ಇದೆಲ್ಲಾ ಹೇಗೆ ಬಯಲಾಯಿತು ಅಂದರೆ Google Street View ತಂತ್ರಜ್ಞಾನದ ಫಲ ಇದು. ಅಂದರೆ ಈ Google ಕ್ಯಾಮರಾ ಕಣ್ಣು ಸರ್ವಾಂತರಯಾಮಿಯಾಗಿದ್ದು, ಯಾವಾಗ, ಏನು ಮಾಡಬೇಕು, ಮಾಡಬಾರದು ಎಂಬುದರ ಪರಿಜ್ಞಾನವಿದ್ದು ಮುಂದುವರಿಯುವುದು ಕ್ಷೇಮ, ಇಲ್ಲವಾದಲ್ಲಿ ಈ ಆಸ್ಟ್ರೇಲಿಯಾದ ಯುವ ದಂಪತಿಯ ಹಾಗೆ ಎಲ್ಲಾ ಬಯಲೋ ಶಿವನೇ ಎಲ್ಲಾ ...
ಆ ದಂಪತಿ ತಮ್ಮ ಕಾರಿನಲ್ಲಿ (ಪಕ್ಕದ ಚಿತ್ರ) ಲೋಕ ಸಂಚಾರ ಹೊರಟಿದ್ದರು. ಅದೂ ಗ್ರಾಮೀಣ ಭಾಗದ ಆಸ್ಟ್ರೇಲಿಯಾದಲ್ಲಿ. ಎಲ್ಲಿ, ಏನು ಪ್ರೇರಣೆ ಸಿಕ್ಕಿತೋ ಅಂತೂ ಬೆಳ್ಳಿ ಬಣ್ಣದ ತಮ್ಮ ಸೆಡಾನ್ ಕಾರನ್ನು ಪೊದೆಯ ಸಾಲಿನಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದವರೇ... ಅದನ್ನು ಮಾಡಿ ಮುಗಿಸಿದ್ದಾರೆ.
ಕೆಟ್ಟ ಕುತೂಹಲದ ಸಂಗತಿಯೆಂದರೆ ಚಿತ್ರಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಯಾವುದೇ ಮುಜುಗುರ/ ಆತಂಕವಿಲ್ಲದೆ ದಂಪತಿ ಸ್ವಚ್ಚಂದ ಕಾಮಕೇಳಿಯಲ್ಲಿ ತೊಡಗಿದೆ ಎಂಬುದು ಗೋಚರವಾಗುತ್ತದೆ.
ಸಾಮಾಜಿಕ ಜಾಲ ತಾಣದಲ್ಲಿ ಈ ಫೋಟೋ ನುಸುಳಿದ್ದು, ಅಂತರ್ಜಾಲದಲ್ಲಿ ಈಗ ಸಖತ್ 'ಹಿಟ್' ಗಳಿಸಿ ಕೊಡುತ್ತಿದೆ. ಕಾರಿನ ಬಂಪರಿಗೆ ಆನಿಕೊಂಡು ಯುವ ಜೋಡಿ ಈ ಕೆಲಸ ಮಾಡಿಮುಗಿಸಿದೆ. ಅದಷ್ಟೂ ಸಾದ್ಯಂತವಾಗಿ ಗೂಗಲಿನಲ್ಲಿ ಸೆರೆ ಸಿಕ್ಕಿದೆಯಾದರೂ ಗೂಗಲ್ ಆನಂತರ ಅದನ್ನು ಎಡಿಟ್ ಮಾಡಿದೆ.
ದಕ್ಷಿಣ ಆಸ್ಟ್ರೇಲಿಯಾದ ಕೀತ್ ಪಟ್ಟಣದಲ್ಲಿ ಡ್ಯೂಕ್ಸ್ ಹೆದ್ದಾರಿಯಲ್ಲಿ ಈ ಸಚಿತ್ರ ಘಟನೆ ನಡೆದಿದೆ.












Click it and Unblock the Notifications