KMF ರೆಡ್ಡಿ ಸ್ಪರ್ಧಿಸುತ್ತಿಲ್ಲ; ರೆಡ್ಡಿ-ರಾಮುಲು ಬಿರುಕು

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಎಸ್ಸಾರ್ ಒಂದಿನಿತೂ ಯಶಸ್ಸು ಕಾಣದಿರುವುದು ರೆಡ್ಡಿಗಳಿಗೆ ಭ್ರಮನಿರಸನವಾದಂತಿದೆ. ಜತೆಗೆ ಬಳ್ಳಾರಿ ಕಾಂಗ್ರೆಸ್ ಪಾಲಾಗಿದ್ದು, ಮುಂದಿನ ಚುನಾವಣೆಯಲ್ಲಿ ತಮ್ಮ ಕೈತಪ್ಪುವುದು ಖಚಿತ ಎಂಬುದು ರೆಡ್ಡಿಗಳನ್ನು ಮತ್ತಷ್ಟು ಕಂಗೆಡೆಸಿದೆ.
ಇದರಿಂದ ಬೇಸತ್ತು KMF ಸೋಮಶೇಖರ ರೆಡ್ಡಿ ಈ ಬಾರಿ ಸ್ಪರ್ಧಿಸುತ್ತಿಲ್ಲ ಎಂದೂ ತಿಳಿದುಬಂದಿದೆ. ಇದೇ ವೇಳೆ, ರಾಮುಲು ಮೊನ್ನೆ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಹರಪನಹಳ್ಳಿಯಲ್ಲಿ ಬಿಜೆಪಿಯ ಗಾಲಿ ಕರುಣಾಕರ ರೆಡ್ಡಿ ಅವರ ವಿರುದ್ಧ ರೆಡ್ಡಿ ಕುಟುಂಬದ ಆತ್ಮೀಯ ಸಿರಾಜ್ ಶೇಖ್ ಅವರನ್ನು ಕಣಕ್ಕಿಳಿಸಿರುವುದೂ ಇಂಟರೆಸ್ಟಿಂಗ್ ಆಗಿದೆ.
ಈ ಮಧ್ಯೆ, ಜಾಮೀನು ಕೋರಿ ಜನಾರ್ದನ ರೆಡ್ಡಿ ಅವರು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದಾರೆ. ಇಂದು ಅರ್ಜಿಯ ವಿಚಾರಣೆ ನಡೆಯಲಿದೆ. ಜಾಮೀನು ಸಿಕ್ಕಿದರೆ ಜನಾರ್ದನ ರೆಡ್ಡಿ ನೇರವಾಗಿ ಚುನಾವಣೆ ಪ್ರಚಾರದಲ್ಲಿ ಪಾಲ್ಗೊಳ್ಳುವ ಸಾಧ್ಯತೆಯಿದೆ.
ಇದೇ ವೇಳೆ, ಬಿಎಸ್ಸಾರ್ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದರೂ ಕಂಪ್ಲಿ ಶಾಸಕ ಸುರೇಶ್ ಬಾಬು ಮತ್ತು ಜನಾರ್ದನ ರೆಡ್ಡಿ ಸಹೋದರ ಕೆಎಂಎಫ್ ಅಧ್ಯಕ್ಷ ಸೋಮಶೇಖರ್ ರೆಡ್ಡಿ ಅವರು ಪಕ್ಷೇತರರಾಗಿ ಸ್ಪರ್ಧಿಸುವ ಬಗ್ಗೆಯೂ ಆಲೋಚನಬೆ ನಡೆದಿದೆ ಎಂದು ಬಳ್ಳಾರಿ ಮೂಲಗಳು ತಿಳಿಸಿವೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications