ಹೆಂಡ್ತಿ, ಅತ್ತೆ ವರದಕ್ಷಿಣೆ ಕಾಟ: ಟೆಕ್ಕಿ ನೇಣಿಗೆ ಬಲಿ

36 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಮನೋಜ್ ಕುಮಾರ್ ಮೃತ ದುರ್ದೈವಿ. ಪಿಜಿ ಹಾಸ್ಟೆಲಿನಲ್ಲಿ ತಂಗಿದ್ದ ಮನೋಜ್, ಸೀಲಿಂಗ್ ಫ್ಯಾನಿಗೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾರೆ.
ಪ್ರಮುಖ ಐಟಿ ಕಂಪನಿಯೊಂದರಲ್ಲಿ ಟೆಕ್ಕಿಯಾಗಿದ್ದ ಮನೋಜ್, ಡೆತ್ ನೋಟ್ ಬರೆದಿಟ್ಟಿದ್ದು, ಪತ್ನಿ ಮತ್ತು ಅತ್ತೆಯ ಕಾಟ ತಾಳಲಾರದೆ ಸಾವಿಗೆ ಶರಣಾಗುತ್ತಿರುವುದಾಗಿ ತಿಳಿಸಿದ್ದಾರೆ. ಮನೋಜ್ ಎರಡೂವರೆ ವರ್ಷದ ಹಿಂದೆ ಮದುವೆಯಾಗಿದ್ದರು. ಆಕೆಯೂ ಟೆಕ್ಕಿಯಾಗಿದ್ದರು. ದಂಪತಿಗೆ 1 ವರ್ಷದ ಮಗುವೂ ಇದೆ.
ನನ್ನ ಅಣ್ಣನ ವಿರುದ್ಧ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸುವುದಾಗಿ ಅತ್ತಿಗೆ ಮತ್ತು ಆಕೆಯ ಮನೆಯವರು ಅಣ್ಣನಿಗೆ ಬೆದರಿಸುತ್ತಿದ್ದರು. ಆರ್ ಟಿ ನಗರದಲ್ಲಿ ಮನೆ ಮಾಡಿಕೊಂಡು ಅಣ್ಣ-ಅತ್ತಿಗೆ ವಾಸವಾಗಿದ್ದರು.
ಇವರ ಕಾಟ ತಾಳಲಾರದೆ ಅಣ್ಣ ಶಾಂತಿನಿಕೇನತ್ ಲೇಔಟಿನಲ್ಲಿ ಪಿಜಿ ಹಾಸ್ಟೆಲಿನಲ್ಲಿ ವಾಸವಾಗಿದ್ದ' ಎಂದು ಮೃತ ಮನೋಜನ ಸೋದರ ಪೊಲೀಸರಿಗೆ ತಿಳಿಸಿದ್ದಾರೆ. ಎಚ್ಎಎಲ್ ಪೊಲೀಸರು ಮನೋಜ್ ಪತ್ನಿ ಮತ್ತು ಆಕೆಯ ತಾಯಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸುತ್ತಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications