ಎರಡು ಮದುವೆ: ಸಿಸ್ಕೊ ಟೆಕ್ಕಿ ಗೋಪಾಲ್ ನೇಣಿಗೆ

ರಾಮಮೂರ್ತಿ ನಗರದ ಗ್ರೀನ್ ಪಾರ್ಕ್ ಅಪಾರ್ಟ್ ಮೆಂಟ್ ನಿವಾಸಿ ಎಂ ಗೋಪಾಲ್ ಕುಮಾರ್ (33) ಮೃತರು. ತಮಿಳುನಾಡು ಈರೋಡ್ ಮೂಲದ ಗೋಪಾಲ್, ನಗರದ Cisco ಐಟಿ ಕಂಪನಿಯ ಪರೀಕ್ಷಾ ವಿಭಾಗದಲ್ಲಿ ಇಂಜಿನಿಯರ್ ಆಗಿ ಕರ್ತವ್ಯದಲ್ಲಿದ್ದರು. ಮೃತ ಗೋಪಾಲ್ ತೀವ್ರವಾಗಿ ಮಾನಸಿಕ ಖಿನ್ನತೆಗೊಳಗಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಎರಡನೆಯ ಪತ್ನಿ ಗೀತಾ ಹಾಗೂ ಮೊದಲ ಪತ್ನಿಯ ಮಗನೊಂದಿಗೆ ಮಲಗಿದ್ದಾಗ ಬೆಳಗಿನ ಜಾವ 2 ಗಂಟೆಯಲ್ಲಿ ನೇಣಿಗೆ ಶರಣಾಗಿದ್ದಾರೆ. ಮೂರು ವರ್ಷದ ಹಿಂದೆ, ಮೊದಲ ಪತ್ನಿ ಶಾಂತಿಗೆ ವಿಚ್ಛೇದನ ನೀಡಿದ್ದರು.
ಅವರ ಏಳು ವರ್ಷದ ಪುತ್ರನನ್ನು ಗೋಪಾಲ್ ತಮ್ಮೊಟ್ಟಿಗೇ ಇಟ್ಟುಕೊಂಡಿದ್ದರು. ಮೊದಲ ಪತ್ನಿ ಶಾಂತಿ ಬೇರೊಬ್ಬರೊಂದಿಗೆ ವಿವಾಹವಾಗಿದ್ದರು. ಇದೇ ವೇಳೆ, ಗೋಪಾಲ್ ಅವರು ಗೀತಾ ಎಂಬುವರೊಂದಿಗೆ 2009ರಲ್ಲಿ ವಿವಾಹವಾಗಿದ್ದರು. ಗೋಪಾಲ್ -ಗೀತಾಗೆ 18 ತಿಂಗಳ ಪುತ್ರ ಇದ್ದಾನೆ.
ಶಾಂತಿ ವಿಚಾರವಾಗಿ ಈ ದಂಪತಿ ನಡುವೆ ಆಗಾಗ ಜಗಳವಾಗುತ್ತಿತ್ತು ಎಂದು ತಿಳಿದುಬಂದಿದೆ. ಸೋಮವಾರ ರಾತ್ರಿಯೂ ಇಬ್ಬರ ಮಧ್ಯೆ ಜಗಳವಾಗಿತ್ತು. ಜಗಳವಾದ ನಂತರ ಗೀತಾ ತಮ್ಮ ಮಗುವಿನೊಂದಿಗೆ ಬೆಡ್ ರೂಮ್ ಸೇರಿಕೊಂಡಿದ್ದರು. ಮತ್ತೊಂದು ಕೋಣೆಯಲ್ಲಿ ಇಡೀ ರಾತ್ರಿ ಏಕಾಂಗಿಯಾಗಿದ್ದ ಗೋಪಾಲ್ ಬೆಳಗಿನ ಜಾವದಲ್ಲಿ ಸಾವು ತಂದುಕೊಂಡಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications