ಬಳ್ಳಾರಿ ಬಂಡಾಯ : ಟಿಕೆಟ್ ಪಡೆದವನೇ ಕಿಂಗ್

ಅಕ್ರಮ ಗಣಿಗಾರಿಕೆ ಸಹಕಾರ ಮಾಡುವವರು ಇವರಿಗೆ ಬೆಂಬಲಿಗರಾಗ್ತಾರಾ? ಇವರೇನು ರಾಹುಲ್ ಗಾಂಧಿ ಫ್ಯಾಮಿಲಿ ಅವರಾ? ರೆಡ್ಡಿ ಸೋದರರ ವಿರುದ್ಧ ಏನು ಹೋರಾಟ ಮಾಡಿದ್ರಿ? ಇವರ ರಾಜಕೀಯ ಮರಕೋತಿ ನಡೆಯುವುದಿಲ್ಲ? ಯಾವ ಸಿದ್ಧಾಂತವೂ ಇಲ್ಲ ಮೋಜು ಮಾಡುವುದೇ ಅವರ ಉದ್ದೇಶ. ಅನಿಲ್ ಲಾಡ್ ಗೆ ಯಾವುದೇ ಪಕ್ಷವಿಲ್ಲ ಎಂದು ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಂಪಾವತಿ ದೆಹಲಿಯಲ್ಲಿ ಕೆರಳಿದ್ದಾರೆ.
ಬಳ್ಳಾರಿ ಕ್ಷೇತ್ರಕ್ಕೆ ಒಟ್ಟು 9 ಜನ ಆಕಾಂಕ್ಷಿಗಳಾಗಿದ್ದಾರೆ. ರಾಜ್ಯಸಭಾ ಸದಸ್ಯ ಅನಿಲ್ ಲಾಡ್,ಕೆ.ಸಿ ಕೊಂಡಯ್ಯ, ಪಂಪಾವತಿ, ದಿವಾಕರ್ ಬಾಬು, ಅಲ್ಲಂ ವೀರಭದ್ರಪ್ಪ ಸೇರಿದಂತೆ ದೊಡ್ಡ ದೊಡ್ಡ ಮುಖಂಡರ ಹೆಸರುಗಳು ಕೇಳಿ ಬಂದಿದೆ.ಎಲ್ಲಾ ಆಕಾಂಕ್ಷಿಗಳು ಬಳ್ಳಾರಿ ಮೇಲೆ ಕಾಂಗ್ರೆಸ್ ಬಾವುಟ ಹಾರಿಸುವುದಕ್ಕಿಂತ ತಮ್ಮ ಹಿಡಿತ ಹೆಚ್ಚಿಸಿಕೊಳ್ಳಲು ಪ್ರಯತ್ನಿಸುತ್ತಿರುವುದು ಬಂಡಾಯಕ್ಕೆ ಕಾರಣವಾಗಿದೆ. [ಬಳ್ಳಾರಿ ಜಿಲ್ಲಾ ಪ್ರವಾಸ ಮಾಡಿ ಬನ್ನಿ]
ಬಳ್ಳಾರಿ ಬಂಡಾಯ: ರಾಜ್ಯಸಭಾ ಸಂಸದ, ಗಣಿ ಒಡೆಯ ಅನಿಲ್ ಲಾಡ್ ಪರ ಬಳ್ಳಾರಿಯಲ್ಲಿ ಬುಧವಾರ(ಏ.10) ರಾಯಲ್ ಸರ್ಕಲ್ ನಲ್ಲಿ ಪ್ರತಿಭಟನೆ ನಡೆದಿದೆ. ಕೆಪಿಸಿಸಿ, ಹೈಕಮಾಂಡ್ ಮೇಲೆ ಲಾಡ್ ಭಾರಿ ಒತ್ತಡ ಹೇರುತ್ತಿದ್ದು, ಬಳ್ಳಾರಿ ಮೇಲೆ ಪ್ರಭುತ್ವ ಸಾಧಿಸಲು ಯತ್ನಿಸುತ್ತಿದ್ದಾರೆ. ಬಳ್ಳಾರಿ ಕ್ಷೇತ್ರದಲ್ಲಿ ತಮ್ಮ ಬೆಂಬಲಿಗರಿಗೆ ಟಿಕೆಟ್ ಸಿಗದಿದ್ದರೆ ಬಂಡಾಯ ಬಾವುಟ ಹಾರಿಸಿ ಸ್ವತಂತ್ರವಾಗಿ ಸ್ಪರ್ಧಿಸಿ ಗೆಲ್ಲುತ್ತೇವೆ ನೋಡುತ್ತಿರಿ ಎಂದು ಅನಿಲ್ ಲಾಡ್ ಚಾಲೆಂಜ್ ಹಾಕಿದ್ದಾರೆ.
ಬಳ್ಳಾರಿ ಕ್ಷೇತ್ರದ ಪಟ್ಟಿ ರೆಡಿಯಾಗಿದೆ ಆದರೆ, ಪ್ರಕಟಿಸಲು ಕೆಪಿಸಿಸಿ ಕೂಡಾ ಹೆದರುತ್ತಿದೆ. ಏ.12 ರಂದು ಪಟ್ಟಿ ಬಿಡುಗಡೆ ಮಾಡುವ ಸೂಚನೆ ಸಿಕ್ಕಿದೆ. ಆದರೆ, ಏ.10 ಬಿಡುಗಡೆ ಮಾಡಬೇಕಿತ್ತು. ಸೋನಿಯಾ ಗಾಂಧಿ ಅವರು ಪ್ರವಾಸ ಮುಗಿಸಿ ಬಂದ ನಂತರ ಸಿದ್ದರಾಮಯ್ಯ ಹಾಗೂ ಜಿ ಪರಮೇಶ್ವರ್ ಅವರು ಭೇಟಿ ಮಾಡಿ ಮಾತುಕತೆ ನಡೆಸುವ ಸಾಧ್ಯತೆಯಿದೆ. ಕಾಂಗ್ರೆಸ್ ಸ್ಕ್ರೀನಿಂಗ್ ಕಮಿಟಿ ಸಭೆ ಮುಕ್ತಾಯವಾಗಿದ್ದು ಯಾವುದೇ ಸೂಚನೆ ಹೊರ ಬಿದ್ದಿಲ್ಲ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications