• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಳ್ಳಾರಿ ಬಿರು ಬಿಸಿಲಿನ ಕ್ಷೇತ್ರ ಪರಿಚಯ

By Mahesh
|

ಬಳ್ಳಾರಿ ಎಂದರೆ ಬಿಸಿಲು, ಬಳ್ಳಾರಿ ಎಂದರೆ ಗಣಿಧಣಿಗಳು, ಚುನಾವಣೆ ಸಂದರ್ಭದಲ್ಲಿ ಗರಿ ಗರಿ ಗಾಂಧಿನೋಟು ಅದಕ್ಕೆ ಮೆತ್ತಿದ ಕೆಂಪುಧೂಳು ಎಂದಷ್ಟೇ ಎಲ್ಲರಿಗೂ ಹೊರಗಡೆಯಿಂದ ಕಾಣಿಸುತ್ತದೆ. ಆದರೆ, ಬಳ್ಳಾರಿ, ಕನ್ನಡ ನಾಡಿನ ಪ್ರಮುಖ ವ್ಯಾಪಾರಿ ಕೇಂದ್ರ. ರಾಜಕೀಯವಾಗಿ 'ಕೈ' ಪಾಳಯದ ಆಡ್ಡವಾಗಿ ಬೆಳೆದಿದ್ದ ಬಳ್ಳಾರಿಯನ್ನು ಗಾಲಿ ಜನಾರ್ದನ ರೆಡ್ಡಿ ಅಂಡ್ ಕೋ ಬಿಜೆಪಿ ಕಡೆಗೆ ವಾಲುವಂತೆ ಮಾಡಿದ್ದು ದೊಡ್ಡ ಸಾಧನೆ.

ಗಣಿ ಧೂಳು, ವಿಶ್ವ ಖ್ಯಾತ ಸಿದ್ದ ಉಡುಪು ಕೇಂದ್ರಗಳಿಗೆ ಸಿಗದ ಮನ್ನಣೆ, ಬಳ್ಳಾರಿ ಸೇರಿದಂತೆ ನಗರಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ, ಹಿಂದುಳಿದ ಜಿಲ್ಲೆಗಳ ಪಟ್ಟಿ ಜೊತೆಗೆ ಅತಿವೃಷ್ಟಿಯ ಪ್ರಹಾರ. ಶೈಕ್ಷಣಿಕವಾಗಿ ಒಂದೆರಡು ವಿವಿಗಳನ್ನು ಹೊಂದಿರುವುದು ಬಿಟ್ಟರೆ ಸಾಕ್ಷರತೆ ಪ್ರಮಾಣ ಈಗಲೂ ಮೇಲಕ್ಕೆದ್ದಿಲ್ಲ.

ಕೃಷಿ ಬಳ್ಳಾರಿ ಜಿಲ್ಲೆಯ ಮುಖ್ಯ ವೃತ್ತಿ. ಕೃಷಿಗೆ ನೀರಿನ ಸರಬರಾಜು ತುಂಗಭದ್ರಾ ನದಿ ಮತ್ತು ಹೊಸಪೇಟೆಯಲ್ಲಿನ ತುಂಗಭದ್ರಾ ಅಣೆಕಟ್ಟಿನಿಂದ ಆಗುತ್ತದೆ. ಇಲ್ಲಿ ಬೆಳೆಯಲ್ಪಡುವ ಮುಖ್ಯ ಬೆಳೆಗಳು ಹತ್ತಿ, ಜೋಳ, ನೆಲಗಡಲೆ, ಭತ್ತ, ಸೂರ್ಯಕಾಂತಿ.

ಚಾರಿತ್ರಿಕವಾಗಿ, ಬಳ್ಳಾರಿ ಜಿಲ್ಲೆ ಪ್ರಾಮುಖ್ಯತೆಗೆ ಬಂದದ್ದು ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ. ಇದಕ್ಕೆ ಮೊದಲು ಈ ಪ್ರದೇಶ ಶಾತವಾಹನ, ಕಲ್ಯಾಣಿ ಚಾಲುಕ್ಯರು, ಕದಂಬರು, ಸೇವುಣರು ಮತ್ತು ಹೊಯ್ಸಳರ ನಿಯಂತ್ರಣದಲ್ಲಿತ್ತು. ವಿಜಯನಗರ ಸಾಮ್ರಾಜ್ಯ ಬಳ್ಳಾರಿ ಜಿಲ್ಲೆಯಲ್ಲೇ ರಾಜಧಾನಿಯನ್ನು ಹೊಂದಿದ್ದರಿಂದ ಆ ಸಮಯದಲ್ಲಿ ಈ ಜಿಲ್ಲೆ ಪ್ರಾಮುಖ್ಯತೆಗೆ ಬಂದಿತು. ಬ್ರಿಟಿಷ್ ಆಡಳಿತದ ಕಾಲದಲ್ಲಿ ಮದರಾಸು ಪ್ರಾಂತ್ಯಕ್ಕೆ ಸೇರಿದ್ದ ಬಳ್ಳಾರಿ ಜಿಲ್ಲೆ 1953 ರಲ್ಲಿ ಮೈಸೂರು ರಾಜ್ಯಕ್ಕೆ ವರ್ಗಾಯಿಸಲ್ಪಟ್ಟಿತು.

Bellary District Assembly Constituency Profile

ವಿಧಾನಸಭಾ ಕ್ಷೇತ್ರಗಳು: ಹಡಗಲಿ, ಹಗರಿಬೊಮ್ಮನಹಳ್ಳಿ, ವಿಜಯನಗರ, ಕಂಪ್ಲಿ, ಸಿರುಗುಪ್ಪ, ಸಂಡೂರು, ಕೂಡ್ಲಿಗಿ

ನೈಸರ್ಗಿಕ ಖನಿಜ ಸಂಪತ್ತು: ಜಿಲ್ಲೆಯಲ್ಲಿ ಕಬ್ಬಿಣ, ಮ್ಯಾಂಗನೀಸ್, ತಾಮ್ರ ಮತ್ತು ಸೀಸದ ಗಣಿಗಳು ಸಾಕಷ್ಟಿವೆ.

ಪ್ರಮುಖ ಭಾಷೆ: ಕನ್ನಡ, ತೆಲುಗು, ಲಂಬಾಣಿ

ಪ್ರಮುಖ ಜನಾಂಗ: ಹಿಂದುಳಿದ ಜಾತಿ ವರ್ಗ, ಪಂಗಡಗಳ ಮತದಾರರೇ ಪ್ರಮುಖವಾಗಿದ್ದಾರೆ, ರೆಡ್ಡಿಗಳು, ಲಂಬಾಣಿ ನಾಯಕರು, ಅಲ್ಪಸಂಖ್ಯಾರ ವೋಟ್ ಬ್ಯಾಂಕ್ ಕೂಡಾ ಶಕ್ತಿಯುತವಾಗಿದೆ.

ಈ ಜಿಲ್ಲೆಯಲ್ಲಿ 07 ತಾಲ್ಲೂಕುಗಳಿದ್ದು, ಹೊಸಪೇಟೆ ತಾಲೂಕು ವಿಧಾನಸಭಾ ಕ್ಷೇತ್ರವಾಗಿಲ್ಲ.

ಸಾರಿಗೆ: 2 ರಾಷ್ಟೀಯ ಹೆದ್ದಾರಿಗಳಿದೆ. ರೈಲ್ವೆ ಹಾದಿ ನಿರ್ಮಾಣವಾಗಿದೆ. ಖಾಸಗಿ ವಿಮಾನ ನಿಲ್ದಾಣ ಜೊತೆ ಸಣ್ಣ ವಿಮಾನ ನಿಲ್ದಾಣ ಇದೆ. ಪೂರ್ಣ ಪ್ರಮಾಣದ ವಿಮಾನ ನಿಲ್ದಾಣದ ಅಗತ್ಯವಿದೆ.

ಒಟ್ಟು ಮತದಾರರು: 1.72 ಲಕ್ಷ ಎಸ್ಟಿ: 40 ಸಾವಿರ ಎಸ್ಸಿ: 35 ಸಾವಿರ ಲಿಂಗಾಯತ: 28 ಸಾವಿರ ಕುರುಬ: 24 ಸಾವಿರ ಮುಸ್ಲೀಂ: 30 ಸಾವಿರ ಬಲಿಜ, ಬ್ರಾಹ್ಮಣ, ರೆಡ್ಡಿ, ಒಕ್ಕಲಿಗ, ಈಡಿಗ, ಬೋವಿ ಸೇರಿ ಒಟ್ಟಾರೆ: 15 ಸಾವಿರ. ಹೀಗಾಗಿ ಲಿಂಗಾಯತ, ಕುರುಬ ಉಳಿದ ಮತಗಳನ್ನು ಸೆಳೆಯುವುದರ ಜೊತೆಗೆ ಮುಸ್ಲಿಂ ಮತಗಳನ್ನು ಒಗ್ಗೂಡಿ 90 ಸಾವಿರ ಜನರ ಮತ ಗಳಿಕೆ ಎಲ್ಲಾ ಪಕ್ಷಗಳಿಗೆ ಮುಖ್ಯವಾಗಿದೆ.

ನೀರಿನ ಆಸರೆ: ತುಂಗಾ, ಭದ್ರಾ,

ಪ್ರವಾಸಿ ತಾಣಗಳು : ಹಂಪೆ, ತುಂಗ ಭದ್ರಾ ಡ್ಯಾಂ

ಪ್ರಮುಖ ವ್ಯಕ್ತಿಗಳು: ರಾಷ್ಟ್ರೀಯ ಖ್ಯಾತವೆತ್ತ ನಟ, ಗಾಯಕ, ಗಮಕಿಗಳಾಗಿದ್ದಂತಹ ದೊಡ್ಡನಗೌಡರಿಗರ ಜನ್ಮ ನೀಡಿದ, ಕಾರ್ಯಭೂಮಿಯಾಗಿದ್ದ ಸ್ಥಳ. ಗಮಕ ಕಲಾನಿಧಿ ಜೋಳದರಾಶಿ ದೊಡ್ಡನಗೌಡರ ಮನೆ ಅವರ ಗಾಯನದ ಧ್ವನಿಸುರುಳಿಗಳು ಪ್ರಸಿದ್ಧ

ಹಡಗಲಿ: ಬಿ ಚಂದ್ರ ನಾಯ್ಕ(ಬಿಜೆಪಿ) 91,132 ಮತಗಳು

ಹಗರಿಬೊಮ್ಮನಹಳ್ಳಿ: ಕೆ ನೇಮರಾಜ್ ನಾಯಕ್(ಬಿಜೆಪಿ) 1,14,072

ವಿಜಯನಗರ: ಆನಂದ್ ಸಿಂಗ್ (ಬಿಜೆಪಿ) 1,08,097

ಬಳ್ಳಾರಿ ನಗರ: ಜಿ ಸೋಮಶೇಖರ ರೆಡ್ಡಿ 1.15.631

ಬಳ್ಳಾರಿ ಗ್ರಾಮಾಂತರ : ಶ್ರೀರಾಮುಲು (ಅಂದು ಬಿಜೆಪಿ) 1,10,239

ಕಂಪ್ಲಿ: ಟಿಎಚ್ ಸುರೇಶ್ ಬಾಬು(ಬಿಜೆಪಿ) 1,20,474

ಸಿರುಗುಪ್ಪ: (ಎಸ್ ಟಿ) ಸೋಮಲಿಂಗಪ್ಪ ಎಂಎಸ್(ಬಿಜೆಪಿ) 1,15,020

ಸಂಡೂರು : (ಎಸ್ ಟಿ) ಇ ತುಕಾರಮ್ (ಕಾಂಗ್ರೆಸ್) 1,06,235

ಕೂಡ್ಲಿಗಿ : (ಎಸ್ ಟಿ) ಬಿ ನಾಗೇಂದ್ರ(ಬಿಜೆಪಿ) 1,12,203

ಕ್ಷೇತ್ರದ ಸಮಸ್ಯೆಗಳ ಕಿರು ಪರಿಚಯ:

* ವಿಶ್ವ ಖ್ಯಾತ ಸಿದ್ದ ಉಡುಪು ಕೇಂದ್ರಗಳಿಗೆ ಸಿಗದ ಮನ್ನಣೆ

* ಗಣಿ ಮುಚ್ಚಿದ್ದರಿಂದ ಉದ್ಯೋಗ ಸಿಗದೆ ಕಂಗಾಲಾದ ಕಾರ್ಮಿಕರು

* ಮಿತಿ ಮೀರದ ಗಣಿಗಾರಿಕೆಯಿಂದ ನಾಶವಾದ ಪರಿಸರ, ವಾತಾವರಣ

* ಬಳ್ಳಾರಿ ಸೇರಿದಂತೆ ನಗರ ಪ್ರದೇಶಗಳಲ್ಲಿನ ಕುಡಿಯುವ ನೀರಿನ ಬವಣೆ

* ಶೈಕ್ಷಣಿಕವಾಗಿ ಹಿಂದುಳಿದ ಜನಾಂಗಕ್ಕೆ ಸಿಗದ ಮಾನ್ಯತೆ

* ಶಾಶ್ವತವಾದ ವಿಮಾನ ನಿಲ್ದಾಣದ ಬೇಡಿಕೆ ಈಡೇರಿಲ್ಲ. ಸಾರಿಗೆ ಸಂಪರ್ಕ ಸಮರ್ಪಕವಾಗಿಲ್ಲ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka assembly Election 2013 : Bellary District Assembly Constituency Profiles.Bellary district consists 7 Assembly constituencies: Bellary, Hadagali, Hagaribommanahalli, Vijaynagar, Kampli, Sandur, Kudligi

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more