ಮಹಾಸಮರಕ್ಕೆ ಕ್ಷಣಗಣನೆ : ನಾಳೆ ಅಧಿಸೂಚನೆ ಪ್ರಕಟ

ಏ.17ರ ವರೆಗೆ ನಾಪಮತ್ರ ಸಲ್ಲಿಸಲು ಅವಕಾಶ ಕಲ್ಪಸಲಾಗಿದೆ. ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯ ವರೆಗೆ ಅಭ್ಯರ್ಥಿಗಳು ಸ್ಥಳೀಯ ಚುನಾವಣಾಧಿಕಾರಿಗಳ ಕಚೇರಿಗಳಲ್ಲಿ ನಾಮಪತ್ರ ಸಲ್ಲಿಸಬಹುದು. ಯುಗಾದಿ ಮತ್ತು ಭಾನುವಾರ ಎರಡು ದಿನಗಳು ಸರ್ಕಾರಿ ಕಚೇರಿಗಳಿಗೆ ರಜೆ ಇದ್ದು, ನಾಮಪತ್ರ ಸಲ್ಲಿಸಲು ಅವಕಾಶವಿಲ್ಲ.
ಕೇಂದ್ರ ಮುಖ್ಯ ಚುನಾವಣಾ ಆಯುಕ್ತರು ಚುನಾವಣಾ ಸಿದ್ಧತೆಗಳ ಕುರಿತು ಎರಡು ದಿನಗಳ ಕಾಲ ರಾಜ್ಯದಲ್ಲಿ ಪರಿಶೀಲನೆ ನಡೆಸಿ ದೆಹಲಿಗೆ ಮರಳಿದ್ದಾರೆ. ಮತದಾನದ ಸಮಯವನ್ನು ಬೆಳಗ್ಗೆ 7 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ನಿಗದಿಗೊಳಿಸಿ ಆಯೋಗ ಆದೇಶ ಹೊರಡಿಸಿದೆ.
ಮಳೆ ಹುಡುಗಿಗೆ ನೋಟೀಸ್ : ಏ.7ರಂದು ರಾಯಚೂರಿನ ಮಿಟ್ಟಿ ಮಲ್ಕಾಪೂರ್ ಗ್ರಾಮದಲ್ಲಿ ಆಯೋಗದ ಅನುಮತಿ ಪಡೆಯದೇ ಚುಣಾವಣಾ ಪ್ರಚಾರಕ್ಕಾಗಿ ವಾಹನಗಳನ್ನು ಬಳಸಿದ್ದರಿಂದ ನಟಿ, ಬಿಎಸ್ಆರ್ ಕಾಂಗ್ರೆಸ್ ಪಕ್ಷದ ರಾಯಚೂರು ಅಭ್ಯರ್ಥಿ ಪೂಜಾಗಾಂಧಿ ಮೇಲೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಸಿ, ಆಯೋಗ ನೋಟಿಸ್ ಜಾರಿಗೊಳಿಸಿದೆ.(ಬಿಎಸ್ಆರ್ ಪಟ್ಟಿ)
ಬಿಎಸ್ ವೈ ಮುಗಿದ ಅಧ್ಯಾಯ : ಬಿಜೆಪಿ ಪ್ಷಕದ ಪಾಲಿಗೆ ಬಿ.ಎಸ್.ಯಡಿಯೂರಪ್ಪ ಮುಗಿದ ಅಧ್ಯಾಯ ಎಂದು ಬಿಜೆಪಿ ವರಿಷ್ಠ ನಾಯಕ ಅರುಣ್ ಜೇಟ್ಲಿ ಹೇಳಿದ್ದಾರೆ. ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಮಂಗಳವಾರ ಮಾತನಾಡಿದ ಅವರು ಚುನಾವಣೆಗೆ ನಾವು ಸಜ್ಜಾಗಿದ್ದೇವೆ ಎಂದು ಘೋಷಿಸಿದರು.
ನಾಳೆ ಕೆಜೆಪಿ ಪಟ್ಟಿ : ಕೆಜೆಪಿ ಅಭ್ಯರ್ಥಿಗಳ ನಾಲ್ಕನೇ ಪಟ್ಟಿ ಮತ್ತು ಪಕ್ಷದ ಪ್ರಣಾಳಿಕೆಯನ್ನು ನಾಳೆ ಬಿಡುಗಡೆ ಮಾಡಲಾಗುವುದು ಎಂದು ಪ್ಷಕದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಶೆಟ್ಟರ್ ವಿರುದ್ಧ ಬಿದರಿ : ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿರುದ್ಧ ಹುಬ್ಬಳ್ಳಿ-ಧಾರವಾಡ ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧ ಎಂದು ಕಾಂಗ್ರೆಸ್ ಮುಖಂಡ ಶಂಕರ ಬಿದರಿ ಹೇಳಿದ್ದಾರೆ. (ಶೆಟ್ಟರ್ ಗೆ ಸೋಲುತ್ತಾರಾ)
ರಾತ್ರಿ ಪಟ್ಟಿ ಬಿಡುಗಡೆ : ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷದ ಅಭ್ಯರ್ಥಿಗಳ ಎರಡನೇ ಪಟ್ಟಿ ಇಂದು ರಾತ್ರಿ ಬಿಡುಗಡೆಯಾಗುವ ಸಂಭವವಿದೆ. ಶುಕ್ರವಾರ ಜೆಡಿಎಸ್ ಅಂತಿಮ ಪಟ್ಟಿ ಬಿಡುಗಡೆ ಮಾಡಲಿದೆ ಎಂದು ಪಕ್ಷದ ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಬಳ್ಳಾರಿಗರ ಪೈಪೋಟಿ)
ಬಿಜೆಪಿಗೆ ಸೇರ್ಪಡೆ : ಗುಲ್ಬರ್ಗಾ ದಕ್ಷಿಣ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದತ್ತಾತ್ರೇಯ ಪಾಟೀಲ್ ಜೆಡಿಎಸ್ ತೊರೆದು ಬಿಜೆಪಿಗೆ ಸೇರ್ಪಡೆಗೊಂಡರು.(ಬಿಜೆಪಿ ಟಿಕೆಟ್ ಸಿಗುತ್ತಾ)
ಅಂಬಿ ದೆಹಲಿಗೆ : ಕಾಂಗ್ರೆಸ್ ಎರಡನೇ ಪಟ್ಟಿ ಅಂತಿಮಗೊಳಿಸುವ ಕಸರತ್ತಿನಲ್ಲಿ ತೊಡಗಿರುವ ಕಾಂಗ್ರೆಸ್ ಚಿತ್ರನಟ ಅಂಬರೀಷ್ ಅವರನ್ನು ದೆಹಲಿಗೆ ಕರೆಸಿಕೊಂಡಿದೆ. ಈಗಾಗಲೇ ಮೊದಲ ಪಟ್ಟಿಯಲ್ಲಿ ಅಂಬರೀಶ್ ಅವರಿಗೆ ಮಂಡ್ಯ ಕ್ಷೇತ್ರದ ಟಿಕೆಟ್ ನೀಡಿದ್ದರೂ ಏಕೆ ದೆಹಲಿಗೆ ಕರೆಸಿಕೊಂಡಿದ್ದಾರೆ ಎಂಬುದು ಕುತೂಹಲ ಮೂಡಿಸಿದೆ. (ಕಾಂಗ್ರೆ ಸ್ ಮೊದಲ ಪಟ್ಟಿ)
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications