ಭಾರತರತ್ನ ರಾಜೀವ್ ಗಾಂಧಿ ಸ್ವೀಡನ್ ದಲ್ಲಾಳಿ!

ಭಾರತದಲ್ಲಿ ಭ್ರಷ್ಟಾಚಾರಕ್ಕೆ ಹೊಸ ಭಾಷ್ಯ ಬರೆದ ಸ್ವೀಡನ್ ಜೆಟ್ ವಿಮಾನ ಖರೀದಿಯಲ್ಲಿನ ಅಕ್ರಮಗಳ ಬಗ್ಗೆ ಹೊಸಬೆಳಕು ಚೆಲ್ಲಿರುವ ವಿಕಿಲೀಕ್ಸ್ 'ಸ್ವೀಡನ್ ಜೆಟ್ ಖರೀದಿ ಕರ್ಮಕಾಂಡದಲ್ಲಿ Mister Clean ರಾಜೀವ್ ಗಾಂಧಿ ಸ್ವೀಡನ್ ಕಂಪನಿಗೆ ದಲ್ಲಾಳಿಯಾಗಿದ್ದರು' ಎಂಬ ಆತಂಕಕಾರಿ ವಿಷಯವನ್ನು ಹೊರಹಾಕಿದೆ.
ಭಾರತೀಯ ವಾಯುಪಡೆಗೆ ಶಸ್ತ್ರ ಖರೀದಿ ವ್ಯವಹಾರದಲ್ಲಿ ಕಾಂಗ್ರೆಸ್ಸಿನ ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿ ಅವರ ಹೆಸರು ಕಾಣಿಸಿಕೊಂಡಿರುವುದು ವಿಶೇಷವಾಗಿದೆ. ಇತ್ತೀಚೆಗೆ ಇಟಲಿ ಹೆಲಿಕಾಪ್ಟರ್ ಹಗರಣದ ಸೇರಿದಂತೆ ಈಗಾಗಲೇ ಹತ್ತಾರು ಭ್ರಷ್ಟಾಚಾರ ಪ್ರಕರಣಗಳಲ್ಲಿ ಸಿಲುಕಿರುವ ಪುರಾತನ ಕಾಂಗ್ರೆಸ್ ಪಕ್ಷಕ್ಕೆ 'ರಾಜೀವ್ ಗಾಂಧಿ ಸ್ವೀಡನ್ ಕಂಪನಿಯ ದಲ್ಲಾಳಿ' ಎಂಬುದು ಮಾರಕವಾಗಿ ಪರಿಣಮಿಸಿದೆ.
ಅಮೆರಿಕದ ರಾಯಭಾರ ಕಚೇರಿಯ ಗುಪ್ತ ಕೇಬಲ್ ಸಂದೇಶಗಳು (Kissinger cables) ಮಾಜಿ ಪ್ರಧಾನಿ ರಾಜೀವ್ ಗಾಂಧಿಯನ್ನು ಶಸ್ತ್ರಾಸ್ತ್ರ ಖರೀದಿ ವ್ಯವಹಾರದ ದಲ್ಲಾಳಿ ಎಂದು ಹೆಸರಿಸಿದೆ. ಗಮನಾರ್ಹವೆಂದರೆ ತಾನು ಪ್ರಧಾನಿ ಆಗುವುದಕ್ಕೂ ಮುನ್ನ ರಾಜೀವ್ ಗಾಂಧಿ ಈ ಅವ್ಯವಹಾರದಲ್ಲಿ ದಲ್ಲಾಳಿ ಪಾತ್ರ ನಿಭಾಯಿಸಿದ್ದರು ಎಂದು ಕೇಬಲ್ ಸಂದೇಶ ತಿಳಿಸಿದೆ.
ಅದು 1970ರ ದಶಕ... Saab-Scani ಎಂಬ ಸ್ವೀಡನ್ ಕಂಪನಿ ತನ್ನ ವಿಗ್ಗೆನ್ ಯುದ್ಧ ವಿಮಾನನೌಕೆಗಳನ್ನು ಭಾರತಕ್ಕೆ ಮಾರಾಟ ಮಾಡಬೇಕಿತ್ತು. ಆ ವ್ಯವಹಾರದಲ್ಲಿ ರಾಜೀವ್ ಗಾಂಧಿ ತಮ್ಮ ಪ್ರಭಾವಿ ಕುಟುಂಬದ ಹೆಸರನ್ನು ಬಳಸಿಕೊಂಡು ಶಸ್ತ್ರಾಸ್ತ್ರ ಖರೀದಿ ವ್ಯವಹಾರದ ದಲ್ಲಾಳಿಯಾಗಿದ್ದರು.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ....












Click it and Unblock the Notifications