IPLಗಿಂತ ರೋಚಕ ಕರ್ನಾಟಕ ಪೊಲಿಟಿಕಲ್ ಲೀಗ್!

ಬೆಂಗಳೂರು, ಮಾರ್ಚ್ 27: ಇನ್ನೊಂದು ವಾರದಲ್ಲಿ (ಏ 3 ರಿಂದ ಮೇ 26) Indian Premier League ಕ್ರಿಕೆಟ್ ಜಾತ್ರೆ ಆರಂಭವಾಗಲಿದೆ. IPL ರೋಮಾಂಚಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಈ ಬಾರಿ ಕರ್ನಾಟಕದ ಮಟ್ಟಿಗೆ ಹೇಳುವುದಾದರೆ IPL ಕ್ರಿಕೆಟ್ ಸಪ್ಪೆ ಎನಿಸಿಕೊಳ್ಳಲಿದೆ.

ಇದಕ್ಕೆ ಒಂದೇ ಕಾರಣವೆಂದರೆ ಕ್ರಿಕೆಟ್ ಕಲಿಗಳನ್ನೂ ನಾಚಿಸುವಂತೆ ನಮ್ಮ ರಾಜಕಾರಣಿಗಳು ಅದಾಗಲೇ ತಮ್ಮ ತಮ್ಮ ಬ್ಯಾಟು, ಪ್ಯಾಡು, ಬಾಲು ಹಿಡಿದು ಕಣಕ್ಕಿಳಿದಿದ್ದಾರೆ. Karnataka Political League ಎಂಬ ರಾಜಕೀಯ ಚದುರಂಗದಾಟದ ಮುಂದೆ ಯಾವ ಕ್ರಿಕೆಟ್ಟು!?

Karnataka Political League-14 ವರ್ಸಸ್ Indian Premier League-6

Karnataka Political League to be more than Indian Premier League

ರಾಜಕೀಯ ರಣಾಂಗಣ: ಇಡೀ ರಾಜ್ಯವೇ ಒಂದು ಕ್ರೀಡಾಂಗಣವಾಗಿ ಕಳೆಗಟ್ಟುತ್ತಿದೆ. ರಾಜ್ಯದ ಉದ್ದಗಲಕ್ಕೂ ಭರ್ಜರಿ ಷೋ ನಡೆಯಲಿದೆ. ಯಾರು ಶೂನ್ಯಕ್ಕೆ ಹೋಗ್ತಾರೆ, ಯಾರು ಸೆಂಚುರಿ ಬಾರಿಸ್ತಾರೆ, ಯಾರು ಯಾರ ವಿಕೆಟ್ ಕಬಳಿಸ್ತಾರೆ, ಯಾರು ಯಾರಿಗೆ ಮಾತಿನ ಬೌನ್ಸರ್ ಹಾಕ್ತಾರೆ, ಯಾರು ಯಾರನ್ನು ಕ್ಯಾಚ್ ಹಿಡೀತಾರೆ?

ದಿನನಿತ್ಯವೂ ಯಾರು ಮ್ಯಾನ್ ಆಫ್ ದಿ ಡೇ ಆಗ್ತಾರೆ, ಪಕ್ಷಾಂತರಿಗಳು ಹಿಟ್ ವಿಕೆಟ್ ಆಗ್ತಾರಾ, ಯಾವ ಜನನಾಯಕ ಯಾವ ಪಕ್ಷಕ್ಕೆ ಸೇಲಾಗುತ್ತಾನೆ, ಯಾವ ಜನನಾಯಕನಿಗೆ ಹೈಯೆಸ್ಟ್ ಬಿಡ್ಡಿಂಗ್, ಹೊಸ ತೆಂಡೂಲ್ಕರ್ ಉದ್ಭವಿಸುತ್ತಾನಾ, ಸ್ವಚ್ಚ, ಶುದ್ಧ ಚಾರಿತ್ರ್ಯದ ಹೊಚ್ಚಹೊಸ ತಂಡ ರೂಪುಗೊಳ್ಳುತ್ತದಾ ಅಥವಾ ಹಾಲಿ ಚಾಂಪಿಯನ್ನುಗಳೇ ಪ್ರಶಸ್ತಿಯನ್ನು ತಮ್ಮ ಮಡಿಲಿಗೆ ಮತ್ತೆ ಹಾಕಿಕೊಳ್ಳುತ್ತಾರಾ?

ಈ ಮಧ್ಯೆ ಪ್ರೇಕ್ಷಕ ಪ್ರಭುವೂ ಆದ ಮತದಾರ ಪ್ರಭುಗಳು ಏನನ್ನುತ್ತಾರೆ, ಅವರ ಜಾಣ್ಮೆಯ ನಡೆಯೇನು, ಯಾರಿಗೆ ಒಲಿಯುತ್ತಾರೆ, ಯಾರಿಗೆ ಸಾಷ್ಟಾಂಗ ಬೀಳುತ್ತಾರೆ, ಯಾರಿಗೆ ತಮ್ಮ ಅಮೂಲ್ಯ ಮತ ಹಾಕುತ್ತಾರೆ? ಕೊನೆಗೆ ಮತದಾರ ಕೊಡುವ ಪೆಟ್ಟು ಹೇಗಿರುತ್ತದೆ. ಪ್ರಜಾಪ್ರಭುತ್ವದಲ್ಲಿ ಮತದಾರನಷ್ಟು ಬಲಾಢ್ಯ ಯಾವ ರಾಜಕಾರಣಿಯೂ ಇಲ್ಲ ಎಂಬ ಮಾತಿದೆ.

ಇದು ಮಾತಿಗಷ್ಟೇ ಸೀಮಿತವೋ ಅಥವಾ ಮತದಾರ ತನ್ನ ಮಂತ್ರದಂಡವನ್ನು ಝಳಪಿಸುತ್ತಾನೋ, ಅಥವಾ ಹಿಟ್ ವಿಕೆಟ್ ಆಗಿ ಅತಂತ್ರಗೊಳ್ಳುತ್ತಾನೋ? ಅಥವಾ ಯಾವುದೂ ಬೇಡ ಅಂತ ಮನೆಯಲ್ಲೇ ಟಿವಿಗೆ ಅಂಟಿಕೊಂಡು ಬಿಡುತ್ತಾರಾ ಎಂಬ ಆತಂಕ/ಭಯವೂ ಕಾಡುತ್ತಿದೆ.

ಏಕೆಂದರೆ ಅಂದು (ಮೇ 5 ಮತದಾನದ ದಿನ) ಒಂದಲ್ಲ, ಎರಡು ಮ್ಯಾಚುಗಳಿವೆ. ಎರಡೂ ಸೂಪರ್ ಆಗಿರುತ್ತವೆ. ಏಕೆಂದರೆ ನಾಲ್ಕೂ ತಂಡಗಳು ಬಲಿಷ್ಠ. (Mumbai Indians VS Chennai Super Kings ಮತ್ತು Rajasthan Royals VS Pune Warriors India) ಜತೆಗೆ, ಟೂರ್ನಮೆಂಟೂ ಕುತೂಹಲ ಘಟ್ಟಕ್ಕೆ ಪ್ರವೇಶಿಸಿರುತ್ತದೆ. ಮತದಾನ ಪ್ರಭುವೇ ದಯವಿಟ್ಟು ಈಗಲೇ Fix ಆಗ್ಹೋಗಿ. ಆವತ್ತು ಮನೆ ಟಿವಿಯಲ್ಲಿ ಕ್ರಿಕೆಟ್ ಹಾಕೋಲ್ಲ. ಸೀದಾ ಎದ್ದುಹೋಗಿ Vote ಮಾಡಿಬರುವೆ ಎಂದು, Please!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+