ಶೇ. 70 ಮಂದಿ ಕಚೇರಿಯಲ್ಲಿ ಟೈಂ ವೇಸ್ಟ್ ಮಾಡ್ತಾರಂತೆ!

ಹೀಗೆ ಶೇ. 70 ಮಂದಿ ಕಚೇರಿಯಲ್ಲಿ ಅಪರೂಪಕ್ಕೆ ಟೈಂ ವೇಸ್ಟ್ ಮಾಡಿದರೆ ಒಂದು ಹಂತದವರೆಗೂ ಓಕೆ! ಆದರೆ ದಿನನಿತ್ಯ ಅದೇ ಕಾಯಕ ಆಗಿಬಿಟ್ಟರೆ?
ಇಷ್ಟಕ್ಕೂ ಉದ್ಯೋಗಿಗಳು ಕೆಲಸ ಮಾಡೋದು ಬಿಟ್ಟು ಅದು ಹೇಗೆ ಟೈಂ ವೇಸ್ಟ್ ಮಾಡ್ತಾರೆ ಅಂದಿರಾ? ಅದರಲ್ಲಿ ಹೊಸ ವಿಧಾನಗೇಳೇನೂ ಇಲ್ಲ. ಆದರೆ ಕಾಲಕ್ಕೆ ತಕ್ಕಂತೆ ವೆಬ್ ಸೈಟ್ ನೋಡ್ತಾ ಟೈಂ ವೇಸ್ಟ್ ಮಾಡೋದೊಂದೇ ಹೊಸನ ವಿಧಾನ.
ಸಮೀಕ್ಷೆಯ ವೇಳೆ ಶೇ. 34ರಷ್ಟು ಮಂದಿ ಪ್ರತಿದಿನ 30 ನಿಮಿಷವಾದರೂ ಟೈಂ ವೇಸ್ಟ್ ಮಾಡ್ತೀವಿ ಎಂದು ಹೇಳಿಕೊಂಡಿದ್ದಾರೆ! ಇನ್ನು ಕೆಲವರು ಅಂದರೆ ಶೇ. 24ರಷ್ಟು ನೌಕರರು ದಿನಕ್ಕೆ ಒಂದು ಗಂಟೆಯಾದರೂ ಕೆಲಸ ಮಾಡೋದಿಲ್ವಂತೆ. ಇನ್ನೂ ಶೇ. 11 ಮಂದಿ ಅನೇಕ ಗಂಟೆಗಳ ಕಾಲ ಕೆಲಸವನ್ನೇ ಮಾಡೋದಿಲ್ವಂತೆ! ಇಂತಹವರ ಸಂಖ್ಯೆ ಕಡಿಮೆಯಾಗಲಿ.
ಇನ್ನೂ ಕೆಲವರಿದ್ದಾರೆ- ಶೇ. 10ರಷ್ಟು ಮಂದು ತಾವು ಯಾವತ್ತೂ ಕಚೇರಿಯಲ್ಲಿ ಕೆಲಸ ಮಾಡದೆ ಸುಮ್ಮನೆ ಕುಳಿತಿಲ್ಲ ಎನ್ನುತ್ತಾರೆ. ಶೇ. 21 ರಷ್ಟು ಮಂದಿ ವಾರದಲ್ಲಿ ಒಂದೆರಡು ಬಾರಿ ಕೆಲಸ ಮಾಡದೇ ಕಾಲಹರಣ ಮಾಡ್ತೇವೆ ಅನ್ನುತ್ತಾರೆ ಎಂದು news.com.au ವರದಿ ಮಾಡಿದೆ.












Click it and Unblock the Notifications