ಕಾಂಗ್ರೆಸ್ ಸಾಧನೆ ಶೂನ್ಯ : ಈಶ್ವರಪ್ಪ ವ್ಯಂಗ್ಯ

K.S.Eshwarappa
ತುಮಕೂರು, ಮಾ.27 : ಕಾಂಗ್ರೆಸ್ ಪಕ್ಷ ಐವತ್ತು ವರ್ಷಗಳಲ್ಲಿ ಮಾಡದ ಸಾಧನೆಯನ್ನು ಬಿಜೆಪಿ ಐದು ವರ್ಷಗಳಲ್ಲಿ ಮಾಡಿದೆ. ಮತದಾರರ ದಾರಿ ತಪ್ಪಿಸುವುದು ಮಾತ್ರ ಕಾಂಗ್ರೆಸ್ ಪಕ್ಷದ ಸಾಧನೆ ಎಂದು ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.

ನಗರದ ಬಸವೇಶ್ವರ ಆಟದ ಮೈದಾನದಲ್ಲಿ ಬುಧವಾರ ಬಿಜೆಪಿ ಹಮ್ಮಿಕೊಂಡಿದ್ದ, ವಿಜಯ ಸಂಕಲ್ಪ ಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಈಶ್ವರಪ್ಪ ಕಾಂಗ್ರೆಸ್ ಪಕ್ಷಕ್ಕೆ ಜನರ ಸಂಕಷ್ಟ ಪರಿಹರಿಸುವುದು ತಿಳಿದಿಲ್ಲ. ಆದರೆ, ಜನರನ್ನು ಸರಿಯಾಗಿ ದಾರಿತಪ್ಪಿಸುವುದು ಮಾತ್ರ ತಿಳಿದಿದೆ ಎಂದು ಆರೋಪಿಸಿದರು.

ರಾಜ್ಯದ ಬಿಜೆಪಿ ಸರ್ಕಾರ ಹೆಚ್ಚು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದರೆ, ಚುನಾವಣೆಯಲ್ಲಿ ಗೆಲುವು ಸಾಧಿಸಲು ಕಷ್ಟವಾಗುತ್ತದೆ ಎಂದು ಕೇಂದ್ರ ಸರ್ಕಾರದಿಂದ ಬರುವ ಅನುದಾನಗಳನ್ನು ಕಾಂಗ್ರೆಸ್ ನಾಯಕರು ತೆಡೆ ಹಿಡಿದಿದ್ದಾರೆ ಎಂದು ದೂರಿದರು.

ಬಿಜೆಪಿಯವರು ಲೂಟಿಕೋರರು ಎಂದು ಟೀಕಿಸುವ ಕಾಂಗ್ರೆಸ್ ನಾಯಕರು ಐವತ್ತು ವರ್ಷ ಜನರ ಸಂಕಷ್ಟ ಬಗೆಹರಿಸದೆ ಕೇವಲ ಲೂಟಿ ಮಾಡಿದ್ದಾರೆ. ಕಾಂಗ್ರೆಸ್ ಸಾಧನೆ ಕೇವಲ ಶೂನ್ಯ. ಐದು ವರ್ಷಗಳಲ್ಲಿ ಬಿಜೆಪಿ ಅಧಿಕ ಸಾಧನೆ ಮಾಡಿದೆ. ಮುಂದಿನ ಚುನಾವಣೆಯಲ್ಲೂ ಪಕ್ಷ ಅಧಿಕಾರ ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಠಕ್ಕೆ ಭೇಟಿ : ವಿಜಯ ಸಂಕಲ್ಪ ಯಾತ್ರೆಗೂ ಮುನ್ನ ಸಿಎಂ ಜಗದೀಶ್ ಶೆಟ್ಟರ್, ಬಿಜೆಪಿ ಅಧ್ಯಕ್ಷ ಪ್ರಹ್ಲಾದ್ ಜೋಶಿ, ಈಶ್ವರಪ್ಪ ಮುಂತಾದ ನಾಯಕರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಮಹಾಸ್ವಾಮಿಗಳ ಆರ್ಶೀವಾದ ಪಡೆದರು.

ನಂತರ ಮಾತನಾಡಿದ ಸಿಎಂ ಶೆಟ್ಟರ್ ರಾಜ್ಯ ಬಿಜೆಪಿ ನಾಯಕರ ವಿರುದ್ಧ ಮಾತನಾಡುವ ಎಲ್ಲಾ ಸಚಿವರ ವಿರುದ್ದ ಕ್ರಮ ತೆಗೆದುಕೊಳ್ಳಲಾಗುವುದು. ರೇಣುಕಾಚಾರ್ಯ ವಿರುದ್ದ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ವಿರುದ್ಧ ಶೀಘ್ರದಲ್ಲೇ ಕ್ರಮ ಜರುಗಿಸುವುದಾಗಿ ತಿಳಿಸಿದರು.

ಸಂಕಲ್ಪ ಯಾತ್ರೆಗೆ ಜನರ ಕೊರತೆ : ಬಿಜೆಪಿಯ ಉನ್ನತ ಮಟ್ಟದ ನಾಯಕರು ನಗರಕ್ಕೆ ಆಗಮಿಸಿದರೂ ಬಿಜೆಪಿಯ ವಿಜಯ ಸಂಕಲ್ಪಯಾತ್ರೆಗೆ ಜನರ ಕೊರತೆ ಉಂಟಾಗಿತ್ತು. ಸಮಾವೇಶದ ಖುರ್ಚಿಗಳೆಲ್ಲ ಖಾಲಿ ಹೊಡೆಯುತ್ತಿದ್ದವು. ಜಿಲ್ಲೆಯಲ್ಲಿ ಕೆಜೆಪಿಯ ಪ್ರಾಬಲ್ಯವೋ ಅಥವ ಸರ್ಕಾರದ ಬಗ್ಗೆ ಜನರ ಭ್ರಮ ನಿರಸನವೋ ನಾಯಕರನ್ನು ಮಾತ್ರ ಖಾಲಿ ಖುರ್ಚಿಗಳು ಸ್ವಾಗತಿಸಿದವು.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+