Gold Price: ಚಿನ್ನಾಭರಣ ಪ್ರಿಯರಿಗೆ ಗುಡ್‌ನ್ಯೂಸ್, ಬೆಂಗಳೂರು ಸೇರಿ ದೇಶಾದ್ಯಂತ ಚಿನ್ನದ ಬೆಲೆಯಲ್ಲಿ ಕುಸಿತ

Gold Price: ಮದುವೆ ಇನ್ನಿತರ ಸಮಾರಂಭಗಳು ಹೆಚ್ಚಿರುವ ಇಂದಿನ ಸನ್ನಿವೇಶದಲ್ಲಿ ಚಿನ್ನದ ದರವು ಇಳಿಕೆಯತ್ತ ಸಾಗಿದೆ. ಆಗೊಮ್ಮೆ ಈಗೊಮ್ಮೆ ಏರಿಕೆ ಕಾಣುವ ಚಿನ್ನವನ್ನು ಕೊಳ್ಳಲು ಇದು ಸಕಾಲ ಅಂತಲೂ ಗ್ರಾಹಕರು ಭಾವಿಸಿದ್ದಾರೆ. ಮೇ ತಿಂಗಳ ಕಳೆದ 10 ದಿನಗಳಲ್ಲಿ (ಮೇ 1-10) ಏರಿಕೆಗಿಂತ ಇಳಿಕೆ ಆಗಿದ್ದೆ ಹೆಚ್ಚು. ಮುಂದಿನ ವಾರವು ಚಿನ್ನದ ಮತ್ತಷ್ಟು ಇಳಿಕೆ ಆದರೂ ಅಚ್ಚರಿ ಇಲ್ಲ. ಇಂದು ಭಾನುವಾರ ಬೆಂಗಳೂರು ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ಚಿನ್ನ ಬೆಳ್ಳಿ ಬೆಲೆ ಎಷ್ಟಿದೆ ಎಂಬ ಅಪ್ಡೇಟ್ ಮಾಹಿತಿ ಇಲ್ಲಿದೆ.

ಇದೇ ಹತ್ತು ದಿನಗಳ ಅವಧಿಯಲ್ಲಿ ಚಿನ್ನಕ್ಕೆ ಹೋಲಿಕೆ ಮಾಡಿದರೆ ಬೆಳ್ಳಿ ದರ ತದ್ವಿರುದ್ಧವಾಗಿ ಇಳಿಕೆಗಿಂತಲೂ ಬೆಲೆ ಹೆಚ್ಚಿಸಿಕೊಂಡಿದೆ. ಬೆಳ್ಳಿ ಒಂದು ಕೆಜಿ ದರ 2,75,000 ರೂ.ನಷ್ಟಿದೆ. ಗರಿಷ್ಠ ಬೆಲೆಗೆ ಹೆಚ್ಚಾಗಿದ್ದ (1ಕೆಜಿ ದರ 4.20 ಲಕ್ಷ ರೂ) ಬೆಳ್ಳೆಯು 2.50 ಲಕ್ಷದ ಆಸುಪಾಸಿಗೆ ಇಳಿಕೆ ಆಗಿತ್ತು. ಇದೀಗ ಮತ್ತೆ ಏರಿಯತ್ತ ಸಾಗಿದೆ. ಮೇ 1ರಂದು 5,000 ರೂ. ಮೇ 2ರಂದು 10,000 ರೂಪಾಯಿ ಹೆಚ್ಚಾಗಿತ್ತು. ನಂತರ ಎರಡು ದಿನ ಸ್ಥಿರತೆ ಕಾಯ್ದುಕೊಂಡಿತ್ತು.

Gold Price

ನಂತರ ಮೇ 5ರಂದು 10,000 ರೂಪಾಯಿ ಕುಸಿತ ಕಂಡಿದ್ದ ಬಿಳಿ ಲೋಹವು ಮೇ 6ಕ್ಕೆ 10,000 ರೂಪಾಯಿ, ಮೇ 7ರಂದು 5,000 ರೂಪಾಯಿ, ಮೇ 8ರಂದು ಮತ್ತೆ 5,000 ರೂಪಾಯಿ ಹೆಚ್ಚಿಸಿಕೊಂಡಿತು. ಅಲ್ಲಿಂದ ಕಳೆದ ಎರಡು ದಿನಗಳಲ್ಲಿ ಬೆಲೆಯು ಸ್ಥಿರವಾಗಿದೆ. ಇಂದು ಮೇ 10 ಭಾನುವಾರ ಒಂದು ಕೆಜಿ ಬೆಳ್ಳಿ ದರ 2,75,000 ರೂಪಾಯಿಗೆ ಏರಿಕೆ ಆಗಿದೆ.

Copra: ತಿಪಟೂರು ಕೊಬ್ಬರಿ ಬೆಲೆ ಮತ್ತೆ ನಾಗಾಲೋಟದಲ್ಲಿ ಹೆಚ್ಚಳ, ಇಂದಿನ ದರಪಟ್ಟಿ ಹೀಗಿದೆ
Copra: ತಿಪಟೂರು ಕೊಬ್ಬರಿ ಬೆಲೆ ಮತ್ತೆ ನಾಗಾಲೋಟದಲ್ಲಿ ಹೆಚ್ಚಳ, ಇಂದಿನ ದರಪಟ್ಟಿ ಹೀಗಿದೆ

ಬೆಂಗಳೂರು ಸೇರಿ ವಿವಿಧೆಡೆ ಇಂದಿನ ಚಿನ್ನದ ದರ

ರಾಜಕೀಯ ಅನಿಶ್ಚಿತೆ, ಕೊಲ್ಲಿ ರಾಷ್ಟ್ರಗಳ ಯುದ್ಧ, ಡೌಲರ್ ಮೌಲ್ಯ ಕುಸಿತ ಹಾಗೂ ಇನ್ನಿತರ ಕಾರಣಗಳಿಂದಾಗಿ ಚಿನ್ನದ ಬೆಲೆಯಲ್ಲಿನ ಕುಸಿತ ಮುಂದುವರಿದಿದೆ. ಮೇ 1ರಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆಯಲ್ಲಿ 195ರೂಪಾಯಿ ಇಳಿಕೆ ಆಗಿತ್ತು. ಮೇ 2ರಂದು ಅಷ್ಟೇ ಗ್ರಾಂ ಬಂಗಾರವು ಕೇವಲ 30 ರೂ. ಏರಿತ್ತು. ನಂತರದ ದಿನ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದ ಚಿನ್ನದ ಬೆಲೆ ಮೇ 4ರಂದು 120ರೂ, ಮೇ 5ಕ್ಕೆ 40 ರೂಪಾಯಿ ಇಳಿಕೆ ಆಯಿತು. ನಂತರದ ಎರಡು ದಿನ ಕ್ರಮವಾಗಿ 270 ರೂ ಮತ್ತು 80 ರೂ.ನಂತೆ ಹೆಚ್ಚಳವಾಯಿತು.

ಮೇ 8 ಮತ್ತು 9ರಂದು ತಲಾ 30 ರೂಪಾಯಿ ಇಳಿಕೆ ಆಗಿದ್ದು, ಇಂದು ಮೇ 10ರ ಭಾನುವಾರ ಅದರ ಬೆಲೆ ಸ್ಥಿರವಾಗಿದೆ. ಇಂದು 22 ಕ್ಯಾರಟ್ 10 ಗ್ರಾಂ ಬೆಲೆ 1,39,650 ರೂಪಾಯಿ ಇದೆ. 24 ಕ್ಯಾರಟ್ 10 ಗ್ರಾಂ ಬಂಗಾರಕ್ಕೆ 1,52,350 ರೂಪಾಯಿ ಇದ್ದು, 18 ಗ್ರಾಂ ಚಿನ್ನದ ಬೆಲೆ 1,14,260 ರೂಪಾಯಿಯಷ್ಟಿದೆ. ಮುಂದಿನ ವಾರವು ಚಿನ್ನದ ಬೆಲೆಯು ತೀವ್ರ ಸ್ವರೂಪದಲ್ಲಿ ಏರಿಕೆ ಆಗುವುದು ಅನುಮಾನ. ಇಳಿಕೆ ಆಗುವ ನಿರೀಕ್ಷೆ ಇದ್ದು, ಗ್ರಾಹಕರು ಖರೀದಿಸಲು ಇದು ಸಕಾಲ ಎನ್ನಬಹುದಾಗಿದೆ.

ನಗರವಾರು 22ಕ್ಯಾರಟ್ 1 ಗ್ರಾಂ ಬಂಗಾರದ ಬೆಲೆಪಟ್ಟಿ

ಬೆಂಗಳೂರು : 13,965 ರೂಪಾಯಿ

ಚೆನ್ನೈ : 14,150 ರೂಪಾಯಿ

ಮುಂಬೈ : 13,965 ರೂಪಾಯಿ

ದೆಹಲಿ : 13,980 ರೂಪಾಯಿ

ಕೊಲ್ಕತ್ತಾ : 13,965 ರೂಪಾಯಿ

ಹೈದರಾಬಾದ್ : 13,965 ರೂಪಾಯಿ

ಕೇರಳ : 13,965 ರೂಪಾಯಿ

ಪುಣೆ : 13,965 ರೂಪಾಯಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+