Amruthadhaare Serial: ಅಮೃತಧಾರೆ ಸೀರಿಯಲ್‌ನಲ್ಲಿ ಹೊಸ ತಿರುವು: ಶಕುನಿ ಮಾವನೇ ಧುರಂಧರ್

Amruthadhaare Serial: ಅಮೃತಧಾರೆ ಸೀರಿಯಲ್ ಮತ್ತೊಂದು ರೋಚಕಘಟ್ಟವನ್ನು ತಲುಪಿದೆ. ಅಮೃತಧಾರೆ ಸೀರಿಯಲ್‌ನಲ್ಲಿ ಎಲ್ಲವೂ ಬದಲಾಯಿತು. ಎಲ್ಲವೂ ಸರಿ ಹೋಯಿತು ಎನ್ನುವ ಸಂದರ್ಭದಲ್ಲಿಯೇ ಶಕುನಿ ಮಾವ ಎಲ್ಲಿ ಜೈದೇವ್ ಕಡೆ ತಿರುಗಿದನೇ ಎನ್ನುವ ಅನುಮಾನ ಶುರುವಾಗಿದೆ. ಶಕುನಿ ಮಾನ ಜೈಲಿನಿಂದ ಬಿಡುಗಡೆಯಾಗುವುದಕ್ಕೆ ಕಾರಣವಾಗಿದ್ದೇ ಗೌತಮ್. ಗೌತಮ್ ಸಹಕಾರದಿಂದಲೇ ಶಕುನಿ ಮಾವ ಜೈಲಿನಿಂದ ವಾಪಸ್ ಬಂದಿದ್ದು. ಆದರೆ ಇದೀಗ ಬಿಡುಗಡೆಯಾಗಿರುವ ಹೊಸ ಎಪಿಸೋಡ್‌ನಲ್ಲಿ ಟ್ವಿಸ್ಟ್‌ ಇರುವಂತೆ ತೋರಿಸಲಾಗಿದೆ.

ಅಮೃತಧಾರೆಯ ಹೊಸ ಎಪಿಸೋಡ್‌ಗಳು ಹಲವು ಕಾರಣಕ್ಕೆ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ. ಮೊದಲನೆಯದಾಗಿ ಗೌತಮ್ ಹಾಗೂ ಭೂಮಿಕಾ ಅವರ ಮಗಳ ಪತ್ತೆಗೆ ಅಖಿಲಾಂಡೇಶ್ವರಿ ಅವರ ಅಭಯ ಹಸ್ತ ಸಿಕ್ಕಿದೆ. ಜೈದೇವ್ ಜೈಲಿನಿಂದ ಬಿಡುಗಡೆಯಾಗಿದ್ದಾನೆ.

Amruthadhaare Serial

ಕನ್ನಡದ ಪ್ರಮುಖ ಸೀರಿಯಲ್‌ಗಳಲ್ಲಿ ಒಂದಾಗಿರುವ ಅಮೃತಧಾತರೆ ಸೀರಿಯಲ್ ಹಲವು ಕಾರಣಗಳಿಗೆ ಕುತೂಹಲ ಕೆರಳಿಸಿದೆ. ಬೇಬಿ ಮನೆಗೆ ಹೋಗಿ ಗಲಾಟೆ ಮಾಡಿದ್ದ ಜೈದೇವ್ ಜೈಲು ಪಾಲಾಗಿದ್ದ. ಸಹಾಯಕ್ಕಾಗಿ ಆತ ತಾಯಿ ಶಾಕುಂತಲಾ ದೇವಿಗೆ ಫೋನ್ ಮಾಡಿದ್ದರೂ ಶಾಕುಂತಲಾ ಅವರು ಯಾರೂ ಅಂತನೇ ಗೊತ್ತಿಲ್ಲ ಎಂದು ಪೊಲೀಸರ ಬಳಿ ಹೇಳಿದ್ದರು. ಇದರಿಂದ ಜೈದೇವ್‌ಗೆ ಭಾರೀ ಸಂಕಷ್ಟ ಎದುರಾಗಿತ್ತು. ಇದೀಗ ಜೈದೇವ್ ಅನ್ನು ಪೊಲೀಸ್ ಠಾಣೆಯಿಂದ ಬಿಡಿಸಿಕೊಂಡು ಬರುವುದಕ್ಕೆ ಶಕುನಿ ಮಾವನ ಸಹಕಾರ ಸಕ್ಕಿದೆ. ಜೈದೇವ್‌ ಅನ್ನು ಜಾಮೀನಿನ ಮೇಲೆ ಶಕುನಿ ಮಾವ ಬಿಡಿಸಿದ್ದಾನೆ.

Amruthadhaare Serial: ಮಿಂಚುನೇ ಗೌತಮ್ ಮಗಳಾ ?

ಪೊಲೀಸ್ ಠಾಣೆಗೆ ಬಂದು ಮಾವ ಜಾಮೀನು ಕೊಡಿಸಲು ಮುಂದಾಗಿದ್ದರೂ, ಜೈದೇವ್ ಇದಕ್ಕೆ ಸಮ್ಮತಿ ಸೂಚಿಸಿಲ್ಲ. ನಾನಗೆ ಯಾರ ಸಹಾಯವೂ ಬೇಡ ಅಂತ ಹೇಳಿದ್ದಾನೆ. ಇದಕ್ಕೆ ಪೊಲೀಸರು ಎಚ್ಚರಿಕೆ ಕೊಟ್ಟಿರುವುದು ಹೊಸ ಎಪಿಸೋಡ್‌ನಲ್ಲಿದೆ. ಇನ್ನು ಗೌತಮ್ ದಿವಾನ್ ಹಾಗೂ ಭೂಮಿಕಾ ಅವರ ಬಹಳ ವರ್ಷಗಳ ಕನಸು ನನಸಾಗುವ ಸಮಯ ಬಂದಿದೆ. ಮನೆಯಲ್ಲಿ ನಡೆದ ಪೂಜೆ ಸಮಯದಲ್ಲಿ ಪೂಜಾರಿ ಅವರ ಮಾತುಗಳು ಮನೆಯವರ ಮನಸ್ಸಿಗೆ ನೋವುಂಟು ಮಾಡಿತ್ತು.

ಇದೀಗ ಮಗಳು ಕಾಣೆಯಾಗಿರುವ ವಿಷಯದ ಬಗ್ಗೆ ಮನೆಯ ಪೂಜೆಯಲ್ಲಿ ಭಾಗಿಯಾಗಿದ್ದ ಅಖಿಲಾಂಡೇಶ್ವರಿ ಅವರಿಗೆ ವಿಷಯ ತಿಳಿದಿದ್ದು, ಮಗಳ ಪತ್ತೆಗೆ ಉದ್ಯಮಿ ಅಖಿಲಾಂಡೇಶ್ವರಿ ಅವರ ಅಭಯ ಹಸ್ತ ಸಿಕ್ಕಿದೆ. ವಠಾರದಲ್ಲಿದ್ದ ದಿನಗಳ ಬಗ್ಗೆ ಗೌತಮ್ ಅವರ ನಡೆಗೆ ಅಖಿಲಾಂಡೇಶ್ವರಿ ಅವರು ಮೆಚ್ಚುಗೆ ಸೂಚಿಸಿದ್ದಾರೆ.

"ಅಖಿಲಾಂಡೇಶ್ವರಿ ಭರವಸೆ ನೀಡಿದ ಮೇಲೆ ಗೌತಮ್ - ಭೂಮಿ ಬಾಳಲ್ಲಿ ಮಗಳೆಂಬ ಮುಗಿಲು ಬಂದೇ ಬರ್ತಾಳೆ" ಎನ್ನುವ ಸಾಲುಗಳೊಂದಿಗೆ ಜೀ ಕನ್ನಡ ವಾಹಿನಿಯು ಪ್ರೋಮೋವನ್ನು ಹಂಚಿಕೊಂಡಿದೆ. ಈ ಮೂಲಕ ಗೌತಮ್ ಹಾಗೂ ಭೂಮಿಕಾ ಅವರ ಮಗಳು ಸಿಗಲಿದ್ದಾಳೆ ಎನ್ನುವ ಮುನ್ಸೂಚನೆ ಕೊಡಲಾಗಿದೆ. ಮಿಂಚುನೇ ಗೌತಮ್ ಹಾಗೂ ಭೂಮಿಕಾ ಮಗಳು ಎನ್ನುವುದು ಪ್ರೇಕ್ಷಕರ ನಿರೀಕ್ಷೆಯಾಗಿದೆ. ಮಿಂಚು ಬಂದ ಮೇಲೆ ಗೌತಮ್ ಜೀವನ ಬದಲಾಯಿತು ಎನ್ನುವುದು ಮಿಂಚು ನಂಬಿಕೆಯಾಗಿದೆ. ಇದೀಗ ಅಖಿಲಾಂಡೇಶ್ವರಿ ಅವರು ಗೌತಮ್ ಹಾಗೂ ಭೂಮಿಕಾಗೆ ಮಗಳನ್ನು ಹುಡುಕಿಕೊಡುವ ಭರವಸೆ ನೀಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+