ಸೆಟ್ ಟಾಪ್ ಬಾಕ್ಸ್ ಇಲ್ಲದೆ ಠೀವಿ ಕಳ್ಕೊಂಡ ಟಿವಿ

TV sets without set-top boxes to go blank in 38 cities from Mar.31
ಬೆಂಗಳೂರು, ಮಾ.27: ಮಾ.31ರೊಳಗೆ ನಿಮ್ಮ ಮನೆ ಟಿವಿಗೆ ಸೆಟ್ ಟಾಪ್ ಬಾಕ್ಸ್ ಅಳವಡಿಸಿಕೊಳ್ಳದಿದ್ದರೆ ಟಿವಿಯಲ್ಲಿ ಯಾವ ಪ್ರೊಗ್ರಾಂ ಬರೋದಿಲ್ಲ, ಸೀರಿಯಲ್, ನ್ಯೂಸ್, ಕ್ರಿಕೆಟ್ ಎಲ್ಲವೂ ಬಂದ್ ಆಗಲಿದೆ. ಆದರೆ, ಕೊಟ್ಟಿರುವ ಗಡುವಿನೊಳಗೆ ಸೆಟ್ ಟಾಪ್ ಬಾಕ್ಸ್ ಅಳವಡಿಸಲು ಆಗದೆ ಕೇಬಲ್ ಸಂಸ್ಥೆಗಳು ಒದ್ದಾಡುತ್ತಿವೆ, ಗ್ರಾಹಕರು ಏನ್ರಿ ಹೀಗೆ ಮಾಡಿದ್ರೆ ಬಿಗ್ ಬಾಸ್, ಸಾಯಿಬಾಬಾ ಎಲ್ಲಾ ಹೇಗೆ ನೋಡೋದು ಎಂದು ಕೇಳಿದ್ರೆ ಕೇಂದ್ರ ಸರ್ಕಾರದ ಕಡೆಗೆ ಬೊಟ್ಟು ತೋರಿಸುತ್ತಿದ್ದಾರೆ.

ನಿಮ್ಮ ಕೇಬಲ್ ಆಪರೇಟರನ್ನು ಸಂಪರ್ಕಿಸಿ ಇಲ್ಲದಿದ್ದಲ್ಲಿ ಟಿವಿ ವೀಕ್ಷಣೆ ಮಾಡಲಾಗುವುದಿಲ್ಲ ಎಂಬ ಜಾಹೀರಾತು ಪದೇ ಪದೇ ಎಲ್ಲಾ ಚಾನೆಲ್‌ಗಳಲ್ಲೂ ಬರುತ್ತಿದೆ. ಆದರೆ, ಇನ್ನೂ ಸೆಟ್ ಟಾಪ್ ಬಾಕ್ಸ್ ರಗಳೆ ಮುಗಿದಿಲ್ಲ. ಸುಮಾರು 14 ರಾಜ್ಯಗಳ 38 ನಗರಗಳಲ್ಲಿ ಪ್ರೇಕ್ಷಕರು ಆತಂಕದಲ್ಲಿದ್ದಾರೆ.

ಆಗ್ರಾ, ಅಹಮದಾಬಾದ್, ಅಲಹಾಬಾದ್, ಅಮೃತಸರ್, ಔರಂಗಬಾದ್, ಬೆಂಗಳೂರು, ಭೋಪಾಲ್, ಚಂದೀಗಢ, ಕೊಯಮತ್ತೂರು, ಫರಿದಾಬಾದ್, ಗಾಜಿಯಾಬಾದ್, ಹೌರಾ, ಹೈದರಾಬಾದ್, ಇಂದೋರ್, ಜಬಲ್ ಪುರ, ಮೀರರ್, ಜೋಧ್ ಪುರ, ಕಲ್ಯಾಣ್ ಡೊಂಬಿವಿಲಿ, ಕಾನ್ ಪುರ, ಲಕ್ನೋ, ಲೂಧಿಯಾನ, ಮೀರತ್, ಮೈಸೂರು, ನಾಗಪುರ, ನಾಸಿಕ್, ನವಿ ಮುಂಬೈ, ಪಾಟ್ನ, ಪಿಂಪ್ರಿ-ಚಿಂಚವಾಡ್, ಪುಣೆ, ರಾಜ್ ಕೋಟ್, ರಾಂಚಿ, ಸೋಲಾಪುರ, ಶ್ರೀನಗರ, ಸೂರತ್, ಥಾಣೆ, ವಡೋದರ, ವಾರಣಸಿ ಹಾಗೂ ವಿಶಾಖಪಟ್ಟಣದಲ್ಲಿ ಸೆಟ್ ಟಾಪ್ ಬಾಕ್ಸ್ ಸಮಸ್ಯೆ ಇನ್ನೂ ಮುಂದುವರೆದಿದೆ.

ಬೆಂಗಳೂರು ಸೇರಿದಂತೆ ಎಲ್ಲಾ ನಗರಗಳಲ್ಲೂ ಇದೇ ಕಥೆಯಾಗಿದೆ. ಇದರ ಬಗ್ಗೆ ಕೇಬಲ್ ಆಪರೇಟರುಗಳನ್ನು ಕೇಳಿದರೆ ನಾವೇನು ಮಾಡುವುದು ಬಾಕ್ಸ್ ತರಬೇಕೆಂದರೆ ಲಕ್ಷಾಂತರ ರೂ. ಬಂಡವಾಳ ಹಾಕಬೇಕು.

ಒಮ್ಮೆಗೆ ಎಲ್ಲರಿಗೂ ಬಾಕ್ಸ್ ನೀಡಲಾಗುತ್ತಿಲ್ಲ. ಇನ್ನು ಸಮಯಾವಕಾಶಬೇಕು. ಕೇಂದ್ರ ಸರ್ಕಾರ ಒಪ್ಪಿಲ್ಲ. ಜೊತೆಗೆ ನಮಗೇ ಬಾಕ್ಸ್ ಸಪ್ಲೈ ಆಗಿಲ್ಲ. ಏನು ಮಾಡುವುದು ಎಂದು ಅಸಹಾಯಕತೆ ತೋಡಿಕೊಳ್ಳುತ್ತಾರೆ.

ಒಂದೊಂದು ಪ್ರದೇಶದಲ್ಲಿ ಒಂದೊಂದು ರೀತಿ ಬಾಕ್ಸ್‌ಗೆ ಹಣ ಪಡೆಯಲಾಗುತ್ತಿದೆ. ಕೆಲವು ಆಪರೇಟರ್‍ಸ್ 1200 ರೂ. ಎಂದು ಹೇಳಿ 700 ರೂ. ಅಡ್ವಾನ್ಸ್ ಪಡೆಯುತ್ತಿದ್ದಾರೆ. ಆದರೆ ಬಾಕ್ಸ್ ಕೊಡಲು ಇನ್ನು 15-20 ದಿನ ಬೇಕಾಗುತ್ತದೆ ಎಂದು ಹೇಳುತ್ತಾರೆ. ಇನ್ನು ನಾಲ್ಕು ದಿನ ಕಳೆದರೆ ಟಿವಿ ಬರಲ್ಲ. ನಾವೇನು ಮಾಡಬೇಕು ಎಂದು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.

ಕೆಲವೆಡೆ 1500 ರೂ. ಪಡೆಯಲಾಗುತ್ತಿದ್ದರೆ, ಏಪ್ರಿಲ್‌ನಿಂದ 2000 ರೂ. ನೀಡಬೇಕಾಗುತ್ತದೆ ಎಂಬ ಮಾತು ಕೇಳಿಬರುತ್ತಿದ್ದು , ವೀಕ್ಷಕರು ನಿಜಕ್ಕೂ ತೀವ್ರ ಗೊಂದಲಗಳಿಗೆ ಈಡಾಗಿದ್ದಾರೆ. ಕೆಲ ವೀಕ್ಷಕರಂತೂ ಸೆಟ್‌ಟಾಪ್ ಬಾಕ್ಸ್ ಸಹವಾಸವೂ ಬೇಡ. ಕೇಬಲ್ ಕೂಡಾ ಬೇಡ ಎಂದು ಡಿಟಿಎಚ್ ಹಾಕಿಕೊಳ್ಳಲು ಮುಂದಾಗುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+