ಜಿಲ್ಲಾವಾರು: ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ-1

karnataka-assembly-elections-bjp-probables-first-list
ಬೆಂಗಳೂರು, ಮಾ.25: ಆಡಳಿತಾರೂಢ ಭಾರತೀಯ ಜನತಾ ಪಕ್ಷ ವಿಧಾನಸಭಾ ಚುನಾವಣೆಗೆ ಸಕಲ ಸಿದ್ಧತೆ ನಡೆಸಿದ್ದು, ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧಪಡಿಸಿಕೊಂಡಿದೆ. ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ರಾಜ್ಯ ಘಟಕವು ಪಕ್ಷದ ಹೈಕಮಾಂಡಿಗೆ ತಲುಪಿಸಿದೆ. ಬುಧವಾರ ಪಟ್ಟಿ ಹೊರಬೀಳುವ ಸಾಧ್ಯತೆ ಇದೆ.

ಮುಖ್ಯವಾಗಿ, ಪಕ್ಷಾಂತರಗೊಳ್ಳಲಿದ್ದಾರೆ (ಕೆಜೆಪಿ ಮತ್ತು ಕಾಂಗ್ರೆಸ್ ಪಕ್ಷಕ್ಕೆ) ಎಂಬ ಗುಮಾನಿ ಹೊತ್ತಿರುವ ಕೆಲ ಹಾಲಿ ಶಾಸಕರಿಗೆ, ಅವರು ಆಟವಾಡುತ್ತಿರುವುದಕ್ಕೆ ತಕ್ಕಂತೆ ಬಿಜೆಪಿಯೂ ಟಿಕೆಟ್ ಪಡೆದವರ ಸಂಭಾವ್ಯರ ಪಟ್ಟಿಯಲ್ಲಿ ಅವರುಗಳ ಹೆಸರುಗಳನ್ನು ತಡೆಹಿಡಿದಿದೆ.

ಅವರುಗಳು: ರಾಜುಗೌಡ, ಬೇಳೂರು ಗೋಪಾಲಕೃಷ್ಣ, ಮಾನಪ್ಪ ವಜ್ಜಲ್, ಪ್ರತಾಪ್ ಗೌಡ ಪಾಟೀಲ್, ಸೋಮಣ್ಣ, ಶಿವರಾಜ್ ತಂಗಡಿ, ನಂಜುಂಡ ಸ್ವಾಮಿ, ರೇವೂ ನಾಯಕ್ ಬೆಳಮಗಿ, ಚಂದ್ರಕಾಂತ್ ಬೆಲ್ಲದ್, ಉಮೇಶ್ ವಿಶ್ವನಾಥ್ ಕತ್ತಿ, ಮುರುಗೇಶ್ ರುದ್ರಪ್ಪ ನಿರಾಣಿ, ಬಸವರಾಜ ಬೊಮ್ಮಾಯಿ ಮತ್ತು ರೇಣುಕಾಚಾರ್ಯ.

ಇನ್ನು, ಬಿಜೆಪಿ ಬಿಟ್ಟು ಕೆಜೆಪಿ ಕೈಹಿಡಿದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದವರ ಕ್ಷೇತ್ರಗಳಲ್ಲಿ ಹೊಸಬರಿಗೆ ಅವಕಾಶ ನೀಡಲಾಗಿದೆ. ಶಿಕಾರಿಪುರ ಕ್ಷೇತ್ರಕ್ಕೆ ಕಾದು ನೋಡುವ ತಂತ್ರ ಅನುಸರಿಸಲಾಗಿದೆ. ಶೋಭಾ ಕರಂದ್ಲಾಜೆ ತೊರೆದಿರುವ ಯಶವಂತಪುರಕ್ಕೆ ಇನ್ನೂ ಯಾರೂ ಕಾಣಿಸಿಕೊಂಡಿಲ್ಲ.

ಜತೆಗೆ, jail-returned ಕಟ್ಟಾ ಸುಬ್ರಮಣ್ಯ ನಾಯ್ಡು, ಕೃಷ್ಣಯ್ಯ ಶೆಟ್ಟಿ, ವೈ ಸಂಪಗಿ ಅವರೂ ಬಿಜೆಪಿ ಟಿಕೆಟಿನಿಂದ ವಂಚಿತರಾಗುವುದು ಸ್ಪಷ್ಟವಾಗಿದೆ.
19 ಜಿಲ್ಲೆಗಳಲ್ಲಿ ಬಿಜೆಪಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಹೀಗಿದೆ:

ಚಿಕ್ಕಮಗಳೂರು ಜಿಲ್ಲೆ:
ಚಿಕ್ಕಮಗಳೂರು- ಸಿಟಿ ರವಿ
ತರೀಕೆರೆ - ಅವಿನಾಶ್
ಶೃಂಗೇರಿ- ಡಿಎನ್ ಜೀವರಾಜ್
ಮೂಡಿಗೆರೆ ಮೀಸಲು- ಎಂಪಿ ಕುಮಾರಸ್ವಾಮಿ

ಶಿವಮೊಗ್ಗ ಜಿಲ್ಲೆ:
ಶಿವಮೊಗ್ಗ- ಕೆಎಸ್ ಈಶ್ವರಪ್ಪ
ಶಿವಮೊಗ್ಗ ಗ್ರಾಮಾಂತರ ಮೀಸಲು- ಕೆಜಿ ಕುಮಾರಸ್ವಾಮಿ
ತೀರ್ಥಹಳ್ಳಿ- ಆರಗ ಜ್ಞಾನೇಂದ್ರ (ಸೋತಿರುವ ಅಭ್ಯರ್ಥಿ)

ಬಾಗಲಕೋಟೆ ಜಿಲ್ಲೆ:
ಬದಾಮಿ- ಮಹಾಗುಂಡಪ್ಪ ಕಳ್ಳಪ್ಪ ಪಟ್ಟಣಶೆಟ್ಟಿ
ಬಾಗಲಕೋಟೆ- ವೀರಣ್ಣ ಚರಂತಿಮಠ ಚಂದ್ರಶೇಖರಯ್ಯ
ಜಮಖಂಡಿ- ಕುಲಕರ್ಣಿ ಶ್ರೀಕಾಂತ ಸುಬ್ಬರಾವ್
ತೇರದಾಳ - ಸಿದ್ದು ಸವದಿ
ಮುಧೋಳ ಎಸ್ ಸಿ - ಗೋವಿಂದ ಎಂ ಕಾರಜೋಳ

ಬೆಂಗಳೂರು ನಗರ:
ಬೆಂಗಳೂರು ದಕ್ಷಿಣ - ಎಂ ಕೃಷ್ಣಪ್ಪ
ಬಸವನಗುಡಿ - ರವಿಸುಬ್ರಹ್ಮಣ್ಯ
ಸಿವಿ ರಾಮನ್ ನಗರ ಮೀಸಲು - ಎಸ್ ರಘು
ದಾಸರಹಳ್ಳಿ- ಎಸ್ ಮುನಿರಾಜು
ಜಯನಗರ- ಬಿಎನ್ ವಿಜಯ್ ಕುಮಾರ್
ಕೆಆರ್ ಪುರಂ- ಎನ್ಎಸ್ ನಂದೀಶ್ ರೆಡ್ಡಿ
ಮಹದೇವಪುರ ಮೀಸಲು - ಅರವಿಂದ ಲಿಂಬಾವಳಿ
ಮಲ್ಲೇಶ್ವರಂ- ಡಾ ಸಿಎನ್ ಅಶ್ವತ್ಥ್ ನಾರಾಯಣ
ಪದ್ಮನಾಭನಗರ- ಆರ್ ಅಶೋಕ್
ರಾಜಾಜಿನಗರ- ಎಸ್ ಸುರೇಶ್ ಕುಮಾರ್
ರಾಜರಾಜೇಶ್ವರಿನಗರ- ಎಂ ಶ್ರೀನಿವಾಸ್
ಯಲಹಂಕ- ಎಸ್ಆರ್ ವಿಶ್ವನಾಥ್
ಆನೇಕಲ್ ಮೀಸಲು - ನಾರಾಯಣಸ್ವಾಮಿ
ನೆಲಮಂಗಲ- ಎಂ.ವಿ. ನಾಗರಾಜ್

ಬೆಳಗಾವಿ ಜಿಲ್ಲೆ:
ಅರಬಾವಿ- ಬಾಲಚಂದ್ರ ಲಕ್ಷ್ಮಣ ರಾವ್ ಜಾರಕಿಹೊಳಿ
ಬೈಲಹೊಂಗಲ- ಜಗದೀಶ್ ವಿರೂಪಾಕ್ಷಿ ಚನ್ನಪ್ಪ ಮೇಟಗುಡ್ಡ
ಬೆಳಗಾವಿ (ಗ್ರಾಂ)- ಸಂಜಯ ಬಿ ಪಾಟೀಲ್
ಬೆಳಗಾವಿ (ದಕ್ಷಿಣ)- ಅಭಯ್ ಪಾಟೀಲ್
ಖಾನಾಪುರ- ಪ್ರಹ್ಲಾದ್ ರೇಮನಿ
ಕಾಗವಾಡ- ರಾಜು ಕಾಗೆ
ಕಿತ್ತೂರು- ಸುರೇಶ್ ಶಿವರುದ್ರಪ್ಪ ಮಾರಿಹಾಳ್
ಸವದತ್ತಿ- ಆನಂದ್ ವಿ. ಮಾಮನಿ

ಬಳ್ಳಾರಿ ಜಿಲ್ಲೆ:
ಹೂವಿನ ಹಡಗಲಿ ಮೀಸಲು - ಬಿ ಚಂದ್ರಾ ನಾಯ್ಕ್
ಸಿರಗುಪ್ಪ- ಎಂಕೆ ಸೋಮಲಿಂಗಪ್ಪ
ಹಗರಿಬೊಮ್ಮನಹಳ್ಳಿ ಮೀಸಲು - ಕೆ ನೇಮರಾಜ್ ನಾಯ್ಕ್
ವಿಜಯನಗರ (ಹೊಸಪೇಟೆ)- ಆನಂದ್ ಸಿಂಗ್

ಬೀದರ್ ಜಿಲ್ಲೆ:
ಔರಾದ್ ಮೀಸಲು- ಪ್ರಭು ಚವ್ಹಾಣ್

ಬಿಜಾಪುರ ಜಿಲ್ಲೆ:
ಬಿಜಾಪುರ ನಗರ - ಅಪ್ಪು ಪಟ್ಟಣಶೆಟ್ಟಿ
ಇಂಡಿ- ಡಾ ಸಾರ್ವಭೌಮ ಬಗಲಿ
ಸಿಂಧಗಿ- ರಮೇಶ್ ಭೂಸನೂರ್ ಬಾಳಪ್ಪ
ಬಸವನಬಾಗೇವಾಡಿ- ಸಂಗಪ್ಪ ಕಲ್ಲಪ್ಪ ಬೆಳ್ಳುಬ್ಬಿ

ದಕ್ಷಿಣ ಕನ್ನಡ ಜಿಲ್ಲೆ
ಮಂಗಳೂರು (ಉತ್ತರ)- ಕೃಷ್ಣ ಪಾಲೇಮಾರ್
ಮಂಗಳೂರು (ದಕ್ಷಿಣ)- ಎನ್ ಯೋಗೀಶ್ ಭಟ್
ಸುಳ್ಯ ಮೀಸಲು - ಎಸ್ ಅಂಗಾರ

ಧಾರವಾಡ ಜಿಲ್ಲೆ:
ಹುಬ್ಬಳ್ಳಿ- ಧಾರವಾಡ ಕೇಂದ್ರ - ಜಗದೀಶ್ ಶೆಟ್ಟರ್
ನವಲಗುಂದ- ಶಂಕರ ಪಾಟೀಲ್ ಮುನೇನಕೊಪ್ಪ

ಗದಗ ಜಿಲ್ಲೆ
ರೋಣ- ಕಳಕಪ್ಪ ಗುರುಶಾಂತಪ್ಪ ಬಂಡಿ
ಶಿರಹಟ್ಟಿ ಮೀಸಲು - ರಾಮಣ್ಣ ಎಸ್ ಲಮಾಣಿ

ಕೊಪ್ಪಳ ಜಿಲ್ಲೆ
ಕೊಪ್ಪಳ- ಕರಡಿ ಸಂಗಣ್ಣ ಅಮರಾಪುರ

ಕೊಡಗು ಜಿಲ್ಲೆ:
ಮಡಿಕೇರಿ- ಎಂಪಿ ಅಪ್ಪಚ್ಚುರಂಜನ್
ವಿರಾಜಪೇಟೆ- ಕೆಜಿ ಬೋಪಯ್ಯ

ಮೈಸೂರು ಜಿಲ್ಲೆ:
ಕೃಷ್ಣರಾಜ- ಎಸ್ಎ ರಾಮದಾಸ್

ತುಮಕೂರು ಜಿಲ್ಲೆ:
ತಿಪಟೂರು- ಬಿಸಿ ನಾಗೇಶ್
ತುಮಕೂರು ನಗರ- ಸೊಗಡು ಶಿವಣ್ಣ
ತುಮಕೂರು ಗ್ರಾ. - ಬಿ ಸುರೇಶ್ ಗೌಡ

ಚಾಮರಾಜನಗರ ಜಿಲ್ಲೆ:
ಕೊಳ್ಳೆಗಾಲ ಮೀಸಲು - ಜಿಎನ್ ನಂಜುಂಡಸ್ವಾಮಿ

ಗುಲ್ಬರ್ಗ ಜಿಲ್ಲೆ:
ಗುಲ್ಬರ್ಗ ಗ್ರಾ. ಎಸ್ ಸಿ - ರೇವು ನಾಯಕ್ ಬೆಳಮಗಿ

ದಾವಣಗೆರೆ ಜಿಲ್ಲೆ:
ಹರಪನಹಳ್ಳಿ ಕೆ ಕರುಣಾಕರ ರೆಡ್ಡಿ

ರಾಯಚೂರು ಜಿಲ್ಲೆ:
ದೇವದುರ್ಗ- ಮೀಸಲು ಶಿವನಗೌಡ ನಾಯಕ್

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+