Daily Horoscope July 22: ಈ ಮೂರು ರಾಶಿಯವರಿಗೆ ಧನಲಾಭ, ಕೈ ಸೇರುತ್ತೆ ಬಾಕಿ ಹಣ; ನಿಮ್ಮ ದಿನ ಭವಿಷ್ಯ

Daily Horoscope: ಇಂದು ಬುಧವಾರ (ಜುಲೈ 22) ಎಲ್ಲ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಇದು ವೈದಿಕ ಜ್ಯೋತಿಷ್ಯ ಕ್ರಮದಲ್ಲಿ ಲೆಕ್ಕ ಹಾಕಿ ಬರೆದ ದಿನ ಭವಿಷ್ಯವಾಗಿದೆ. ಇಂದು ಯಾವ ರಾಶಿಯವರಿಗೆ ಧನಲಾಭವಾಗಲಿದೆ, ಆರೋಗ್ಯ ಸುಧಾರಣೆ, ವೃತ್ತಿ ಹಾಗೂ ವೈವಾಹಿಕ ಜೀವನದ ಭವಿಷ್ಯ, ಫಲಾಫಲಗಳ ಮಾಹಿತಿ ಹೇಗಿದೆ ಇಲ್ಲಿದೆ.

ಮೇಷ ರಾಶಿ (Aries)

ಇಂದು ನಿಮಗೆ ಉತ್ತಮ ದಿನವಾಗಿರುತ್ತದೆ. ಇಂದು ಯಾವುದೇ ಪ್ರಮುಖ ಕೆಲಸವನ್ನು ಪ್ರಾರಂಭಿಸುವ ಮೊದಲು ಕುಟುಂಬ ಸದಸ್ಯರ ಸಲಹೆಯನ್ನು ಪಡೆಯುವುದು ಒಳ್ಳೆಯದು. ಸ್ವಲ್ಪ ಕಠಿಣ ಪರಿಶ್ರಮವು ಗಮನಾರ್ಹ ಆರ್ಥಿಕ ಲಾಭಕ್ಕೆ ಅವಕಾಶವನ್ನು ಒದಗಿಸುತ್ತದೆ. ಯುವಕರು ಇಂದು ತಮ್ಮ ವೃತ್ತಿ ಮತ್ತು ಭವಿಷ್ಯದ ಯೋಜನೆಗಳ ಬಗ್ಗೆ ಪ್ರಮುಖ ಮಾಹಿತಿಯನ್ನು ಪಡೆಯುತ್ತಾರೆ.

Daily Horoscope July 22

ವೃಷಭ ರಾಶಿ (Taurus)

ಇಂದು ನಿಮಗೆ ಅನುಕೂಲಕರ ದಿನವಾಗಿರಲಿದೆ. ಪ್ರಮುಖ ಕಂಪನಿಯಿಂದ ಉದ್ಯೋಗದ ಆಫರ್ ಸಿಗಬಹುದು. ಗೃಹೋಪಯೋಗಿ ವಸ್ತುಗಳನ್ನು ಖರೀದಿಸುವಿರಿ. ಅತಿಥಿಗಳ ಭೇಟಿಯಿಂದ ಸಂತೋಷ ಹೆಚ್ಚುವುದು. ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ.

ಮಿಥುನ ರಾಶಿ (Gemini)

ಇಂದು ಹೊಸ ಉತ್ಸಾಹ ತುಂಬಿದ ದಿನವಾಗಿರುತ್ತದೆ. ಬಹಳ ದಿನಗಳಿಂದ ಬಾಕಿ ಉಳಿದಿರುವ ಕೆಲಸವನ್ನು ಪೂರ್ಣಗೊಳಿಸಲು ಇಂದು ಸರಿಯಾದ ಸಮಯ. ನಿರುದ್ಯೋಗಿಗಳಿಗೆ ಉತ್ತಮ ಉದ್ಯೋಗ ಸಿಗುವ ಸಾಧ್ಯತೆಗಳಿವೆ.ನೀವು ಮಾಡುವ ಕೆಲಸಗಳಿಗೆ ಮನೆಯವರ ಬೆಂಬಲ ಇರುವುದು.

ಕರ್ಕಾಟಕ ರಾಶಿ (Cancer)

ಇಂದಿನ ದಿನ ನಿಮಗೆ ವಿಶೇಷವಾಗಿರಲಿದೆ. ತಾಳ್ಮೆಯಿಂದ ಇದ್ದರೆ ಕೆಲಸ ಕಾರ್ಯಗಳು ಸಮಯಕ್ಕೆ ಸರಿಯಾಗಿ ಪೂರ್ಣವಾಗುವುದು. ವಾಹನ ಚಲಾಯಿಸುವಾಗ ಎಚ್ಚರಿಕೆಯಿಂದ ಇರಿ. ವ್ಯಾಪಾರದಲ್ಲಿ ಲಾಭ ದುಪ್ಪಟ್ಟಾಗುವುದು. ವೈವಾಹಿಕ ಜೀವನ ಉತ್ತಮವಾಗಿರುತ್ತದೆ.

ಸಿಂಹ ರಾಶಿ (Leo)

ಕುಟುಂಬದ ವಾತಾವರಣ ಉತ್ತಮವಾಗಿರುತ್ತದೆ. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ. ಕೌಟುಂಬಿಕ ವಿಷಯಗಳಿಗೆ ಸಂಬಂಧಿಸಿದಂತೆ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಿರಿ. ಕುಟುಂಬದೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯುವಿರಿ.

ಕನ್ಯಾ ರಾಶಿ (Virgo)

ಇಂದು ನಿಮಗೆ ಸಾಮಾನ್ಯ ದಿನವಾಗಿರುತ್ತದೆ. ಪರಸ್ಪರ ಚರ್ಚೆಯ ಮೂಲಕ, ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳಬಹುದು. ನಿಮ್ಮ ಮಕ್ಕಳಿಂದ ಒಳ್ಳೆಯ ಸುದ್ದಿ ಸಿಗಬಹುದು. ಕಠಿಣ ಪರಿಶ್ರಮ, ತಾಳ್ಮೆ ಮತ್ತು ತಿಳುವಳಿಕೆಯಿಂದ, ಕಚೇರಿ ಕೆಲಸವನ್ನು ತ್ವರಿತವಾಗಿ ಪೂರ್ಣಗೊಳಿಸುವಿರಿ. ಹೊಸ ಜವಾಬ್ದಾರಿಗಳು ಸಿಗಬಹುದು. ವಿದ್ಯಾರ್ಥಿಗಳಿಗೆ ದಿನ ಅನುಕೂಲಕರವಾಗಿರುವುದು.

ತುಲಾ ರಾಶಿ (Libra) :

ಇಂದು ಸಂತೋಷದ ದಿನವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಒಳ್ಳೆಯ ಸುದ್ದಿ ಸಿಗಲಿದೆ. ಆರ್ಥಿಕ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಣೆಯಾಗುವುದು. ಮನೆ ಮತ್ತು ವೃತ್ತಿಪರ ಜೀವನವನ್ನು ಸಮತೋಲನಗೊಳಿಸಲು ಸಾಧ್ಯವಾಗುತ್ತದೆ. ವೈವಾಹಿಕ ಜೀವನವು ಸಾಮರಸ್ಯದಿಂದ ಕೂಡಿರುತ್ತದೆ.

ವೃಶ್ಚಿಕ ರಾಶಿ (Scorpio):

ಇಂದು ನಿಮಗೆ ಒಳ್ಳೆಯ ದಿನವಾಗಿರಲಿದೆ. ರಾಜಕೀಯ ವ್ಯಕ್ತಿಗಳಿಗೆ ವಿದೇಶ ಪ್ರಯಾಣದ ಯೋಗ ಒಲಿಯುವುದು. ಶೈಕ್ಷಣಿಕ ಕೆಲಸದಲ್ಲಿ ತೊಡಗಿರುವವರು ಉತ್ತಮ ಯಶಸ್ಸನ್ನು ಸಾಧಿಸುವ ಸಾಧ್ಯತೆಯಿದೆ. ಖಾಸಗಿ ಉದ್ಯೋಗದಲ್ಲಿರುವವರಿಗೆ ಸಂಬಳ ಹೆಚ್ಚಳವಾಗುತ್ತದೆ.

ಧನು ರಾಶಿ (Sagitarius):

ಇಂದು ನಿಮಗೆ ಶುಭ ದಿನವಾಗಿರಲಿದೆ. ಕುಟುಂಬದೊಂದಿಗೆ ಸಂತೋಷದ ಸಮಯ ಕಳೆಯುವಿರಿ. ವ್ಯಾಪಾರದಲ್ಲಿ ಇದ್ದಕ್ಕಿದ್ದಂತೆ ಗಮನಾರ್ಹ ಲಾಭವಾಗುವುದು. ಸಾಲ ನೀಡಿ ಹೊರಗೆ ಉಳಿದಿರುವ ಹಣ ಮತ್ತೆ ಕೈ ಸೇರುವುದು. ಆರ್ಥಿಕ ಪರಿಸ್ಥಿತಿ ಮೊದಲಿಗಿಂತ ಬಲವಾಗಿರುತ್ತದೆ. ಕುಟುಂಬದ ಪರಿಸ್ಥಿತಿ ಚೆನ್ನಾಗಿರುತ್ತದೆ. ಆರೋಗ್ಯವು ಹೆಚ್ಚು ಉತ್ತಮವಾಗಿರುತ್ತದೆ.

ಮಕರ ರಾಶಿ (Capricorn):

ಇಂದು ಅನುಕೂಲಕರ ದಿನವಾಗಿರುವುದು. ರಾಜಕೀಯದಲ್ಲಿ ತೊಡಗಿರುವವರಿಗೆ ಒಳ್ಳೆಯ ದಿನವಾಗಿರಲಿದೆ. ಸಂಬಂಧಗಳು ಉತ್ತಮವಾಗಿರುವುದು. ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.

ಕುಂಭ ರಾಶಿ (Aquarius):

ನಿಮ್ಮ ದಿನವು ಆತ್ಮವಿಶ್ವಾಸದಿಂದ ತುಂಬಿರುತ್ತದೆ. ಉತ್ತಮ ಉದ್ಯೋಗದ ಅವಕಾಶ ಸಿಗಬಹುದು. ವ್ಯವಹಾರಕ್ಕಾಗಿ ದೂರದ ಊರಿಗೆ ಪ್ರಯಾಣ ಬೆಳೆಸಬೇಕಾಗಬಹುದು. ಮನೆಯಲ್ಲಿ ಸಂತೋಷದ ವಾತಾವರಣವಿರುವುದು. ವೈವಾಹಿಕ ಜೀವನ ಇಂದು ಉತ್ತಮವಾಗಿರುತ್ತದೆ.

ಮೀನ ರಾಶಿ (Pisces) :

ಇಂದು ನಿಮ್ಮ ಪಾಲಿಗೆ ಪ್ರಮುಖ ದಿನವಾಗಿರುತ್ತದೆ. ಇಂದು ಕಚೇರಿ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದು ಒಳ್ಳೆಯದು. ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಾಗುವುದು. ಆದರೂ ಕೆಲಸವನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವಿರಿ. ಆರೋಗ್ಯದತ್ತ ಗಮನ ಹರಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+