ಕೋಲ್ಕತಾದಲ್ಲಿ ಕೊರಿಯಾ ಮಹಿಳೆಗೆ ಲೈಂಗಿಕ ದೌರ್ಜನ್ಯ

ಬೆಳಿಗ್ಗೆ 7.30ರ ಸುಮಾರಿನಲ್ಲಿ ಬಸ್ಸಿನಲ್ಲಿ ಹೋಗುತ್ತಿದ್ದ ಯುವತಿಯ ಜೊತೆ ಯುವಕ ಅಸಭ್ಯವಾಗಿ ವರ್ತಿಸಿದ್ದಾನೆ. ಕೂಡಲೆ ಆ ಮಹಿಳೆ ಸಂಚಾರಿ ಪೊಲೀಸರಿಗೆ ದೂರು ನೀಡಿದ್ದಾಳೆ. ಆ ಬಸ್ಸಿನಲ್ಲಿ ಚಲಿಸುತ್ತಿದ್ದ ಯುವಕರನ್ನು ವಿಚಾರಣೆಗೆ ತೆಗೆದುಕೊಂಡ ಪೊಲೀಸರು, ಮಹಿಳೆ ಗುರುತಿಸಿದ ಯುವಕನನ್ನು ಬಂಧಿಸಿದರು.
ದೇಶದಲ್ಲಿ ದೇಶಿ ಮಹಿಳೆಯರು ಮಾತ್ರವಲ್ಲ ವಿದೇಶಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯಗಳು ಹೆಚ್ಚುತ್ತಿವೆ. ಕಳೆದ ವಾರ ಇಂಗ್ಲೆಂಡ್ ಮೂಲದ ಯುವತಿಯೊಬ್ಬಳು ಹೋಟೆಲ್ ಮಾಲಿನ ಕಿರುಕುಳ ತಾಳಲಾರದೆ ಕಟ್ಟಡದಿಂದಲೇ ಜಿಗಿದು ಪಾರಾಗಿದ್ದಳು.
ಕೆಲ ದಿನಗಳ ಹಿಂದೆ ಗಂಡನ ಜೊತೆ ಸೈಕ್ಲಿಂಗ್ ಮಾಡುತ್ತಿದ್ದ ಸ್ವಿಟ್ಜರ್‌ಲೆಂಡಿನ ಮಹಿಳೆಯ ಮೇಲೆ ಮಧ್ಯಪ್ರದೇಶದ ಹಳ್ಳಿಯೊಂದರ ಯುವಕರ ಗುಂಪು ಸಾಮೂಹಿಕವಾಗಿ ಅತ್ಯಾಚಾರ ಮಾಡಿತ್ತು. ವಿದೇಶಿ ಮಹಿಳೆಯರು ಭಾರತದಲ್ಲಿ ಎಚ್ಚರದಿಂದಿರಬೇಕು ಎಂದು ಇಂಗ್ಲೆಂಡ್, ಸ್ವಿಟ್ಜರ್‌ಲೆಂಡ್ ದೇಶಗಳು ಎಚ್ಚರಿಕೆ ನೀಡುತ್ತಿರುವಾಗಲೇ ಕೊರಿಯಾ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ.
ಕಳೆದ ವರ್ಷದ ಡಿಸೆಂಬರ್ 16ರಂದು ದೆಹಲಿಯಲ್ಲಿ 23 ವರ್ಷದ ಯುವತಿಯನ್ನು ಭೀಕರವಾಗಿ ಥಳಿಸಿ ಸಾಮೂಹಿಕವಾಗಿ ಅತ್ಯಾಚಾರ ಮಾಡಿದ ಘಟನೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಟೀಕೆಗೆ ಗುರಿಯಾಗಿದೆ. ಭಾರತದಲ್ಲಿಯೂ ಅನೇಕ ಪ್ರತಿಭಟನೆ ನಡೆಯುತ್ತಿದ್ದರೂ ದೌರ್ಜನ್ಯವನ್ನು ಸಂಪೂರ್ಣವಾಗಿ ಹತ್ತಿಕ್ಕುವುದು ಸಾಧ್ಯವಾಗುತ್ತಿಲ್ಲ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications