ಬಿಜೆಪಿಗೆ ಹೊಸ ಬ್ಯಾಟರಿ, ಫುಲ್ ಚಾರ್ಜ್: ಸದಾನಂದ ಗೌಡ

bjp-is-recharged-with-new-battery-sadananda-gowda
ಬೆಂಗಳೂರು‌, ಮಾರ್ಚ್ 23: ಬಿಜೆಪಿಯ ನಿರ್ಗಮಿತ ರಾಜ್ಯಾಧ್ಯಕ್ಷ ಈಶ್ವರಪ್ಪ ಅವರೇ ನೂತನ ರಾಜ್ಯಾಧ್ಯಕ್ಷ ಪ್ರಹ್ಲಾದ್‌ ಜೋಶಿಗೆ ಇಂದು ಬೆಳಗ್ಗೆ ಸುಸೂತ್ರವಾಗಿ ಅಧಿಕಾರ ವಹಿಸಿಕೊಟ್ಟಿದ್ದಾರೆ.

ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಅಧಿಕಾರ ಹಸ್ತಾಂತರವಾಗಿದ್ದು, ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಅನಂತ ಕುಮಾರ್, ಉಪ ಮುಖ್ಯಮಂತ್ರಿ ಆರ್ ಅಶೋಕ್ ಹಾಗೂ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದ ಗೌಡ ಅವರು ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಹೊಸ ಬ್ಯಾಟರಿ ತೊಡಿಸಲಾಗಿದೆ. ಬಿಜೆಪಿ ಈಗ ಫುಲ್ ಚಾರ್ಜ್ ಆಗಿದೆ ಎಂದು ವರ್ಣಿಸಿದ್ದಾರೆ.

ಹುಬ್ಬಳ್ಳಿ ಪವರ್ ಜಾಸ್ತಿಯಾಗಿದೆ: 'ಜೋಶಿ ಹುಬ್ಬಳ್ಳಿಯವರು. ಅವರೀಗ ಪಕ್ಷದ ನೂತನ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಿದ್ದಾರೆ. ಇದರಿಂದ ಸಹಜವಾಗಿ ನನಗೆ ಸಂತೋಷವಾಗಿದೆ. ಅನಂತಕುಮಾರ್ ಅವರೂ ಹುಬ್ಬಳಿಯವರೇ. ಹಾಗಾಗಿ ಹುಬ್ಬಳ್ಳಿ ಪವರ್ ಜಾಸ್ತುಯಾಗಿದೆ' ಎಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಹೇಳಿದ್ದಾರೆ.

ಇದೇ ವೇಳೆ, ತಮ್ಮ ಮತ್ತು ಜೋಶಿ ಮಧ್ಯೆಯಾಗಲಿ ಅಥವಾ ಅನಂತ ಕುಮಾರ್ ಮಧ್ಯೆ ಆಗಲಿ ಯಾವುದೇ ಮಾತಿನ ಚಕಮಕಿ ನಡೆದಿಲ್ಲ ಎಂದು ನಿರ್ಗಮಿತ ರಾಜ್ಯಾಧ್ಯಕ್ಷ ಈಶ್ವರಪ್ಪ ಅವರು ಪ್ರಮಾಣಪೂರ್ವಕವಾಗಿ ತಿಳಿಸಿದ್ದಾರೆ.

ವಿಧಾನಸಭೆ ಚುನಾವಣೆಗಾಗಿ ಅಭ್ಯರ್ಥಿಗಳ ಆಯ್ಕೆ ಇಂದು ಶನಿವಾರ ಸಂಜೆಗೆ ಪೂರ್ಣಗೊಳಿಸಲಾಗುವುದು. ಮಾರ್ಚ್ 25ರಂದು ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಜೋಶಿ ತಿಳಿಸಿದ್ದಾರೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+