ತಂತ್ರಜ್ಞಾನ ಅರಿತವನೇ ಜಾಣ : ನರೇಂದ್ರ ಮೋದಿ

ಇಂಟರ್ ನೆಟ್ ಗೇಮ್ ಚೇಂಜರ್ ಆಗಿ ಬಳಕೆಯಾಗುತ್ತಿದ್ದು, ಸಾಮಾನ್ಯ ಪ್ರಜೆಗಳಿಗೂ ಸರ್ಕಾರಿ ನೀತಿ ನಿಯಮದ ಬಗ್ಗೆ ತಕ್ಷಣಕ್ಕೆ ಮಾಹಿತಿ ಲಭ್ಯವಾಗುತ್ತಿದೆ. ನಿಯಮಗಳನ್ನು ಬದಲಾಯಿಸಲು, ತಮ್ಮ ಹಕ್ಕುಗಳನ್ನು ಸ್ಥಾಪಿಸಲು ಸಾರ್ವಜನಿಕರಿಗೆ ತಂತ್ರಜ್ಞಾನ ಸದವಕಾಶ ನೀಡುತ್ತಿದೆ ಎಂದು ಬಿಗ್ ಟೆಂಟ್ ಸಭೆ ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಮೋದಿ ಹೇಳಿದರು.
ಭಾರತೀಯ ಪ್ರತಿಭೆ + ಮಾಹಿತಿ ತಂತ್ರಜ್ಞಾನ = ಭವಿಷ್ಯದ ಭಾರತ ಎಂದು ಸಮೀಕರಣ ಹಾಕಿ ವಿವರಿಸಿದ ಮೋದಿ, ರಾಜಕಾರಣಿಗಳು ತಂತ್ರಜ್ಞಾನ ಬಳಕೆ ಮಾಡಿಕೊಂಡು ಹೇಗೆ ಅಭಿವೃದ್ಧಿ ಪಥದತ್ತ ಸಾಗಬಹುದು ಎಂದು ವಿವರಿಸಿದರು. ಈ ಹಿಂದೆ ಐದು ವರ್ಷಕ್ಕೊಮ್ಮೆ ನಿಮ್ಮ ನೇತಾರರ ಮುಖ ನೋಡುವ ಭಾಗ್ಯ ಸಿಗುತ್ತಿತ್ತು. ಈಗ ಸಾಮಾಜಿಕ ಜಾಲ ತಾಣಗಳ ಕ್ರಾಂತಿ ಆರಂಭವಾದ ಮೇಲೆ ಪ್ರತಿಕ್ಷಣ ನೀವು ಅವರನ್ನು ಹಿಂಬಾಲಿಸಿ ಎಚ್ಚರಿಸಬಹುದಾಗಿದೆ.
ಜನರ ಜೊತೆ ಸಂಪರ್ಕ ಇಟ್ಟುಕೊಳ್ಳದೆ ಮತ ಕೇಳುವ ರಾಜಕಾರಣಿಗಳಿಗೆ ಇನ್ಮುಂದೆ ಬೆಲೆ ಇರುವುದಿಲ್ಲ. ಜನರ ಬಳಿ ಇಂಟರ್ ನೆಟ್ ಎಂಬ ಅಸ್ತ್ರವಿದೆ ಎಂಬುದನ್ನು ಮರೆಯಬಾರದು ಎಂದು ಮೋದಿ ಹೇಳಿದರು.
3D ಹಾಲೋಗ್ರಾಫಿಕ್ ಪ್ರೊಜೆಕ್ಷನ್ ಮೂಲಕ ಒಂದೇ ಬಾರಿಗೆ ವಿವಿಧ ಕಡೆ ಭಾಷಣ ಮಾಡಿ ಗಿನ್ನಿಸ್ ದಾಖಲೆ ನಿರ್ಮಿಸಿರುವ ಮೋದಿ ಅವರು ಗೂಗಲ್ ಸಭೆಯಲ್ಲಿ ಮಾತನಾಡಿದ ಪ್ರಪ್ರಥಮ ಭಾರತದ ಚುನಾಯಿತ ಪ್ರತಿನಿಧಿಯಾಗಿದ್ದಾರೆ.
ಗುಜರಾತಿನಲ್ಲಿ Information and Communication Technology (ICT) ಮೂಲಕ ಜನರಿಗೆ ಹತ್ತಿರವಾಗಿದ್ದೇವೆ. ಅಮೆರಿಕದಿಂದ ಸಾರ್ವಜನಿಕ ಸೇವೆ ಪ್ರಶಸ್ತಿ ಸಿಕ್ಕಿರುವುದು ಜನರ ಜ್ಞಾನದ ಮಟ್ಟದ ಅಭಿವೃದ್ಧಿ, ಆಡಳಿತಗಾರರೊಡನೆ ಸಂಪರ್ಕ ಸಾಧ್ಯವಾಗಿದ್ದರಿಂದ ಮಾತ್ರ.
"learn, unlearn and relearn". ಯಾರು ಇದನ್ನು ಅಳವಡಿಸಿಕೊಳ್ಳಲು ಅವರು 21ನೇ ಶತಮಾನದಲ್ಲಿ ಅನಕ್ಷರಸ್ಥರು ಎಂದು ಆಳ್ವಿನ್ ಟೊಫ್ಲರ್ ಉಕ್ತಿಯನ್ನು ಹೇಳಿದರು.
ರಾಜಕಾರಣಿಗಳು ಯಾವುದೆ ಹೊದ ಆವಿಷ್ಕಾರವನ್ನು ತಕ್ಷಣಕ್ಕೆ ಅಳವಡಿಸಿಕೊಳ್ಳುವುದಿಲ್ಲ, ಮೈಕ್ರೋಫೋನ್, ಚಲನಚಿತ್ರ ಅಥವಾ ಟಿವಿ ಇರಲಿ ಹೊಸ ತಂತ್ರಜ್ಞಾನ ನೀಡುವ ಸಾಧಕಗಳನ್ನು ಸದ್ವಿನಿಯೋಗಿಸಿಕೊಳ್ಳಬೇಕಿದೆ. ಗುಜಾರಾತಿನಲ್ಲಿ Geographic Information System (GIS) ಬಳಸಿ ಅರಣ್ಯಗಳ ನಿಗಾವಹಿಸುವುದು, ಆಸ್ಪತ್ರೆಗಳಿಗೆ ಸ್ಥಳ ಹುಡುಕುವುದು ಮುಂತಾದ ಕಾರ್ಯಗಳು ಸಾಗಿದೆ. ಇ ಗ್ರಾಮ, ವಿಶ್ವ ಗ್ರಾಮ ಯೋಜನೆ ಜಾರಿಯಲ್ಲಿದೆ. ಎಲ್ಲಾ ಹಳ್ಳಿಗಳನ್ನು ಸಂಪರ್ಕಿಸುತ್ತದೆ. ಇ ವೋಟಿಂಗ್ ಗೆ ಜನರು ಹೊಂದಿಕೊಳ್ಳುತ್ತಿದ್ದಾರೆ
ತಂತ್ರಜ್ಞಾನದಲ್ಲಿ ಒಳ್ಳೆಯದು ಕೆಟ್ಟದ್ದು ಎಂಬುದಿರುವುದಿಲ್ಲ. ನಾವು ಅದನ್ನು ಹೇಗೆ ಬಳಸಿಕೊಳ್ಳುತ್ತೇವೆ ಎಂಬುದು ಮುಖ್ಯವಾಗುತ್ತದೆ ಎಂದರು (ಪಿಟಿಐ)
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications