ಭಾರತದಲ್ಲಿ ಪೆಟ್ರೋಲ್ ಬೆಲೆ: ಅಗ್ಗ ಎಲ್ಲಿ, ದುಬಾರಿ ಎಲ್ಲಿ?
ಮೊನ್ನೆ ತಾನೆ ವೆನಿಜುಲಾದಲ್ಲಿ ಚೀಪೆಸ್ಟ್ ಆಗಿ ಅಂದರೆ ಒಂದು ಲೀಟರ್ 6 ರೂಪಾಯಿ 50 ಪೈಸೆಗೆಲ್ಲಾ ಪೆಟ್ರೋಲ್ ಸಿಗುತ್ತೆ ಅಂತ ತಿಳಿದುಕೊಂಡಿರಿ. ಅದು ಪೆಟ್ರೋಲ್ ಉತ್ಪಾದನೆ ರಾಷ್ಟ್ರಗಳ ಪೈಕಿ ಅತ್ಯಂತ ಅಗ್ಗದ ಪೆಟ್ರೋಲ್ ಆಯಿತು.
ಇಲ್ಲಿ ನಮ್ಮ ಭಾರತದ ಯಾವ ನಗರದಲ್ಲಿ ಹೇಗಿದೆ ಪೆಟ್ರೋಲ್ ದರ? ಯಾರು ಹೆಚ್ಚಿಗೆ ಪಾವತಿಸುತ್ತಾರೆ? ಎಲ್ಲಿ ಅಗ್ಗ? ಎಂದೆಲ್ಲಾ ತಿಳಿದುಕೊಳ್ಳುವ ಕುತೂಹಲವಾ? ಒಂದಂತೂ ಸತ್ಯ, ಭಾರತದಲ್ಲಿ ಪೆಟ್ರೋಲ್ ಅತ್ಯಂತ ದುಬಾರಿ ಕಣ್ರೀ. ಕೆಲವೇ ರಾಷ್ಟ್ರಗಳಲ್ಲಿ ಈ ಪಾಟಿ ಬೆಲೆಯಿದೆ ಅಷ್ಟೆ.
ಇನ್ನು ಬೆಂಗಳೂರಿನಲ್ಲಿ ಬೆಲೆ ಜಾಸ್ತಿಯೇ. ಮೂರನೇ ಸ್ಥಾನದಲ್ಲಿದೆ. ಅಸ್ಸಾಂನ ಗೌಹಾಟಿಯಲ್ಲಿ ಪೆಟ್ರೋಲ್ ಬೆಲೆ 1 ಲೀಟರಿಗೆ 73.55 ರೂ. ಇದ್ದು, ಅತ್ಯಂತ ಕಡಿಮೆ ರೇಟಿಗೆ ಸಿಗುವುದು ಇಲ್ಲೇ. ಅತಿ ಹೆಚ್ಚು ದುಬಾರಿಯಾಗಿರುವುದು ಸೊಲ್ಲಾಪುರದಲ್ಲಿ. ಇಲ್ಲಿ ಪೆಟ್ರೋಲ್ ಬೆಲೆ 1 ಲೀಟರಿಗೆ 81.16 ರೂ. ಇದೆ.
ಸುಮ್ಮನೆ ಹಾಗೇ ಹೇಳುವುದಾದರೆ, ಬಹುತೇಕ ದ್ವಿಚಕ್ರ ವಾಹನ ಸವಾರರು ಅಪಘಾತದಲ್ಲಿ ಮೃತಪಡಲು ಅವರು ಹೆಲ್ಮೆಟ್ ಧರಿಸದೇ ಇರುವುದು ಕಾರಣ ಎಂದು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಸರಕಾರ ಎಲ್ಲ ಪೆಟ್ರೋಲ್ ಬಂಕ್ ಗಳಲ್ಲಿ ಹೆಲ್ಮೆಟ್ ಧರಿಸಿದ ಸವಾರರಿಗೆ ಮಾತ್ರವೇ ಪೆಟ್ರೋಲ್ ವಿತರಿಸುವ ಕಾನೂನು ಜಾರಿಗೆ ತರುವ ಬಗ್ಗೆ ನೆರೆಯ ಕೇರಳ ಚಿಂತಿಸುತ್ತಿದೆ.

ಸೊಲ್ಲಾಪುರದಲ್ಲಿ ಅತಿ ಹೆಚ್ಚು ದುಬಾರಿ
ಸೊಲ್ಲಾಪುರ:
ಪೆಟ್ರೋಲ್ ಬೆಲೆ 1 ಲೀಟರಿಗೆ 81.16 ರೂ.

ಕೋಲ್ಕೊತ್ತಾ ನಂಬರ್- 2
ಪೆಟ್ರೋಲ್ ಬೆಲೆ 1 ಲೀಟರಿಗೆ 75.84 ರೂ.

ಬೆಂಗಳೂರು ನಂಬರ್- 3
ಬೆಂಗಳೂರು ನಂಬರ್- 3
ಪೆಟ್ರೋಲ್ ಬೆಲೆ 1 ಲೀಟರಿಗೆ 75.50 ರೂ.

ಪುಣೆ (ಮಹಾರಾಷ್ಟ್ರ)- ನಂಬರ್ 4
ಪುಣೆ (ಮಹಾರಾಷ್ಟ್ರ)
ಪೆಟ್ರೋಲ್ ಬೆಲೆ 1 ಲೀಟರಿಗೆ 75.49 ರೂ.

ಜಲಂಧರ್ (ಪಂಜಾಬ್) ನಂಬರ್- 5
ಪೆಟ್ರೋಲ್ ಬೆಲೆ 1 ಲೀಟರಿಗೆ 75.45 ರೂ.

ಭೋಪಾಲ್ (ಮಧ್ಯಪ್ರದೇಶ) ನಂಬರ್- 6
ಪೆಟ್ರೋಲ್ ಬೆಲೆ 1 ಲೀಟರಿಗೆ 75.26 ರೂ.

ಹೈದರಾಬಾದ್ ನಂಬರ್- 7
ಪೆಟ್ರೋಲ್ ಬೆಲೆ 1 ಲೀಟರಿಗೆ 74.59 ರೂ.

ಮುಂಬೈ ನಂಬರ್- 8
ಪೆಟ್ರೋಲ್ ಬೆಲೆ 1 ಲೀಟರಿಗೆ 74.00 ರೂ.

ಶ್ರೀನಗರ ನಂಬರ್- 9
ಪೆಟ್ರೋಲ್ ಬೆಲೆ 1 ಲೀಟರಿಗೆ 73.68 ರೂ.

ಗೌಹಾಟಿ (ಅಸ್ಸಾಂ) ನಂಬರ್- 10
ಪೆಟ್ರೋಲ್ ಬೆಲೆ 1 ಲೀಟರಿಗೆ 73.55 ರೂ












Click it and Unblock the Notifications