ಯಲಹಂಕ : ಒಂಟಿ ಮಹಿಳೆ ಕತ್ತು ಸೀಳಿ ಕೊಲೆ

Sujatha Reddy,
ಬೆಂಗಳೂರು, ಮಾ.21 : ನಗರದ ಚಾಮರಾಜಪೇಟೆಯ ಗೃಹಿಣಿ ಮಾನಸ ಹತ್ಯೆಯ ನೆನಪು ಇನ್ನೂ ಮಾಸಿಲ್ಲ, ಅಷ್ಟರಲ್ಲೇ ಯಲಹಂಕ ಬಳಿಯ ಯಶೋಧ ನಗರದಲ್ಲಿ ಒಂಟಿ ಮಹಿಳೆಯೊಬ್ಬರನ್ನು ಕತ್ತು ಸೀಳಿ ಕೊಲೆ ಮಾಡಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಯಶೋಧ ನಗರದ ನಿವಾಸಿಯಾದ ಸುಜಾತ (45) ಕೊಲೆಯಾದ ಗೃಹಿಣಿ. ಮಂಗಳವಾರ ರಾತ್ರಿ ಸುಜಾತ ಮನೆಗೆ ಆಗಮಿಸಿರುವ ದುಷ್ಕರ್ಮಿಗಳು ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ. ಬುಧವಾರ ಮಧ್ಯಾಹ್ನ ಸಜಾತ ಅವರ ಸಂಬಂಧಿ ಅವರ ಮನೆಗೆ ಆಗಮಿಸಿದಾಗ ಕೊಲೆಯಾಗಿರುವುದು ತಿಳಿದು ಬಂದಿದೆ.

ರಿಯಲ್ ಎಸ್ಟೇಟ್ ವ್ಯವಹಾರ : ಮೂಲತಃ ಮುಳುಬಾಗಿಲು ತಾಲೂಕಿನ ಸುಜಾತ ಅವರ ಪತಿ ನಾಲ್ಕು ವರ್ಷಗಳ ಹಿಂದೆ ಸಾವನ್ನಪ್ಪಿದ್ದರು. ನಂತರ ಸಜಾತ ಒಂಟಿಯಾಗಿ ಜೀವನ ನಡೆಸುತ್ತಿದ್ದರು. ಇಬ್ಬರು ಹೆಣ್ಣು ಮಕ್ಕಳಿಗೂ ಮದುವೆ ಮಾಡಿಕೊಟ್ಟಿದ್ದ ಇವರು ರಿಯಲ್ ಎಸ್ಟೇಟ್ ಮತ್ತು ಸೀರೆ ವ್ಯಾಪಾರ ನಡೆಸುತ್ತಿದ್ದರು.

ಕೊಲೆ ಮಾಡಿರುವುದು ಪರಿಚಿರತರೇ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಸುಜಾತ ಮನೆಯಲ್ಲಿ ಕುಡಿದು ಬಿಸಾಡಿದ ಮದ್ಯದ ಬಾಟಲಿಗಳು ಪತ್ತೆಯಾಗಿದ್ದು, ಇವರ ಮನೆಯಲ್ಲಿನ ಪರಿಚಿತರು ರಿಯಲ್ ಎಸ್ಟೇಸ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಜಗಳ ಮಾಡಿಕೊಂಡು ಕೊಲೆ ಮಾಡಿರಬಹುದು ಎಂದು ಪೊಲೀಸರು ಹೇಳಿದ್ದಾರೆ.

ಬುಧವಾರ ಸುಜಾತ ಅವರು ಮುಳುಬಾಗಿಲಿಗೆ ತೆರಳಬೇಕಾಗಿತ್ತು. ಆದ್ದರಿಂದ ಸಂಬಂಧಿಕರ ಹುಡುಗನಿಗೆ ಕರೆ ಮಾಡಿ ಮನೆಗೆ ಬರುವಂತೆ ಹೇಳಿದ್ದರು. ಸಂಬಂಧಿ ಹುಡುಗ ಬುಧವಾರ ಮಧ್ಯಾಹ್ನ ಮನೆಗೆ ಬಂದಾಗ ಸುಜಾತ ಅವರು ಕೊಲೆಯಾಗಿರುವ ವಿಷಯ ತಿಳಿದುಬಂದಿದೆ.

ಸುಜಾತ ಅವರ ಕತ್ತನ್ನು ಸೀಳಿ ಕೊಲೆ ಮಾಡಲಾಗಿದೆ. ನೀರಿನ ಟ್ಯಾಂಕ್ ಬಳಿ ಅವರ ಶವ ವಿವಸ್ತ್ರವಾಗಿ ಪತ್ತೆಯಾಗಿದ್ದು, ಹಲವಾರು ಅನುಮಾನಗಳನ್ನು ಹುಟ್ಟುಹಾಕಿದೆ. ಯಲಹಂಕ ಪೊಲೀಸರು ಸ್ಥಳಕ್ಕೆ ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ್ದ ನೈರುತ್ಯ ವಲಯದ ಡಿಸಿಪಿ ಟಿ.ಆರ್.ಸುರೇಶ್ ಪರಿಚಿತರೇ ಕೊಲೆ ಮಾಡಿರುವ ಶಂಕೆಯಿದೆ. ಪ್ರಾಥಮಿಕ ತನಿಖೆಯಿಂದ ಪರಿಚಿತರ ಕೃತ್ಯ ಎಂಬುದು ದೃಢ ಪಟ್ಟಿದೆ. ಆರೋಪಿಗಳನ್ನು ಶೀಘ್ರದಲ್ಲೇ ಬಂದಿಸುತ್ತೇವೆ ಎಂದು ಹೇಳಿದ್ದಾರೆ.

ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+