ಯಡಿಯೂರಪ್ಪ ಪರಮಾಪ್ತ ಬಿಜೆಪಿಯಿಂದಲೇ ಸ್ಪರ್ಧೆ

ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಗೊಂಡಿರುವುದನ್ನು ಸ್ವಾಗತಿಸಿದ ಸಚಿವ ರೇಣುಕಾಚಾರ್ಯ, ಒಂದೇ ಹಂತದಲ್ಲಿ ಚುನಾವಣೆ ನಡೆಯುತ್ತಿರುವುದು ಒಳ್ಳೆಯದು. ಬಿಜೆಪಿ ಚುನಾವಣೆಗೆ ಸಂಪೂರ್ಣ ಸಿದ್ಧವಾಗಿದೆ. ನಾನು ಬಿಜೆಪಿಯಿಂದಲೇ ಚುನಾವಣೆಗೆ ಸ್ಪರ್ಧಿಸುತ್ತೇನೆ. ನಾನು ಬಿಜೆಪಿಯಲ್ಲೇ ಇರುತ್ತೇನೆ ಎಂದರು.
ಕೆಜೆಪಿ ಮುಖಂಡ ಧನಂಜಯ್ ಕುಮಾರ್ ಅವರು ರೇಣುಕಾಚಾರ್ಯ ಸೇರಿದಂತೆ ಇತರರು ಕೆಜೆಪಿ ಸೇರುತ್ತಾರೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಧನಂಜಯ್ ಕುಮಾರ್ ಅವರು ನನ್ನ ಪರವಾಗಿ ಮಾತನಾಡುವಂತೆ ನಾನು ಜಿಪಿಎ ಮಾಡಿಕೊಟ್ಟಿಲ್ಲ. ಅವರು ನನ್ನ ವಕ್ತಾರರೂ ಅಲ್ಲ, ಸುಮ್ಮನೆ ಕೆಲಸವಿಲ್ಲದೆ ಏನೇನೋ ಮಾತನಾಡುವುದು ಅವರ ಖಯಾಲಿ. ಅವರ ಮಾತನ್ನು ಯಾರು ನಂಬಬಾರದು ಎಂದು ರೇಣುಕಾಚಾರ್ಯ ಮನವಿ ಮಾಡಿದರು.
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಬಗ್ಗೆ ನನಗೆ ಈಗಲೂ ಅಪಾರ ಗೌರವವಿದೆ. ಆದರೆ, ನಾನು ಬಿಜೆಪಿಯಿಂದಲೇ ಸ್ಪರ್ಧಿಸುತ್ತೇನೆ ಈ ಬಗ್ಗೆ ಜನರು ಯಾವುದೇ ಅನುಮಾನ ಇಟ್ಟುಕೊಳ್ಳುವುದು ಬೇಡ ಎಂದರು.
ಅಬಕಾರಿ ಸಚಿವನಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದೇನೆ. ಅಬಕಾರಿ ಇಲಾಖೆ ಆದಾಯ ಹೆಚ್ಚಿದೆ. ಸೋರಿಕೆ ತಡೆಗಟ್ಟಿದ್ದೇನೆ. ಸರ್ಕಾರದ ಬೊಕ್ಕಸಕ್ಕೆ ಹೆಚ್ಚಿನ ಆದಾಯ ತಂದುಕೊಟ್ಟ ತೃಪ್ತಿ ಇದೆ. ನಾನು ಅಬಕಾರಿ ಸಚಿವನಾದಾಗ ಅಬಕಾರಿ ಆದಾಯ 7200 ಕೋಟಿ ರು ಇತ್ತು. ಈ ವರ್ಷ 11300 ಕೋಟಿ ರು ಆದಾಯ ಗಳಿಸುವ ಗುರಿ ಇದೆ ಎಂದರು.
ದಿನದ ಬೆಳವಣಿಗೆ: ಚಾಮರಾಜನಗರದ ಅರ್ಥಶಾಸ್ತ್ರ ಉಪನ್ಯಾಸಕ ಮಲ್ಲಿಕಾರ್ಜುನಪ್ಪ ತಮ್ಮ ರಾಜೀನಾಮೆ ಪತ್ರವನ್ನು ಸಭಾಪತಿ ಶಂಕರಮೂರ್ತಿ ಅವರಿಗೆ ಕಳಿಸಿ ಕೆಜೆಪಿಗೆ ಸೇರ್ಪಡೆ. ಉಮೇಶ್ ಕತ್ತಿ, ಮುರುಗೇಶ್ ನಿರಾಣಿ ಅವರು ಬೆಳಗಾವಿಯಲ್ಲಿ ವಿದ್ಯುಕ್ತವಾಗಿ ಕರ್ನಾಟಕ ಜನತಾ ಪಕ್ಷ ಸೇರುವ ಮಾಹಿತಿ ಪಕ್ಕಾ ಆಗಿದೆ ಸುದ್ದಿ ವಿವರ ಇಲ್ಲಿದೆ











Click it and Unblock the Notifications