ಕತ್ತಿ, ನಿರಾಣಿ ಕೆಜೆಪಿ ಸೇರ್ಪಡೆ Confirm ಆಯ್ತು
ಬೆಳಗಾವಿ, ಮಾರ್ಚ್ 20: ಇನ್ನೇನು ಕಲವೇ ಗಂಟೆಗಳಲ್ಲಿ ರಾಜ್ಯ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಘೋಷಣೆಯಾಗಲಿದ್ದು, ರಾಜ್ಯದಲ್ಲಿ ರಾಜಕೀಯ ಧ್ರುವೀಕರಣಗಳಿಗೆ ನಿರ್ಣಾಯಕ ತಿರುವು ಸಿಕ್ಕಿದೆ. ಮುಖ್ಯವಾಗಿ ಆಡಳಿತಾರೂಢ ಬಿಜೆಪಿ ಪಕ್ಷದಲ್ಲಿ ಚಟುವಟಿಕೆ ಹೆಚ್ಚಾಗಿದ್ದು ಅನೇಕ ಶಾಸಕರು, ಮೇಲ್ಮನೆ ಸದಸ್ಯರು, ಸಚಿವರು ಬಿಜೆಪಿಯಿಂದ ಹೊರಟು ನಿಂತಿದ್ದಾರೆ.
* ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ- May 5, 2013
* ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ- May 8, 2013
ಇದರ ಪರಿಣಾಮವಾಗಿ ತಕ್ಷಣಕ್ಕೆ ಕೆಜೆಪಿಯಲ್ಲಿ ವಿದ್ಯುತ್ ಸಂಚಲನವುಂಟಾಗಿದೆ. ಹೊಸದಾಗಿ ಕೆಜೆಪಿ ಪಕ್ಷವನ್ನು ಹುಟ್ಟುಹಾಕಿದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಮ್ಮ ಶಕ್ತಿ ಪ್ರದರ್ಶನಕ್ಕೆ ಅಂತಿಮ ಹೋರಾಟ ನಡೆಸಿದ್ದು, ಅದರಲ್ಲಿ ಸಾಕಷ್ಟು ಯಶಸ್ವಿಯಾಗಿದ್ದಾರೆ. ಯಡಿಯೂರಪ್ಪ ಹವಾ ತುಸು ಜೋರಾಗಿಯೇ ಬೀಸುತ್ತಿದೆ.

ಇತ್ತ ಚಾಮರಾಜನಗರದ ಅರ್ಥಶಾಸ್ತ್ರ ಉಪನ್ಯಾಸಕ ಮಲ್ಲಿಕಾರ್ಜುನಪ್ಪ ತಮ್ಮ ರಾಜೀನಾಮೆ ಪತ್ರವನ್ನು ಸಭಾಪತಿ ಶಂಕರಮೂರ್ತಿ ಅವರಿಗೆ ಕಳಿಸಿಕೊಟ್ಟಿದ್ದು, ಬಿಜೆಪಿಗೆ ಗುಡ್ ಬೈ ಹೇಳಿಯಾಗಿದೆ. ಇನ್ನು, ನಿರಾಣಿ, ಕತ್ತಿ ಅವರುಗಳು ಮುಂದಿನ ವಾರದಲ್ಲಿ ಅಧಿಕೃತವಾಗಿ ಕೆಜೆಪಿಗೆ ಸೇರ್ಪಡೆಯಾಗಲಿದ್ದಾರೆ.
ಕೆಜೆಪಿ ಪಕ್ಷದ ವತಿಯಿಂದ ಹಾವೇರಿಯಲ್ಲಿ ಆಯೋಜಿಸಿದ್ದಂತಹ ಬೃಹತ್ ಸಮಾವೇಶವನ್ನು ಮುಂದಿನ ವಾರ ಬೆಳಗಾವಿಯಲ್ಲಿಯೂ ಆಯೋಜಿಸಲಾಗಿದ್ದು ಅಂದು ಬಿಜೆಪಿ ಮಂದಿ ಸಾರಾಸಗಟಾಗಿ ಕೆಜೆಪಿಗೆ ಎಂಟ್ರಿ ಕೊಡಲಿದ್ದಾರೆ ಎಂದು ಆ ಪಕ್ಷದ ಮೂಲಗಳು ತಿಳಿಸಿವೆ.
ನಾಲ್ಕಾರು ಬಾರಿ ಈಗಾಗಲೇ ಶಾಸಕರಾಗಿ ಆಯ್ಕೆಯಾಗಿರುವ ಉಮೇಶ್ ಕತ್ತಿ ಪಕ್ಷಾಂತರ ಮಾಡುವುದನ್ನೇ ಹವ್ಯಾಸವಾಗಿಸಿಕೊಂಡಿದ್ದು, ಈ ಬಾರಿ ಕೆಜೆಪಿಯಿಂದ ಸ್ಪರ್ಧಿಸಲಿದ್ದಾರೆ. ಅದೇ ರೀತಿ ನಿರಾಣಿ ಅವರು ಜಮಖಂಡಿಯಿಂದ ಕೆಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ಬಹುತೇಕ ನಿಶ್ಚಿತವಾಗಿದೆ.
ಬೆಳಗಾವಿಯಲ್ಲಿ ಉತ್ತರದಿಂದ ಶಂಕರೇಗೌಡ ಪಾಟೀಲ್ ಮತ್ತು ದಕ್ಷಿಣದಿಂದ ಶ್ರೀ ಸಾಯಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಜನಾನುರಾಗಿ ವೈದ್ಯ, ಡಾ. ಎಸ್ಎಂ ದೊಡ್ಡಮನಿ ಅವರು ಕೆಜೆಪಿಯಿಂದ ಕಣಕ್ಕಿಳಿಯುವುದು ತೀರ್ಮಾನವಾಗಿದೆ.
ಈ ಮಧ್ಯೆ, ಸೋಮಣ್ಣ, ರೇಣುಕಾಚಾರ್ಯ ಮತ್ತು ಬಸವರಾಜ ಬೊಮ್ಮಾಯಿ ಅವರ ಕಥೆಯೇನಾಯಿತು ಎಂಬುದು ಇಂಟರೆಸ್ಟಿಂಗ್ ಆಗಿದೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications