ಕೆಜೆಪಿ ಕೈಹಿಡಿಯಲಿರುವ ಬೆಳಗಾವಿ ದೊರೆ ಕೋರೆ
ಬೆಳಗಾವಿ, ಮಾರ್ಚ್ 20: ಏನೋ ಮಾಡಲು ಹೋಗಿ ಏನು ಮಾಡಿದೆ ನೀನು ಎನ್ನುವ ಪರಿಸ್ಥಿತಿ ಕೆಎಲ್ಇ ಮಹಾಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರಭಾಕರ ಕೋರೆ ಅವರದ್ದಾಗಿದೆ.
* ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ- May 5, 2013
* ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ- May 8, 2013
ಒಂದು ರೀತಿ, ಕಾಯಂ ಮೇಲ್ಮನೆ ಸದಸ್ಯರಾಗಿರುವ (ರಾಜ್ಯಸಭೆ ಬಿಜೆಪಿ ಸದಸ್ಯ) ಡಾ. ಬಿ ಪ್ರಭಾಕರ ಕೋರೆ ಅವರು 'ಯಡಿಯೂರಪ್ಪ ನನ್ನ ನಾಯಕರು, ನನಗೆ ತುಂಬಾ ಆಪ್ತರು, ನನ್ನ ಮಾತಿಗೆ ಕಿವಿಗೊಡುತ್ತಾರೆ' ಎಂದು ಯಡಿಯೂರಪ್ಪ ಅವರನ್ನು ಮರಳಿ ಬಿಜೆಪಿ ಗೂಡಿಗೆ ಕರೆತರುವ ಪ್ರಯತ್ನದಲ್ಲಿ ...
ಯಡಿಯೂರಪ್ಪ ವಶೀಕರಣದಲ್ಲಿ ಡಾ. ಕೋರೆ: ಕೆಜೆಪಿ ಅಂಗಳಕ್ಕೆ ಕಾಲಿರಿಸಿದ್ದ ಸನ್ಮಾನ್ಯ ಪ್ರಭಾಕರ್ ಕೋರೆ ಅಲ್ಲೇ 'ಎಡವಿ' ಬಿದ್ದಿದ್ದಾರೆ. ಮತ್ತು ಅಲ್ಲಿಂದ ಸ್ವತಃ ಎದ್ದು, ಮತ್ತೆ ಬಿಜೆಪಿ ಹೊಸ್ತಿಲು ತುಳಿಯುವ ಉಮೇದಿಯೂ ಅವರಲ್ಲಿಲ್ಲ ಎಂದು ಕೆಜೆಪಿ ಮೂಲಗಳು ಅರುಹಿವೆ. ಅದು ಯಜಮಾನ್ ಯಡಿಯೂರಪ್ಪನವರ ಕೆಪಾಸಿಟಿ ಎಂದೂ ಕೆಜೆಪಿ ಮಂದಿ ಎದೆತಟ್ಟಿಕೊಂಡು ಹೇಳುತ್ತಿದ್ದಾರೆ.

ಆರಂಭದಿಂದಲೂ ಯಡಿಯೂರಪ್ಪ ಅವರ ಜತೆಗೇ ಗುರುತಿಸಿಕೊಂಡಿರುವ ಬೆಳಗಾವಿಯ ಅನಭಿಶಕ್ತ ದೊರೆ ಕೋರೆ ಅವರು ಪ್ರಸ್ತುತ ತಮ್ಮಾಸ್ಪತ್ರೆಯ ಬೆಡ್ ಮೇಲೆ ಮಲಗಿರುವ ಸಿಸಿ ಪಾಟೀಲ ಸೇರಿದಂತೆ ಬಿಜೆಪಿಯ ಅನೇಕ ಧೀಮಂತ ಸಚಿವರು/ಶಾಸಕರನ್ನು ಕೆಜೆಪಿಗೆ ಕರೆತರುವ ಸಂಧಾನ ಕಾರ್ಯದಲ್ಲಿ ತೊಡಗಿದ್ದಾರೆ ಎಂಬುದು ಬಿಜೆಪಿ ಮಂದಿಗೆ ತಡವಾಗಿ ಅರಿವಿಗೆ ಬಂದಂತಿದೆ.
'ಹವ್ಯಾಸಿ ಪಕ್ಷಾಂತರಿ' ಉಮೇಶ್ ಕತ್ತಿ :
ತಮ್ಮೂರಿನವರೇ ಆದ 'ಹವ್ಯಾಸಿ ಪಕ್ಷಾಂತರಿ' ಉಮೇಶ್ ಕತ್ತಿ ಅವರನ್ನು ಕೋರೆ ಸಾಹೇಬರು ಈಗಾಗಲೇ ಕೆಜೆಪಿ ಅಂಗಳಕ್ಕೆ ಕರೆ ತಂದುಬಿಟ್ಟಿದ್ದಾರೆ ಎನ್ನಲಾಗಿದೆ. ಇದೇ ವೇಳೆ ನಿರಾಣಿ ಕೆಜೆಪಿ ಸೇರುವುದು ಆಖೈರಾಗಿದ್ದು, ಕನಿಷ್ಠ ಇನ್ನೂ ಮೂರ್ನಾಲ್ಕು ಶಾಸಕರನ್ನು ಕೆಜೆಪಿಗೆ ಕರೆತರುವ ಹೊಣೆಗಾರಿಕೆ ಕೋರೆ ಅವರ ಹೆಗಲೇರಿದೆ ಎನ್ನಲಾಗಿದೆ. ಜತೆಗೆ ಬೆಳಗಾವಿಯಲ್ಲಿ ಬೃಹತ್ ಸಮಾವೇಶ ಏರ್ಪಡಿಸಿ, ಬಿಜೆಪಿ ನಾಯಕರ ಕೆಜೆಪಿ ಸೇರ್ಪಡೆಗೆ ವೇದಿಕೆಯೊದಗಿಸುವ ಜವಾಬ್ದಾರಿಯನ್ನೂ ಅವರೇ ಹೊತ್ತಿದ್ದಾರೆ !
ಈ ಸೇರ್ಪಡೆ ಕಾರ್ಯಕ್ರಮವೂ ಅಂತಿಮಗೊಂಡಿದ್ದು, ಚುನಾವಣೆ ನೀತಿ ಸಂಹಿತೆ ಜಾರಿಯಾಗುತ್ತಿದ್ದಂತೆ ಕೆಜೆಪಿ ಮಂದಿ ಗುಳೆ ಎದ್ದುಬರುವುದು ನಿಶ್ಚಿತ ಎಂದು ಕೆಎಲ್ಇ ಆಸ್ಪತ್ರೆಯ ದಾದಿಯರು ಪಿಸುಗುಟ್ಟುತ್ತಿದ್ದಾರೆ.
ನೀವೇ ಆಗಿರಿ ಕರ್ನಾಟಕದ ಗುರು | ಮತ ಹಾಕ್ತೀನಂತ ಪ್ರಮಾಣ ಮಾಡಿ












Click it and Unblock the Notifications