ರೇಪ್ ಯತ್ನ: ಬಾಲ್ಕನಿಯಿಂದ ಹಾರಿದ ವಿದೇಶಿ ಯುವತಿ

ಆಗ್ರಾ ಪ್ರವಾಸಕ್ಕೆಂದು ಬಂದಿದ್ದ ಬ್ರಿಟನ್ನಿನ ಯುವತಿ ಹೋಟೆಲೊಂದರ ಮೊದಲ ಮಹಡಿಯ ರೂಮಿನಲ್ಲಿ ತಂಗಿದ್ದರು. ಆಕೆ ಒಬ್ಬಂಟಿಯಾಗಿರುವುದನ್ನು ಅರಿತ ಅದೇ ಹೋಟೆಲಿನವ ಬಲವಂತವಾಗಿ ಆಕೆಯ ರೂಮಿಗೆ ಪ್ರವೇಶಿದ್ದಾನೆ. ಒಳಬಂದವನೆ ಆಕೆಯ ಮೇಲೆ ಬಲಾತ್ಕಾರಕ್ಕೆ ಯತ್ನಿಸಿದ್ದಾನೆ.
ಇದರಿಂದ ಗಾಬರಿಗೆ ಬಿದ್ದ ಯುವತಿ ಬಾಲ್ಕಿನಿಯತ್ತ ಓಡಿಹೋಗಿ ಅಲ್ಲಿಂದ ಕೆಳಕ್ಕೆ ಹಾರಿದ್ದಾಳೆ. ಯುವತಿ ತಲೆಗೆ ತೀವ್ರ ಪೆಟ್ಟು ಬಿದ್ದಿದ್ದು, ಆಕೆಯ ಎರಡೂ ಕಾಲುಗಳು ಮುರಿದಿವೆ. ಯುವತಿಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಆಕೆಯ ಮೇಲೆ ಬಲಾತ್ಕಾರಕ್ಕೆ ಯತ್ನಿಸಿದ ವ್ಯಕ್ತಿಯನ್ನು ಚೌಹಾನ್ ಎಂದು ಗುರುತಿಸಲಾಗಿದೆ. ಸದರಿ ಆರೋಪಿ ಹೋಟೆಲಿನ ಮಾಲೀಕನಾಗಿದ್ದಾನೆ. ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಶುಕ್ರವಾರ ರಾತ್ರಿ ಮಧ್ಯಪ್ರದೇಶದಲ್ಲಿ ಸಂಗಾತಿ ಜತೆ ರಿಕ್ಷಾ ಸೈಕಲ್ಲಿನಲ್ಲಿ ಪ್ರವಾಸಿ ತಾಣಗಳನ್ನು ವೀಕ್ಷಿಸುತ್ತಿದ್ದ ಸ್ವೀಡನ್ ಮಹಿಳೆಯ ಮೇಲೆ ಕಾಮುಕರು ಸಾಮೂಹಿಕ ಅತ್ಯಾಚಾರ ನಡೆಸಿದ್ದರು. ಭಾರತದಲ್ಲಿ ಪ್ರವಾಸದಲ್ಲಿರುವ ತನ್ನ ಪ್ರಜೆಗಳಿಗೆ ಎಚ್ಚರದಿಂದಿರುವಂತೆ ಸ್ವೀಡನ್ ಸರಕಾರ ಎಚ್ಚರಿಸಿದೆ.












Click it and Unblock the Notifications